ಬೆಂಗಳೂರು: ಚಾಮರಾಜಪೇಟೆ (Chamarajpet) ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಬಿಸಿತುಪ್ಪವಾದಂತ್ತಾಗಿದೆ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಕುರಿತು ಪೊಲೀಸ್ ಇಲಾಖೆಯಲ್ಲಿ ಸಾಧಕ ಬಾದಕಗಳ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಅನುಮತಿ ಕೊಟ್ಟರೇ ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಲ್ಲ. ಇದು ಇಡೀ ರಾಜ್ಯಕ್ಕೆ ಪಸರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ರಾಜ್ಯದ ಪ್ರತಿಯೊಂದು ವಿವಾದಿತ ಜಾಗದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಕೇಳುವ ಸಾಧ್ಯತೆಯಿದ್ದು, ರಾಜ್ಯದ ಪ್ರತಿಯೊಂದು ವಿವಾದಿತ ಜಾಗದಲ್ಲಿ ಗಣೇಶ ಕೂರಿಸಲು ಅನುಮತಿ ಕೇಳ್ತಾರೆ. ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇರುತ್ತೆ. ಇದು ಬೇರೆ ರೀತಿಯ ಘಟನೆಗಳನ್ನ ಸೃಷ್ಟಿ ಮಾಡಲು ಅವಕಾಶ ನೀಡಿದಂತಾಗುತ್ತೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗುವ ಸಾಧ್ಯತೆಯೇ ಹೆಚ್ಚು. ಹೀಗೆ ಹಲವು ಆಯಾಮಗಳಲ್ಲಿ ಪೊಲೀಸರು ಚರ್ಚೆ ಮಾಡುತ್ತಿದ್ದಾರೆ.
ಇದೇ ವೇಳೆ ಗಣೇಶೋತ್ಸವ ಕುರಿತು ತಮ್ಮ ವ್ಯಾಪ್ತಿಯ ಪ್ರತಿ ಏರಿಯಾ ಮಾಹಿತಿ ಕಲೆ ಹಾಕಲು ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಸೂಚನೆ ನೀಡಲಾಗಿದೆ. ಗಣೇಶೋತ್ಸವ ಆಚರಣೆ ಮಾಡುತ್ತಿರುವುದು ಯಾರು. ಎಲ್ಲಿ ಆಚರಣೆ ಮಾಡುತ್ತಿದ್ದಾರೆ, ಬಿಬಿಎಂಪಿ ಅನುಮತಿ ಪಡೆದಿದ್ದಾರಾ, ಸ್ಥಳ ಖಾಸಗಿಯವರಿಗೆ ಸೇರಿದ್ದ, ಅಥವಾ ಬಿಬಿಎಂಪಿ ಜಾಗನಾ, ರಸ್ತೆನಾ, ಏನೆಲ್ಲಾ ವ್ಯವಸ್ಥೆ ಮಾಡಿದ್ದಾರೆ. ಗಣೇಶ ಕೂರಿಸುವ ಏರಿಯಾ ಎಂತಹುದು, ಅಲ್ಲಿ ವಿವಾದಗಳು ಏನಾದ್ರು ಇದಿಯಾ, ಎಷ್ಟು ಜನ ಸೇರಬಹುದು, ಸ್ಥಳಾವಕಾಶ ಹೇಗಿದೆ, ಮೈಕ್ ಸೆಟ್, ಆರ್ಕೆಸ್ಟ್ರಾ ಬಳಕೆ ಮಾಡ್ತಾರಾ ಹೀಗೆ ಹಲವು ಮಾಹಿತಿಗಳನ್ನ ಕಲೆ ಹಾಕಲು ಠಾಣಾವಾರು ಇನ್ಸ್‌ಪೆಕ್ಟರ್ ಎಸಿಪಿಗಳಿಗೆ ಸೂಚನೆ ನೀಡಿದ್ದು, ನಗರದ ಯಾವ ಏರಿಯಾದಲ್ಲೂ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಪಾದರಾಯನಪುರದಿಂದ ಟೌನ್ ಹಾಲ್ವರೆಗೆ ಬೃಹತ್ ಮೆರವಣಿಗೆ
ತೀವ್ರ ಕುತೂಹಲ ಕೆರಳಿಸಿದ ಚಾಮರಾಜಪೇಟೆ ಗಣೇಶೋತ್ಸವಕ್ಕೆ ಸದ್ಯ ಗಣೇಶ ಮೆರವಣಿಗೆಗೆ ರೋಡ್ ಮ್ಯಾಪ್ ಸಿದ್ದವಾಗಿದೆ.
ಚಾಮರಾಜಪೇಟೆ ಗಣೇಶೋತ್ಸವ ಸಮಿತಿ ಮತ್ತು ಬೆಂಗಳೂರು ಮಹಾನಗರ ಗಣೇಶ ಸಮಿತಿಯಿಂದ ಚಾಮರಾಜಪೇಟೆ ಕ್ಷೇತ್ರದ ಗಲ್ಲಿಗಲ್ಲಿಗಳಲ್ಲೂ ವಿನಾಯಕನ ಮೆರವಣಿಗೆ ನಡೆಯಲಿದೆ. ಪಾದರಾಯನಪುರದಿಂದ ಈ ಬಾರಿ ಗಣೇಶೋತ್ಸವದ ರ್ಯಾಲಿ ಆರಂಭವಾಗಲಿದೆ. ಚಾಮರಾಜಪೇಟೆ ಕ್ಷೇತ್ರದ ಎಲ್ಲ ವಾರ್ಡಿಗಳಲ್ಲೂ ವಿಘ್ನ ನಿವಾರಕನ ಮೆರವಣಿಗೆ ನಡೆಯಲಿದ್ದು, ಪಾದರಾಯನಪುರದಿಂದ, ಮೈಸೂರು ಬ್ಯಾಂಕ್ ಸರ್ಕಲ್ವರೆಗೆ ರ್ಯಾಲಿ ನಡೆಸಲು ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿಯಿಂದ ಕರೆ ನೀಡಲಾಗಿದೆ. ಚಾಮರಾಜಪೇಟೆ ಆಟದ ಮೈದಾನದಲ್ಲಿ 11 ದಿನದ ಗಣೇಶೋತ್ಸವಕ್ಕೆ ನಿರ್ಧರಿಸಲಾಗಿದೆ ಎಂದು ಟಿವಿ9ಗೆ ಬೆಂಗಳೂರು ಗಣೇಶ ಉತ್ಸವ ಸಮಿತಿಯ ಕಾರ್ಯದರ್ಶಿ ಪ್ರಕಾಶ್ ರಾಜು ಹೇಳಿಕೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.