Corona Vaccine For Children: ಬೆಂಗಳೂರಿನಲ್ಲಿ ಮಕ್ಕಳಿಗೂ ಸಿಗಲಿದೆ ಲಸಿಕೆ; ಎಲ್ಲಿ, ಯಾವಾಗ?

ಭಾರತೀಯ ಔಷಧಿ ನಿಯಂತ್ರಣ ಸಂಸ್ಥೆ, ಸ್ವದೇಶಿ ನಿರ್ಮಿತ ಝೈಕೋನ್ -ಡಿ ಲಸಿಕೆಗೆ ಅನುಮೋದನೆ ನೀಡಿದೆ. ಈ ಲಸಿಕೆಯನ್ನು ಗುಜರಾತ್ ಮೂಲದ ಆಸ್ಟ್ರಾಜೆನೆಕಾ ಕಂಪನಿ ತಯಾರಿಸಿದ್ದು ಬೆಳಗಾವಿ ಸೇರಿದಂತೆ 50 ಕಡೆ ಯಶಸ್ವಿಯಾಗಿ ಟ್ರಯಲ್ ಮುಗಿಸಿದೆ. ಡಿಎನ್ಎ ಪ್ಲಾಸ್ಮಾಯಿಡ್ ಆಧರಿತ ಲಸಿಕೆ ಇದ್ದಾಗಿದ್ದು. ಜುಲೈ1 ರಂದು ಲಸಿಕೆ ಅನುಮತಿಗೆ ಅರ್ಜಿ ಸಲ್ಲಿಸಲಾಗಿತ್ತು.

Corona Vaccine For Children: ಬೆಂಗಳೂರಿನಲ್ಲಿ ಮಕ್ಕಳಿಗೂ ಸಿಗಲಿದೆ ಲಸಿಕೆ; ಎಲ್ಲಿ, ಯಾವಾಗ?
ಪ್ರಾತಿನಿಧಿಕ ಚಿತ್ರ
Edited By: ಆಯೇಷಾ ಬಾನು

Updated on: Aug 22, 2021 | 7:29 AM

ಬೆಂಗಳೂರು: ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಹಿರಿಯರಿಗೆ, ವಯಸ್ಕರಿಗೆ ಲಸಿಕೆ ಹಾಕಿಸಲಾಗುತ್ತಿದೆ. ಈಗ ಇದೇ ಬೆನ್ನಲೆ ಮಕ್ಕಳಿಗೂ ಲಸಿಕೆ ಹಾಕಲು ಸರ್ಕಾರ ಮುಂದಾಗಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮೊದಲ ಕೋವಿಡ್ ಲಸಿಕೆ ‘ಝೈಕೋವ್ ಡಿ’ಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಭಾರತೀಯ ಔಷಧಿ ನಿಯಂತ್ರಣ ಸಂಸ್ಥೆ, ಸ್ವದೇಶಿ ನಿರ್ಮಿತ ಝೈಕೋನ್ -ಡಿ ಲಸಿಕೆಗೆ ಅನುಮೋದನೆ ನೀಡಿದೆ. ಈ ಲಸಿಕೆಯನ್ನು ಗುಜರಾತ್ ಮೂಲದ ಆಸ್ಟ್ರಾಜೆನೆಕಾ ಕಂಪನಿ ತಯಾರಿಸಿದ್ದು ಬೆಳಗಾವಿ ಸೇರಿದಂತೆ 50 ಕಡೆ ಯಶಸ್ವಿಯಾಗಿ ಟ್ರಯಲ್ ಮುಗಿಸಿದೆ. ಡಿಎನ್ಎ ಪ್ಲಾಸ್ಮಾಯಿಡ್ ಆಧರಿತ ಲಸಿಕೆ ಇದ್ದಾಗಿದ್ದು. ಜುಲೈ1 ರಂದು ಲಸಿಕೆ ಅನುಮತಿಗೆ ಅರ್ಜಿ ಸಲ್ಲಿಸಲಾಗಿತ್ತು. ಸದ್ಯ ಮೊನ್ನೆ ಡಿಸಿಜಿಐಯಿಂದ ಅನುಮೋದನೆ ಸಿಕ್ಕಿದೆ. ಇದೀಗ ಮಕ್ಕಳಿಗೆ ಲಸಿಕೆ ನೀಡಲು ಡಿಜಿಸಿಐ ನಿಂದ ಒಪ್ಪಿಗೆ ಬೆನ್ನಲೆ ದೇಶ್ಯಾದ್ಯಂತ ಲಸಿಕೆಗೆ ಭಾರೀ ಬೇಡಿಕೆಗೆ ಶುರುವಾಗಿದೆ. ಸಪ್ಟೆಂಬರ್ ನಿಂದ ಬೆಂಗಳೂರಿನಲ್ಲಿ ಝೈಕೋವ್ ಲಸಿಕೆಗೆ ಲಭ್ಯವಾಗುವ ಸಾಧ್ಯತೆ ಇದೆ.

ಇನ್ನು ಶೀಘ್ರದಲ್ಲೇ 12 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಝೈಕೋವ್ ಲಸಿಕೆ ಸಿಗುವ ಸಾಧ್ಯತೆ ಇದೆ. ಇದುವರೆಗೂ 18 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿತ್ತು. ಮೊದಲ ಬಾರಿಗೆ 12 ರಿಂದ 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಝೈಕೋವ್ ಡಿ‌ ಲಸಿಕೆ ಸೂಜಿ ರಹಿತ ಲಸಿಕೆಯಾಗಿದ್ದು. ಮಕ್ಕಳಿಗೆ ನೋವಾಗದಂತೆ ಮೂರು ಡೋಸ್ ಲಸಿಕೆ ನೀಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.

ಬೆಂಗಳೂರಿಗೆ ಯಾವಾಗ ಬರುತ್ತೆ ಝೈಕೋವ್ ಡಿ ಲಸಿಕೆ
ಡಿಸಿಜಿಐ ನಿಂದ ಅನುಮೋದನೆ ಸಿಕ್ಕಿರುವ ಹಿನ್ನಲೆಯಲ್ಲಿ ಕೇಂದ್ರದಿಂದ ಶೀಘ್ರದಲ್ಲೇ ಮಾರ್ಗಸೂಚಿ ಪ್ರಕಟವಾಗಲಿದೆ. ಮಾರ್ಗಸೂಚಿ ಪ್ರಕಟಗೊಂಡ ನಂತರ ರಾಜ್ಯ ಸರ್ಕಾರದಿಂದ ಅನುಮೋದನೆ ಸಿಗಲಿದೆ. ಬಳಿಕ ಬೆಂಗಳೂರಿನ ನಾಲ್ಕು ಪ್ರಸಿದ್ಧ ಖಾಸಗಿ ಆಸ್ಪತ್ರೆಗಳಲ್ಲಿ ಮೊದಲ ಲಸಿಕೆ ಬರುವ ಸಾಧ್ಯತೆ ಇದೆ. ಮಣಿಪಾಲ್, ಅಪೋಲೋ, ಕೋಲಂಬಿಯಾ ಏಷಿಯಾ ಸೇರಿದಂತೆ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಶೀಘ್ರದಲ್ಲೇ ಲಸಿಕೆ ಲಭ್ಯಯಾಗುವ ಸಾಧ್ಯತೆ ಇದೆ.

ರಷ್ಯಾದ ಸುಟ್ನಿಕ್ ಲಸಿಕೆ ಕೇವಲ ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿದ್ದು ಅದರಂತೆ ಝೈಕೋವ್ ಡಿ ಲಸಿಕೆಗೂ ಮೊದಲು ಖಾಸಗಿ ಆಸ್ಪತ್ರೆಗಳಿಗೆ ನೀಡುವ ಸಾಧ್ಯತೆ ಇದೆ. ಶಾಲೆಗಳು ಆರಂಭ ಆಗುತ್ತಿರುವ ಹಿನ್ನಲೆ ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ಪೋಷಕರು ಕರೆ ಮಾಡಿ ಲಸಿಕೆಗೆ ಡಿಮ್ಯಾಂಡ್ ಮಾಡಿದ್ದಾರೆ. ಲಸಿಕೆ ದರ ನಿಗದಿ ಆಗುತ್ತಿದ್ದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಂಚಿಕೆ ಮಾಡಲಾಗುತ್ತೆ.

ಮೊದಲು ಯಾರಿಗೆ ಲಸಿಕೆ?
ಝೈಕೋವ್ ಡಿ ಲಸಿಕೆ ಆರಂಭದಲ್ಲಿ ಎಲ್ಲರಿಗೂ ಸಿಗೋದು ಅನುಮಾನ. ಹೀಗಾಗಿ ಕೆಲ ಮಾನದಂಡಗಳನ್ನ ಸರ್ಕಾರ ಜಾರಿಗೆ ತರಲಿದೆ. ವೈದ್ಯರ ಸಲಹೆ ಮೇರೆಗೆ ಹೈ ರಿಸ್ಕ್ ಇರುವ ಮಕ್ಕಳಿಗೆ ಲಸಿಕೆ ನೀಡಲಾಗುತ್ತೆ. ಕೋಮಾರ್ಬಿಟಿಸ್ ನಿಂದ ಬಳಲುತ್ತಿರುವ ಮಕ್ಕಳಿಗೆ ಮೊದಲ ಲಸಿಕೆ ನೀಡಿ ನಂತರ ಉಳಿದ ಮಕ್ಕಳಿಗೆ ಲಸಿಕೆ‌ ಹಂಚಿಕೆ ಸಾಧ್ಯತೆ.

ಇದನ್ನೂ ಓದಿ: ಮಕ್ಕಳಿಗೆ ಶೀಘ್ರದಲ್ಲೇ ಕೊವಿಡ್ ಲಸಿಕೆ: ಯಾವ ವಯಸ್ಸಿನ ಮಕ್ಕಳಿಗೆ? ಯಾವಾಗ?

TV9 Web

TV9 Kannada

Read More
Loading...
Unable to load recommendations.
Follow Us