ಮಹಿಳಾ ಪ್ರಯಾಣಿಕರಿಗಾಗಿ ಬಸ್ ಹತ್ತಿದ ನಗರ ಪೊಲೀಸ್ ಆಯುಕ್ತರು: ಸೇಫ್ಟಿ ಐ ಲ್ಯಾಂಡ್​ ಬಗ್ಗೆ ಪ್ರಯಾಣಿಕರಲ್ಲಿ ಅರಿವು

|

Updated on: Jun 19, 2023 | 8:03 PM

ಉಚಿತ ಬಸ್ ಪ್ರಾರಂಭದ ನಂತರ ಗಲಾಟೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಪ್ರಯಾಣದ ವೇಳೆ ಏನೆಲ್ಲ ತೊಂದರೆಗಳು ಎದುರಾದಾಗ ಏನು ಮಾಡಬೇಕು ಎಂದು ಬೆಂಗಳೂರು ಪೊಲೀಸರಿಂದ ಮಹಿಳಾ ಪ್ರಯಾಣಿಕರಿಗೆ ಅರಿವು ಕಾರ್ಯಕ್ರಮ ಕೈಗೊಂಡಿದ್ದಾರೆ.

ಬೆಂಗಳೂರು: ಕಾಂಗ್ರೆಸ್​ ಸರ್ಕಾರದ ಶಕ್ತಿ ಯೋಜನೆ ಜಾತಿ ಹಿನ್ನಲೆ ಉಚಿತವಾಗಿ ಬಸ್​ನಲ್ಲಿ​ ಪ್ರಯಾಣಿಸುವವರ (passengers) ಸಂಖ್ಯೆ ಹೆಚ್ಚಾಗಿದೆ. ಉಚಿತ ಬಸ್ ಪ್ರಾರಂಭದ ನಂತರ ಗಲಾಟೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಪ್ರಯಾಣದ ವೇಳೆ ಏನೆಲ್ಲ ತೊಂದರೆಗಳು ಎದುರಾದಾಗ ಏನು ಮಾಡಬೇಕು ಎಂದು ಬೆಂಗಳೂರು ಪೊಲೀಸರಿಂದ ಮಹಿಳಾ ಪ್ರಯಾಣಿಕರಿಗೆ ಅರಿವು ಕಾರ್ಯಕ್ರಮ ಕೈಗೊಂಡಿದ್ದಾರೆ. ಮಹಿಳಾ ಪ್ರಯಾಣಿಕರಿಗಾಗಿ ನಗರದ ಇನ್ಸ್ ಪೆಕ್ಟರ್ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳಿಂದ ಅರಿವು ಕಾರ್ಯಕ್ರಮ ಮಾಡಲಾಗುತ್ತಿದೆ.

ನಗರದ ಸೇಫ್ಟಿ ಐ ಲ್ಯಾಂಡ್​ಗಳ ಕುರಿತು ಪ್ರಯಾಣಿಕರಲ್ಲಿ ತಿಳಿ ಹೇಳಲಾಯಿತು. ಇನ್ಸ್ ಪೆಕ್ಟರ್​ಗಳೊಂದಿಗೆ ಹಿರಿಯ ಅಧಿಕಾರಿಗಳು ಕೂಡ ಬಸ್ ಹತ್ತಿದ್ದು, ಶಿವಾಜಿನಗರದಿಂದ ಕನ್ನಿಂಗ್ ಹ್ಯಾಮ್ ರಸ್ತೆ, ಕಾಕ್ಸ್ ಟೌನ್, ಇಂಡಿಯನ್ ಎಕ್ಸ್ ಪ್ರೆದ್​ವರೆಗೆ ರೌಂಡ್ಸ್​​ ಹಾಕಿದ್ದಾರೆ.

ಇದನ್ನೂ ಓದಿ: ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ: ಒಂದು ವಾರದಲ್ಲಿ ಒಟ್ಟು 3,63,70,179 ಮಹಿಳೆಯರು ಪ್ರಯಾಣ

ಮಹಿಳಾ ಸುರಕ್ಷತೆ ನಮ್ಮ ಮೊದಲ ಆದ್ಯತೆ: ಆಯುಕ್ತ ಬಿ.ದಯಾನಂದ್

ಈ ವೇಳೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್​ ಮಾತನಾಡಿ, ಮಹಿಳಾ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಹೀಗಾಗಿ ಇಂದು ಇನ್ಸ್ ಪೆಕ್ಟರ್​ನಿಂದ ಹಿಡಿದು ಪೊಲೀಸ್ ಆಯುಕ್ತರವರೆಗೂ ಬಸ್ ಹತ್ತಿ ಅರಿವು ಮೂಡಿಸಿದ್ದೇವೆ. ಮಹಿಳೆಯರ ಬಳಿ ಖುದ್ದು ನಾವೇ ಮಾತನಾಡಿ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದರು.

ಮಹಿಳೆಯರಿಗೆ ತೊಂದರೆಯಾದಾಗ ಏನ್ ಮಾಡಬೇಕು. ಸೇಫ್ಟಿ ಐ ಲ್ಯಾಂಡ್​ಗಳಲ್ಲಿ ಪ್ಯಾನಿಕ್ ಬಟನ್ ಬಳಸೋದು ಹೇಗೆ? ತೊಂದರೆಯಾದಾಗ 112 ಕರೆ ಮಾಡುವುದು. ಸುರಕ್ಷಾ ಆಪ್ ಬಳಕೆ ಮಾಡುವ ವಿಧಾನ, ಹೀಗೆ ಹಲವು ಮಾಹಿತಿಯನ್ನ ಮಹಿಳೆಯರಿಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಕುರ್ಚಿಗಾಗಿ ಫೈಟ್: ಸಿದ್ದರಾಮಯ್ಯನವರೇ ಹೆಗ್ಗಣ ಬಿದ್ದಿರುವುದು ನಿಮ್ಮ ತಟ್ಟೆಯಲ್ಲಿ ಎಂದ ಆರ್ ಅಶೋಕ

ಸಾರ್ವಜನಿಕರ ಬಳಿ ನಾವೇ ಹೋಗುವುದು ಒಳ್ಳೆಯದು

ಸಾರ್ವಜನಿಕರು ನಮ್ಮ ಬಳಿ ಬರುವುದಕ್ಕಿಂತ ನಾವೇ ಅವರ ಬಳಿ ಹೋಗುವುದು ಒಳ್ಳೆಯದು. ಹೀಗಾಗಿ ಇಂದು ನಗರದ ಸರ್ಕಾರಿ ಬಸ್​ಗಳಲ್ಲಿ ಪ್ರಯಾಣ ಬೆಳೆಸಿ ಅರಿವು ಮೂಡಿಸಿದ್ದೇವೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಾನು ಶಿವಾಜಿ ನಗರದಿಂದ ದೇವನಹಳ್ಳಿಯವರೆಗೂ ಪ್ರಯಾಣ ಮಾಡಿದೆ. ಇದನ್ನ ಹೀಗೆ ಮುಂದುವರೆಸುತ್ತೇವೆ. ಶಕ್ತಿಯೋಜನೆಯಿಂದಾಗಿ ಹಲವು ಕಡೆ ಗಲಾಟೆ ಆಗುತ್ತಿದ್ದು, ಅದನ್ನ ನಮ್ಮ ಸ್ಥಳೀಯ ಪೊಲೀಸರು ಪರಿಶೀಲನೆ ಮಾಡುತ್ತಾರೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.