ಇಂಟರ್ ವ್ಯೂ ಇದೆ ಎಂದು ಹೊಟೇಲ್​ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ, ಉಪನ್ಯಾಸಕ ಅರೆಸ್ಟ್

ಬೆಂಗಳೂರಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಲೇಜು ಉಪನ್ಯಾಸಕನನ್ನು ಪೊಲೀಸರು ಬಂಧಿಸಿದ್ದಾರೆ. ಪಾರ್ಟ್ ಟೈಮ್ ಕೆಲಸ ಕೊಡಿಸುವಂತೆ ಕೇಳಿದ್ದ ವಿದ್ಯಾರ್ಥಿನಿಯನ್ನು ಎಂಜಿ ರಸ್ತೆಯಲ್ಲಿ ಇಂಟರ್ ವ್ಯೂ ಇದೆ ಎಂದು ಹೊಟೇಲ್ ಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದ ಕಾಲೇಜು ಉಪನ್ಯಾಸಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಇಂಟರ್ ವ್ಯೂ ಇದೆ ಎಂದು ಹೊಟೇಲ್​ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ, ಉಪನ್ಯಾಸಕ ಅರೆಸ್ಟ್
ಪ್ರಾತಿನಿಧಿಕ ಚಿತ್ರ
Updated By: ರಮೇಶ್ ಬಿ. ಜವಳಗೇರಾ

Updated on: Nov 14, 2023 | 8:59 AM

ಬೆಂಗಳೂರು, (ನವೆಂಬರ್ 14): ವಿದ್ಯಾರ್ಥಿನಿ(Student) ಮೇಲೆ ಲೈಂಗಿಕ ದೌರ್ಜನ್ಯ(sexual harassment) ಆರೋಪ ಮೇಲೆ ಬೆಂಗಳೂರಿನ ಗಂಗಮ್ಮನಗುಡಿ ಠಾಣೆ ಪೊಲೀಸರು ಖಾಸಗಿ ಕಾಲೇಜಿನ ಉಪನ್ಯಾಸಕನನ್ನು(college lecturer) ಬಂಧಿಸಿದ್ದಾರೆ. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಯಲಹಂಕದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕ ಮದನ್ ಕುಮಾರ್ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ. ಪಾರ್ಟ್ ಟೈಮ್ ಕೆಲಸ ಕೊಡಿಸುವಂತೆ ಕೇಳಿದ್ದ ವಿದ್ಯಾರ್ಥಿನಿಯನ್ನು ಎಂಜಿ ರಸ್ತೆಯಲ್ಲಿ ಇಂಟರ್ ವ್ಯೂ ಇದೆ ಎಂದು ಹೊಟೇಲ್ ಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಪಾರ್ಟ್ ಟೈಮ್ ಕೆಲಸ ಕೊಡಿಸುವಂತೆ ಉಪನ್ಯಾಸಕ ಮದನ್ ಕುಮಾರ್ ಅವರ ಬಳಿ ಕೇಳಿಕೊಂಡಿದ್ದಾಳೆ. ಇದನ್ನೇ ಬಂಡವಾಳ ಮಾಡಿಕೊಂಡ ಉಪನ್ಯಾಸಕ ಮದನ್, ಎಂಜಿ ರಸ್ತೆಯಲ್ಲಿ ಇಂಟರ್ ವ್ಯೂ ಇದೆ ಎಂದು ವಿದ್ಯಾರ್ಥಿನಿಯನ್ನು ಹೊಟೇಲ್ ಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾನೆ.  ಅಲ್ಲದೇ ವಿಡಿಯೋ ಮಾಡಿ ವಿದ್ಯಾರ್ಥಿನಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ.

ಹೀಗೆ ಉಪನ್ಯಾಸಕನ ನಿರಂತರ ಲೈಂಗಿಕ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿ, ಕೊನೆಗೆ ಗಂಗಮ್ಮನಗುಡಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಇದೀಗ ಈ ದೂರಿನ ಮೇರೆಗೆ ಪೊಲೀಸರು ಉಪನ್ಯಾಸಕ ಮದನ್ ಕುಮಾರ್​ನನನ್ನು ಅರೆಸ್ಟ್ ಮಾಡಿದ್ದಾರೆ.