ದೊರಕದ ಸಾಗುವಳಿ ಹಕ್ಕು ಪತ್ರ: ಸಂಸದ ಡಿ.ಕೆ.ಸುರೇಶ್ ಕಾರಿಗೆ ಮುತ್ತಿಗೆ ಹಾಕಿದ 36 ಕುಟುಂಬಗಳು

ಸಾಗುವಳಿ ಹಕ್ಕು ಪತ್ರ ದೊರಕದ ಹಿನ್ನೆಲೆ ಆಕ್ರೋಶಗೊಂಡ ಕುಟುಂಗಳು ಇಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿವೆ. ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ದೊರಕದ ಸಾಗುವಳಿ ಹಕ್ಕು ಪತ್ರ: ಸಂಸದ ಡಿ.ಕೆ.ಸುರೇಶ್ ಕಾರಿಗೆ ಮುತ್ತಿಗೆ ಹಾಕಿದ 36 ಕುಟುಂಬಗಳು
ಸಂಸದ ಡಿಕೆ ಸುರೇಶ್ ಅವರಿಗೆ ಮುತ್ತಿಗೆ ಹಾಕಿದ ಜನರು
Edited By:

Updated on: Aug 12, 2023 | 5:54 PM

ಆನೇಕಲ್, ಆಗಸ್ಟ್ 12: ಸಾಗುವಳಿ ಹಕ್ಕು ಪತ್ರ ದೊರಕದ ಹಿನ್ನೆಲೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ (D. K. Suresh) ಅವರ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ ಘಟನೆ ಬೆಂಗಳೂರು (Bengaluru) ಹೊರವಲಯ ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ. ಸಾಗುವಳಿ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದ ನಂತರ ಈ ಘಟನೆ ನಡೆದಿದೆ.

ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಆಯೋಜಿಸಿದ್ದ ಸಾಗುವಳಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಅವರು ಪಾಲ್ಗೊಂಡಿದ್ದರು. ಅಲ್ಲದೆ, ಹಲವಾರು ವರ್ಷಗಳಿಂದ ಜಮೀನು ಉಳುಮೆ ಮಾಡಿಕೊಂಡು ಬಂದಿದ್ದ ಕುಟುಂಬಗಳಿಗೆ ಸಾಗುವಳಿ ಹಕ್ಕು ಪತ್ರಗಳನ್ನು ವಿತರಿಸಿದರು.

ಇದನ್ನೂ ಓದಿ: ಬೆಂಗಳೂರು: ಆಟೋ ಹಿಂದೆ ಮಾರಕಾಸ್ತ್ರ! ಚಾಲಕನ ವಿರುದ್ಧ ಕ್ರಮಕ್ಕೆ ನೆಟ್ಟಿಗರ ಒತ್ತಾಯ

ಹಕ್ಕಿಪಿಕ್ಕಿ ಕಾಲೋನಿಯಲ್ಲಿ 150 ಕುಟುಂಬಗಳು ಹಲವಾರು ವರ್ಷಗಳಿಂದ ಜಮೀನು ಉಳುಮೆ ಮಾಡಿಕೊಂಡು ಬಂದಿವೆ. ಅಂತಹ ಕುಟುಂಬಗಳಲ್ಲಿ 114 ಕುಟುಂಬಗಳನ್ನು ಗುರುತಿಸಿ ಸಾಗುವಳಿ ಹಕ್ಕು ಪತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆ ಸಂಸದರು ಕಾರು ಹತ್ತಲು ಮುಂದಾದಾಗ ಹಕ್ಕು ಪತ್ರ ಸಿಗದ 36 ಕುಟುಂಬಗಳು ಮುತ್ತಿಗೆ ಹಾಕಿವೆ.

ಡಿಕೆ ಸುರೇಶ್ ಅವರು ಕಾರು ಹತ್ತಲು ಬಿಡದೇ ಮುತ್ತಿಗೆ ಹಾಕಿದ ಜನರು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು, ಗ್ರಾಮಸ್ಥರನ್ನ ತಡೆ ಹಿಡಿದು ಸಂಸದರನ್ನ ತೆರಳಲು ಅವಕಾಶ ಮಾಡಿಕೊಟ್ಟರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ