ಬೆಂಗಳೂರು: ಆಟೋ ಹಿಂದೆ ಮಾರಕಾಸ್ತ್ರ! ಚಾಲಕನ ವಿರುದ್ಧ ಕ್ರಮಕ್ಕೆ ನೆಟ್ಟಿಗರ ಒತ್ತಾಯ
ಆಟೋ ಹಿಂದೆ ಪ್ರೀತಿ ಸಂದೇಶ, ನೆಚ್ಚಿನ ನಟ-ನಟಿಯರ ಫೋಟೋ, ಕವನ ಇತ್ಯಾದಿಗಳು ಕಾಣುತ್ತಿದ್ದವು. ಆದರೆ ಈಗ ಬೆಂಗಳೂರಿನ ಆಟೋವೊಂದರ ಹಿಂಬದಿ ಮಾರಕಾಸ್ತ್ರವನ್ನು ಅಳವಡಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚಾಲಕನ ವಿರುದ್ಧ ಕ್ರಮಕ್ಕೆ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಬೆಂಗಳೂರು, ಆಗಸ್ಟ್ 12: ಆಟೋ ಹಿಂದೆ ಪ್ರೀತಿಯ ಸಂದೇಶ, ತಂದೆ-ತಾಯಿ ಆಶೀರ್ವಾದ, ಕವನ, ಮಕ್ಕಳ ಹೆಸರು, ನಟ-ನಟಿಯರ ಫೋಟೋ ಇತ್ಯಾದಿಗಳನ್ನು ಹಾಕಲಾಗುತ್ತದೆ. ಆದರೆ ಬೆಂಗಳೂರಿನ (Bengaluru) ವ್ಯಕ್ತಿಯೊಬ್ಬ ತನ್ನ ಆಟೋ ರಿಕ್ಷಾದ ಹಿಂಬದಿ ಮಾರಕಾಸ್ತ್ರವನ್ನು ಅಳವಡಿಸಿ ಸಂಚರಿಸುತ್ತಿದ್ದಾನೆ. ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚಾಲಕನ ವಿರುದ್ಧ ಕ್ರಮಕ್ಕೆ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಆಟೋರಿಕ್ಷಾವೊಂದರ ಹಿಂಬದಿಯಲ್ಲಿ ಮಾರಕಾಸ್ತ್ರ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಇದರ ಫೋಟೋವನ್ನು ಥರ್ಡ್‌ಐ ಎಂಬ ಟ್ವಿಟರ್ ಖಾತೆಯಲ್ಲಿ ಶುಕ್ರವಾರ ಹಂಚಿಕೊಳ್ಳಲಾಗಿದೆ. ಫೋಟೋದೊಂದಿಗೆ ಇದು ನಕಲಿಯೇ ಅಥವಾ ಅಸಲಿಯೇ ಎಂದು ಬರೆಯಲಾಗಿದೆ. ಸದ್ಯ ಈ ಫೋಟೋ ಸಾವಿರಾರು ಮಂದಿ ನೆಟ್ಟಿಗರ ಕಣ್ಣಿಗೆ ಬಿದ್ದಿದೆ.
ಇದನ್ನೂ ಓದಿ: ಬೆಂಗಳೂರು: ಆಗಸ್ಟ್ 15 ರಂದು ಮೆಟ್ರೋ ಪ್ರಯಾಣ ದರ 30 ರೂ. ನಿಗದಿ ಮಾಡಿದ ಬಿಎಂಆರ್ಸಿಎಲ್
ಹೊಸಬಸವನಪುರದ ಭಟ್ಟರಹಳ್ಳಿಯಲ್ಲಿ ಈ ಫೋಟೋವನ್ನು ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಈ ಫೋಟೋ ನೋಡಿದ ನೆಟಿಜನ್‌ಗರು ಚಾಲಕನ ಉದ್ದೇಶವಾದರೂ ಏನು ಎಂಬುದನ್ನು ಪ್ರಶ್ನಿಸಿದ್ದಾರೆ. ಇಂತಹ ವಸ್ತುಗಳನ್ನು ಹಾಕುವುದರ ಅರ್ಥವೇನು? ಎಂದು ಟಾರ್ಕ್ ನೈಟ್ ಖಾತೆದಾರ ಪ್ರಶ್ನಿಸಿದ್ದಾನೆ.
Is that a fake sword 🗡 or real? 😂 pic.twitter.com/4CtE5K7u27
— ThirdEye (@3rdEyeDude) August 11, 2023
ಆಟೋರಿಕ್ಷಾ ಚಾಲಕನ ಬಗ್ಗೆ ಪೊಲೀಸರಿಗೆ ದೂರು ನೀಡಬೇಕು ಎಂದು ವರ್ಲ್ಡ್ ವಾಚ್ ಹೇಳಿದೆ. “ಅಷ್ಟು ದೊಡ್ಡ ಮಾರಕಾಸ್ತ್ರವನ್ನು ಸಾಗಿಸುವುದು ಕಾನೂನುಬಾಹಿರವಾಗಿದೆ” ಎಂದು ಅದು ಹೇಳಿದೆ. ವಿನೋದ್ ಬಾಬು ಎಂಬವರು ಫೋಟೋಗೆ ಪ್ರತಿಕ್ರಿಯಿಸಿ, “ಇದು ಟಿಪ್ಪುವಿನ ಅನುಯಾಯಿಗಳ ಕತ್ತಿ ಎಂದು ಹೇಳಲಾಗುತ್ತದೆ” ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ