ಬೆಂಗಳೂರು: ಮಹಾನಗರದಲ್ಲಿ ದಿನದಿಂದ ದಿನಕ್ಕೆ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿವೆ. ನೋಡ ನೋಡುತ್ತಿದಂತೆ ಹೊಸ ಕಟ್ಟಡಗಳು ತೆಲೆಯತ್ತುತ್ತಿವೆ. ಆದರೆ ಈಗ ಬೆಂಗಳೂರಿನ (Bengaluru) ಎಲ್ಲ ಕಟ್ಟಡ ನಿರ್ಮಾಣ (Construction) ಕೆಲಸಗಳು ಬಂದ್ ಆಗಿವೆ. ಇದಕ್ಕೆ ಕಾರಣ ರಾಜಧಾನಿಯಲ್ಲಿನ ಕಾಮಗಾರಿಗಳಿಗೆ ಕಟ್ಟಡ ಸಾಮಾಗ್ರಿಗಳು ಸಪ್ಲೈ ಆಗುತ್ತಿಲ್ಲ. ಜೆಲ್ಲಿ, ಎಂ ಸ್ಯಾಂಡ್ ಬೋಡ್ರಸ್ ಹೊತ್ತ ಸಾವಿರಾರು ಲಾರಿಗಳು ನಿಂತಲ್ಲೇ ನಿಂತಿವೆ.
ಹೌದು ಕಳೆದ ಮೂರು ದಿನಗಳಿಂದ ಕ್ರಷರ್ ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ. ಇಂದಿನಿಂದ ಲಾರಿ ಮಾಲೀಕರು ಕೂಡ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ರಾಜ್ಯಾದ್ಯಂತ ಕಾರ್ಯನಿರ್ವಹಿಸ್ತಿದ್ದ 3 ಸಾವಿರ ಕ್ರಷರ್ಗಳು ಬಂದ್ ಆಗಿವೆ. ಇದರಿಂದ ಕಟ್ಟಡ ನಿರ್ಮಾಣ ಕಾಮಗಾರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಬಿಲ್ಡರ್ಸ್ ತತ್ತರಿಸಿ ಹೋಗುತ್ತಿದ್ದಾರೆ. ಅಲ್ಲದೇ ಕಟ್ಟಡ ಕಾರ್ಮಿಕರಾಗಿ ದುಡಿಮೆ ಮಾಡುವ ದಿನಗೂಲಿ ನೌಕರರ ಕೆಲಸಕ್ಕೂ ಕುತ್ತು ತಂದಿದೆ.
ಇದನ್ನೂ ಓದಿ: ಬಾಂಬ್ ಸ್ಫೋಟ ನೆನಪಿಸಿಕೊಂಡ ಬೆಂಗಳೂರು ಪೊಲೀಸ್ ಕಮಿಷನರ್: ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬಿಗಿ ಬಂದೋಬಸ್ತ್
ರಾಜ್ಯ ಸರ್ಕಾರ ರಾಜಧನ ಸಂಗ್ರಹದಲ್ಲಿ ಕ್ರಷರ್ ಮಾಲೀಕರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಸರ್ಕಾರ ತನ್ನ ನೀತಿಯನ್ನು ಹಿಂಪಡೆಯಬೇಕು. ಇಲ್ಲದಿದ್ದರೇ ಅನಿರ್ದಿಷ್ಟಾವಧಿಗೆ ಮುಷ್ಕರ ಮುಂದುವರೆಸುವ ತೀರ್ಮಾನ ಮಾಡಿದ್ದೇವೆ. ಡಿ. 28 ರಂದು ಬೆಳಗಾವಿಯ ಸುವರ್ಣಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಂಡಿದ್ದೇವೆ ಎಂದು ಕ್ರಷರ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:35 pm, Mon, 26 December 22