Weekend Curfew Updates: ಬೆಂಗಳೂರಿನ ರಸ್ತೆಗಳಲ್ಲಿ ಡೆಲಿವರಿ ಬಾಯ್ಸ್ ಓಡಾಟ; ಸಿಟಿ ರೌಂಡ್ಸ್​ಗೆ ಮುಂದಾದ ಆರಗ ಜ್ಞಾನೇಂದ್ರ

| Updated By: ganapathi bhat

Updated on: Jan 08, 2022 | 5:20 PM

ಗೊರಗುಂಟೆಪಾಳ್ಯ ಜಂಕ್ಷನ್, ನಾಯಂಡಹಳ್ಳಿ ಜಂಕ್ಷನ್, ಜೆಪಿ ನಗರ, ಡೈರಿ ಸರ್ಕಲ್, ವಿಲ್ಸನ್ ಗಾರ್ಡನ್, ಡಬಲ್ ರೋಡ್, ಹಡ್ಸನ್ ವೃತ್ತ ಮತ್ತು ಮೆಜೆಸ್ಟಿಕ್​ಗೆ ತೆರಳಿ ಗೃಹ ಸಚಿವ ಆರಗ ಜ್ಞಾನೇಂದ್ರ ಪರಿಶೀಲನೆ ನಡೆಸಿದ್ದಾರೆ.

Weekend Curfew Updates: ಬೆಂಗಳೂರಿನ ರಸ್ತೆಗಳಲ್ಲಿ ಡೆಲಿವರಿ ಬಾಯ್ಸ್ ಓಡಾಟ; ಸಿಟಿ ರೌಂಡ್ಸ್​ಗೆ ಮುಂದಾದ ಆರಗ ಜ್ಞಾನೇಂದ್ರ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಬೆಂಗಳೂರಿನ ರಸ್ತೆಗಳಲ್ಲಿ ಎಲ್ಲಿ ನೋಡಿದ್ರೂ ಫುಡ್ ಡೆಲಿವರಿ ಬಾಯ್ಸ್ ಕಂಡುಬಂದಿದ್ದಾರೆ. ಕೆಲವರು ವಿತ್ ಯೂನಿಫರ್ಮ್ ಸಂಚಾರ ಮಾಡಿದ್ರೇ ಇನ್ನೂ ಕೆಲವರು ಸಿವಿಲ್ ಡ್ರೆಸ್ ನಲ್ಲಿ ಸಂಚಾರ ಮಾಡುತ್ತಿದ್ದಾರೆ. ಸಿವಿಲ್ ಡ್ರೆಸ್​ನಲ್ಲಿ ಆನ್ಲೈನ್ ಡೆಲಿವರಿ ಬಾಯ್ಸ್ ಫುಡ್ ಡೆಲಿವರಿ ಮಾಡುತ್ತಿದ್ದಾರೆ. ಯೂನಿಫಾರ್ಮ್ ಹಾಕದೆ ಐಡಿ ಕಾರ್ಡ್ ಇಲ್ಲದೆ ಫುಡ್ ಡೆಲಿವರಿ ಬಾಯ್ಸ್ ರಸ್ತೆಗಳಲ್ಲಿ ಸಂಚಾರ ಮಾಡುತ್ತಿದದಾರೆ. ವೀಕೆಂಡ್ ಕರ್ಫ್ಯೂ ನಲ್ಲಿ ಆನ್ಲೈನ್ ಫುಡ್ ಡೆಲಿವರಿ ಬಾಯ್ಸ್ ಸಂಚಾರ ಜೋರಾಗಿದೆ. ಹೀಗಾಗಿ ಆನ್ಲೈನ್ ಫುಡ್ ಡೆಲಿವರಿ ಬಾಯ್ಸ್ ಗೆ ಪೋಲಿಸರು ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಕಿದ ಜರ್ಕಿನ್ ಬಿಚ್ಚಿ ಒಳಗೆ ಇರುವ ಕಂಪನಿಯ ಟೀ ಶರ್ಟ್ ಹಾಕಿಕೊಂಡು ಹೋಗಲು ಸೂಚನೆ ನೀಡಿದ್ದಾರೆ.

ವೀಕೆಂಡ್ ಕರ್ಫ್ಯೂ ಹಿನ್ನೆಲೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಿಟಿ ರೌಂಡ್ಸ್ ಹಾಕಿದ್ದಾರೆ. ಸಂಜೆ 5 ಗಂಟೆಯಿಂದ ಸಿಟಿ ರೌಂಡ್ಸ್ ಮೂಲಕ ಪರಿಶೀಲನೆ ನಡೆಸಿದ್ದಾರೆ. ಗೊರಗುಂಟೆಪಾಳ್ಯ ಜಂಕ್ಷನ್, ನಾಯಂಡಹಳ್ಳಿ ಜಂಕ್ಷನ್, ಜೆಪಿ ನಗರ, ಡೈರಿ ಸರ್ಕಲ್, ವಿಲ್ಸನ್ ಗಾರ್ಡನ್, ಡಬಲ್ ರೋಡ್, ಹಡ್ಸನ್ ವೃತ್ತ ಮತ್ತು ಮೆಜೆಸ್ಟಿಕ್​ಗೆ ತೆರಳಿ ಗೃಹ ಸಚಿವ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು ನಗರದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವ ಸಿಟಿ ರೌಂಡ್ಸ್‌ ಹಾಕಿದ್ದಾರೆ. ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್‌ಗೆ ಭೇಟಿ ನೀಡಿದ್ದಾರೆ. ಜಂಕ್ಷನ್‌ನಲ್ಲಿ ನಿಂತಿದ್ದ ಪ್ರಯಾಣಿಕರನ್ನ ಮಾತಾಡಿಸಿದ್ದಾರೆ. ಕರ್ಫ್ಯೂ ಇದೆ ಏಕೆ ಬಂದಿದ್ದೀರಿ ಎಂದು ಕೇಳಿದ್ದಾರೆ. ಗೃಹ ಸಚಿವರಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌, ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್‌ ಸಾಥ್‌ ನೀಡಿದ್ದಾರೆ.

ಮೇಕೆದಾಟು ಯೋಜನೆಗಾಗಿ ನಾಳೆ ಕಾಂಗ್ರೆಸ್‌ನಿಂದ ಪಾದಯಾತ್ರೆ ವಿಚಾರವಾಗಿ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಪಾದಯಾತ್ರೆ ಬೆಂಗಳೂರಿನಲ್ಲಿ ಇಲ್ಲ ಎಂದು ಹೇಳಿದ್ದಾರೆ. ಪಾದಯಾತ್ರೆ ಮುಂದೂಡುವಂತೆ ನಾವು ಮನವಿ ಮಾಡುತ್ತೇವೆ. ಪ್ರತಿಭಟಿಸಲು ಎಲ್ಲರಿಗೂ ಅವಕಾಶವಿದೆ, ಆದ್ರೆ ಇದು ಟೈಂ ಅಲ್ಲ ಎಂದು ಹೇಳಿದ್ದಾರೆ.

ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಘಾಟಿ ಸುಬ್ರಹ್ಮಣ್ಯ ದೇಗುದಲ್ಲಿ ರಥೋತ್ಸವ
ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಬ್ರಹ್ಮ ರಥೋತ್ಸವ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ನಡೆದಿದೆ. ಅಧಿಕಾರಿಗಳು, ಜನಪ್ರತಿನಿಧಿಗಳಿಂದಲೇ ರೂಲ್ಸ್ ಬ್ರೇಕ್ ಮಾಡಲಾಗಿದೆ. ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್, ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ, ಮಾಜಿ ಸಚಿವ ವರ್ತೂರು ಪ್ರಕಾಶ್, ಬೆಂಬಲಿಗರು ಭಾಗಿ ಆಗಿದ್ದಾರೆ. ಜಿಲ್ಲಾಧಿಕಾರಿ, ತಹಶೀಲ್ದಾರ್ ಕೂಡ ರಥೋತ್ಸವದಲ್ಲಿ ಭಾಗಿ ಆಗಿದ್ದಾರೆ. ದೇವಾಲಯದ ಆವರಣದಲ್ಲಿ ಚಿಕ್ಕ ರಥದಲ್ಲಿ ರಥೋತ್ಸವ ನಡೆಸಲಾಗಿದೆ. ಕೊವಿಡ್ ನಿಯಮಗಳನ್ನು ಗಾಳಿಗೆ ತೂರಿ ರಥೋತ್ಸವ ಮಾಡಲಾಗಿದೆ. ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ನಡೆಸಲಾಗಿದೆ.

ದಾಬಸ್‌ಪೇಟೆ‌ಯಲ್ಲಿ ಕೊವಿಡ್ ರೂಲ್ಸ್ ಬ್ರೇಕ್ ಮಾಡಿ ನಡೆಯುತ್ತಿದೆ ನಾಟಕ ಪ್ರದರ್ಶನ
ದಾಬಸ್‌ಪೇಟೆ‌ಯಲ್ಲಿ ಕೊವಿಡ್ ರೂಲ್ಸ್ ಬ್ರೇಕ್ ಮಾಡಿ ನಾಟಕ ಪ್ರದರ್ಶನ ನಡೆಸಲಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಿದ್ದಲಿಂಗೇಶ್ವರ ಸಮುದಾಯ ಭವನ ಸಭಾಂಗಣದಲ್ಲಿ ನಾಟಕ ನಡೆಯುತ್ತಿರುವ ಬಗ್ಗೆ ತಿಳಿದುಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯ ಪೊಲೀಸ್ ಠಾಣೆ ಕೂಗಳತೆ ದೂರದಲ್ಲಿ ಕೊವಿಡ್ ನಿಯಮಾವಳಿ ಗಾಳಿಗೆ ತೂರಲಾಗಿದೆ.

ಕರ್ಫ್ಯೂ ನಡುವೆ ಕ್ರಿಕೆಟ್, ಕಬಡ್ಡಿ ಆಟ
ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ನಡುವೆಯೂ ಕೆಲವರು ಕ್ರಿಕೆಟ್ ಆಟ ಆಡಿರುವುದು ಕಂಡುಬಂದಿದೆ. ಮಲ್ಲೇಶ್ವರಂನ ಗುಂಡೂರಾವ್​ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಟ ಆಡಿದ್ದಾರೆ. ಸರ್ಕಾರದ ಕೊರೊನಾ ಕರ್ಫ್ಯೂಗೆ ಯುವಕರು ಡೋಂಟ್​ಕೇರ್​ ಎಂದಿದ್ದಾರೆ. ಬಿಬಿಎಂಪಿ ಆಟದ ಮೈದಾನದಲ್ಲಿ ಗುಂಪುಗೂಡಿ ಕ್ರಿಕೆಟ್ ಆಟ ಆಡಿದ್ದಾರೆ. ಟಿವಿ9 ಕ್ಯಾಮರಾ ಕಂಡು ಯುವಕರು ಬ್ಯಾಟ್ ಬಿಟ್ಟು ಓಡಿದ್ದಾರೆ.

ವೀಕೆಂಡ್ ಕರ್ಫ್ಯೂ ಹಿನ್ನಲೆ ಇತ್ತ ಉಡುಪಿಯ ಬಸ್ ಸಿಬ್ಬಂದಿಗಳು ಕೂಡ ಕ್ರಿಕೆಟ್ ಹಾಗೂ ಕಬಡ್ಡಿ ಆಟ ಆಡಿದ್ದಾರೆ. ಖಾಸಗಿ ಬಸ್ ಚಾಲಕರು, ನಿರ್ವಾಹಕರಿಂದ ನಿಲ್ದಾಣದಲ್ಲಿ ಆಟ ಆಡಲಾಗಿದೆ. ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಕ್ರಿಕೆಟ್ ಹಾಗೂ ಕಬಡ್ಡಿ ಆಟ ಆಡಿದ್ದಾರೆ. ಬಹುತೇಕ‌ ಖಾಸಗಿ ಬಸ್ಸಿನಲ್ಲಿ‌ ಪ್ರಯಾಣಿಕರೇ ಇಲ್ಲ. ಈ‌ ಹಿನ್ನಲೆಯಲ್ಲಿ ಬಸ್ ಸಿಬ್ಬಂದಿಗಳು ಆಟ ಆಡಿ ಟೈಂಪಾಸ್ ಮಾಡಿದ್ದಾರೆ.

ವೀಕೆಂಡ್ ಕರ್ಫ್ಯೂ ಜಾರಿ ಹಿನ್ನಲೆ ಬೀದಿ ಬದಿ ವ್ಯಾಪಾರಸ್ಥೆ ವೃದ್ಧೆ ಪರದಾಟ
ವೀಕೆಂಡ್ ಕರ್ಫ್ಯೂ ಜಾರಿ ಹಿನ್ನಲೆ ಬೀದಿ ಬದಿ ವ್ಯಾಪಾರಸ್ಥೆ ವೃದ್ಧೆ ಪರದಾಟ ಪಟ್ಟ ಘಟನೆ ಯಾದಗಿರಿಯಲ್ಲಿ ನಡೆದಿದೆ. ಕರ್ಫ್ಯೂ ಜಾರಿಯಿಂದ ವ್ಯಾಪಾರ ಆಗ್ತಾಯಿಲ್ಲ. ಹಳ್ಳಿ ಜನ ಬಂದ್ರೆ ಹಣ್ಣು ಖರೀದಿ ಮಾಡಿಕೊಂಡು ಹೋಗ್ತಾಯಿದ್ರು. ಕರ್ಫ್ಯೂ ಇದ್ದ ಕಾರಣ ಗ್ರಾಮೀಣ ಭಾಗದ ಜನ ಬರ್ತಾಯಿಲ್ಲ. ನಿತ್ಯ 150-200 ರೂ. ದುಡಿಯುತ್ತಿದ್ದೆ ಇವತ್ತು ನಯಾ ಪೈಸೆ ವ್ಯಾಪಾರ ಆಗಿಲ್ಲ. ಬೆಳಗ್ಗೆ 8 ಗಂಟೆಗೆ ಬಂದು ಕುಳಿತ್ತಿದ್ದೆನೆ ಆದ್ರೆ ಹಣ್ಣು ಖರೀದಿಗೆ ಯಾರು ಬರ್ತಾಯಿಲ್ಲ. ನಮ್ಮ ಗೋಳು ಯಾರ ಮುಂದೆ ಹೇಳಿಕೊಳ್ಳಬೇಕು. ಇವತ್ತು ದುಡಿದ್ರೆ ಇವತ್ತು ಬದುಕುತ್ತೆವೆ ಅಂತಹದರಲ್ಲಿ ಲಾಕ್ ಡೌನ್ ಮಾಡಿದ್ದಾರೆ. ಇದರಿಂದ ನಮ್ಗೆ ಬಹಳ ಕಷ್ಟ ಆಗಿದೆ ಎಂದು ವೃದ್ಧೆ ಅಳಲು ತೋಡಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಕೊರೊನಾ ಕುರಿತು ಪೊಲೀಸರಿಂದ ಜಾಗೃತಿ
ಶಿವಮೊಗ್ಗದಲ್ಲಿ ಕೊರೊನಾ ಕುರಿತು ಪೊಲೀಸರಿಂದ ಜಾಗೃತಿ ನಡೆಸಲಾಗಿದೆ. ಪಶ್ಚಿಮ ಸಂಚಾರ ಠಾಣೆಯ ಎಎಸ್​ಐರಿಂದ ಜನ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. ಮಾಸ್ಕ್​​ ಧರಿಸದೇ ಓಡಾಡುತ್ತಿದ್ದ ಜನರಿಗೆ ಮಾಸ್ಕ್​ ವಿತರಣೆ ಮಾಡಿ ಜಾಗೃತಿ ಮೂಡಿಸಲಾಗಿದೆ. ದಾನೇಶ್ ಬಾಬು ಎಂಬವರು ಜನರಿಗೆ ಉಚಿತವಾಗಿ ಮಾಸ್ಕ್​ ವಿತರಿಸಿದ್ದಾರೆ.

ಮಾಸ್ಕ್​ ಧರಿಸದೇ ಓಡಾಡುತ್ತಿದ್ದವರಿಗೆ ಅಧಿಕಾರಿಗಳು ದಂಡ ವಿಧಿಸಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ನಡೆದಿದೆ. ಮಾಸ್ಕ್​ ಧರಿಸದೇ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ತಹಶೀಲ್ದಾರ್​ ದಂಡ ಹಾಕಿದ್ದಾರೆ. ಅಗತ್ಯಸೇವೆಗಳಡಿ ಬರುವ ಅಂಗಡಿ ಹೊರತುಪಡಿಸಿ ಉಳಿದವು ಬಂದ್ ಮಾಡಿಸಲಾಗಿದೆ. ತಹಶೀಲ್ದಾರ್​ ರೂಪಾ ಅಂಗಡಿಗಳನ್ನ ಬಂದ್​ ಮಾಡಿಸಿದ್ದಾರೆ.

ಇದನ್ನೂ ಓದಿ: Assembly Elections 2022 Rules: ರೋಡ್ ಶೋ, ಮೆರವಣಿಗೆ ಮಾಡುವಂತಿಲ್ಲ; ಕೊರೊನಾ ಮಾರ್ಗಸೂಚಿ ಅನುಸರಿಸಿ ಚುನಾವಣೆ

ಇದನ್ನೂ ಓದಿ: ವೇಗವಾಗಿ ಸಾಗುತ್ತಿದೆ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ; ಶುರುವಾದ ವಾರದೊಳಗೆ ಕೊರೊನಾ ಲಸಿಕೆ ಪಡೆದವರ ಸಂಖ್ಯೆ 2 ಕೋಟಿ

Published On - 5:05 pm, Sat, 8 January 22