ಕ್ರೆಡಿಟ್​ ಕಾರ್ಡ್ ಲಿಮಿಟ್​ ಹೆಚ್ಚಿಸುವುದಾಗಿ ಕರೆ ಮಾಡಿ 1 ಲಕ್ಷ ರೂ. ವಂಚನೆ; ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

| Updated By: ಆಯೇಷಾ ಬಾನು

Updated on: Sep 16, 2023 | 12:29 PM

ಎಸ್​ಬಿಐ ಕ್ರೆಡಿಟ್ ಕಾರ್ಡ್​ನಿಂದ ಕರೆ ಮಾಡಿದ್ಧೇವೆ. ಕ್ರೆಡಿಟ್ ಕಾರ್ಡನ ಲಿಮಿಟ್ ಜಾಸ್ತಿ ಮಾಡುತ್ತೇವೆ ಎಂದು ನಂಬಿಸಿ ವಾಟ್ಸಾಪ್ ನಂಬರ್​ಗೆ ಕೆವೈಸಿ ಅಪ್ಡೇಟ್ ಮಾಡಲು ಲಿಂಕ್ ಕಳಿಸಿ ಕ್ಷಣಾರ್ಧದಲ್ಲಿ 1 ಲಕ್ಷ ಹಣ ಎಗರಿಸಿದ್ದಾರೆ. ಕಿರ್ಲೋಸ್ಕರ್ ಲೇಔಟ್ ಉದ್ಯಮಿ ಸುರೇಶ್ ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕ್ರೆಡಿಟ್​ ಕಾರ್ಡ್ ಲಿಮಿಟ್​ ಹೆಚ್ಚಿಸುವುದಾಗಿ ಕರೆ ಮಾಡಿ 1 ಲಕ್ಷ ರೂ. ವಂಚನೆ; ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಸೈಬರ್ ಕ್ರೈಮ್
Follow us on

ಬೆಂಗಳೂರು, ಸೆ.16: ಕ್ರೆಡಿಟ್​ ಕಾರ್ಡ್(Credit Card)​ ಲಿಮಿಟ್​ ಹೆಚ್ಚಿಸುವುದಾಗಿ ಹೇಳಿ ಆನ್​ಲೈನ್​ನಲ್ಲಿ ಉದ್ಯಮಿಗೆ ವಂಚಿಸಲಾಗಿದೆ(Online Fraud). ಎಸ್​ಬಿಐ ಬ್ಯಾಂಕ್(SBI Bank)​ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡಿ ಸೈಬರ್ ಕಳ್ಳರು ಉದ್ಯಮಿಯ ಖಾತೆಯಿಂದ 1 ಲಕ್ಷ ಹಣ ಎಗರಿಸಿದ್ದು ಕಿರ್ಲೋಸ್ಕರ್ ಲೇಔಟ್ ಉದ್ಯಮಿ ಸುರೇಶ್ ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ(Bagalgunte Police Station) ದೂರು ದಾಖಲಿಸಿದ್ದಾರೆ. ಎಸ್​ಬಿಐ ಕ್ರೆಡಿಟ್ ಕಾರ್ಡ್​ನಿಂದ ಕರೆ ಮಾಡಿದ್ಧೇವೆ. ಕ್ರೆಡಿಟ್ ಕಾರ್ಡನ ಲಿಮಿಟ್ ಜಾಸ್ತಿ ಮಾಡುತ್ತೇವೆ ಎಂದು ನಂಬಿಸಿ ವಾಟ್ಸಾಪ್ ನಂಬರ್​ಗೆ ಕೆವೈಸಿ ಅಪ್ಡೇಟ್ ಮಾಡಲು ಲಿಂಕ್ ಕಳಿಸಿ ಕ್ಷಣಾರ್ಧದಲ್ಲಿ 1 ಲಕ್ಷ ಹಣ ಎಗರಿಸಿದ್ದಾರೆ.

ಘಟನೆ ವಿವರ

ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ಉದ್ಯಮಿ ಸುರೇಶ್ ಅವರಿಗೆ ಒಂದು ಫೋನ್ ಬಂತು. ಕರೆ ಮಾಡಿದವರು ತಾವು ಎಸ್​ಬಿಐ ಕ್ರೆಡಿಟ್ ಕಾರ್ಡ್​ನಿಂದ ಕರೆ ಮಾಡುತ್ತಿದ್ದು, ನಿಮ್ಮ ಕ್ರೆಡಿಟ್ ಕಾರ್ಡ್​ನ ಲಿಮಿಟ್ಟು ಜಾಸ್ತಿ ಮಾಡುತ್ತೇವೆ ನಿಮಗೆ ಇಚ್ಚೆ ಇದ್ದರೆ ಹೇಳಿ ಎಂದ ಹೇಳಿದ್ದಾರೆ. ಆಗ ಸುರೇಶ್ ಅವರು ಕ್ರಿಡಿಟ್ ಲಿಮಿಟ್ ಏರಿಕೆಗೆ ಒಪ್ಪಿಕೊಂಡಿದ್ದು ಅವರ ವಾಟ್ಸಾಪ್ ನಂಬರ್​ಗೆ ಲಿಂಗ್ ಬಂದಿದೆ. ಬಳಿಕ ಕೆವೈಸಿ ಅಪ್ಡೇಟ್ ಮಾಡುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ: ವಂಚನೆ ಪ್ರಕರಣ: ಡೀಲ್ ವಿಫಲವಾದ ಬಳಿಕ ಹಣ ಮರು ಪಾವತಿಗೆ ಉದ್ಯಮಿ ಬಳಿ ಸಮಯ ಕೇಳಿದ್ದ ಚೈತ್ರಾ ಕುಂದಾಪುರ

ಕೆವೈಸಿ ಅಪಡೇಟ್ ಮಾಡಿದ ಕೆಲವೇ ಸಮಯದಲ್ಲಿ ಸುರೇಶ್ ಅವರ ಕ್ರೆಡಿಟ್ ಕಾರ್ಡನಲ್ಲಿದ್ದ 99,910 ರೂ. ಕಟ್ ಆಗಿದೆ. ಇದರಿಂದ ಗಾಬರಿಗೊಂಡ ಸುರೇಶ್, ಹೆಲ್ಪ್ ಲೈನ್ ನಂಬರ್ 1930ಗೆ ಫೋನ್ ಮಾಡಿ ಕಂಪ್ಲೆಂಟ್ ರೈಸ್ ಮಾಡಿ ಹಣವನ್ನು ಪ್ರೀಜ್ ಮಾಡಿಸಿದ್ದಾರೆ. ಸದ್ಯ ಈ ಬಗ್ಗೆ ವಂಚನೆಗೆ ಒಳಗಾದ ಸುರೇಶ್ ಅವರು ದೂರು ನೀಡಿದ್ದು ಮಾಹಿತಿ ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಂಡು ಕ್ರೆಡಿಟ್ ಕಾರ್ಡನ ಲಿಮಿಟ್ ಜಾಸ್ತಿ ಮಾಡುತ್ತೇವೆಂದು ಕ್ರೆಡಿಟ್ ಕಾರ್ಡ್​ನ ಕೆವೈಸಿ ಪಡೆದು ಕ್ರಿಡಿಟ್ ಕಾರ್ಡನಲಿದ ಹಣವನ್ನು ಆನಲೈನ್ ಮೂಲಕ ಪಡೆದು ಮೋಸ ಮಾಡಿದ್ದಾರೆ. ಸೈಬರ್ ಖದೀಮರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಎಂದು ಮನವಿ ಮಾಡಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:15 pm, Sat, 16 September 23