ಬೆಂಗಳೂರು: ಸಿಲಿಂಡರ್ ಸ್ಫೋಟವಾಗಿ 7 ಜನರಿಗೆ ಗಾಯವಾದ ಘಟನೆ ನಗರದ ಅತ್ತಿಗುಪ್ಪೆಯ 2ನೇ ಕ್ರಾಸ್ ನ ಮನೆಯೊಂದರಲ್ಲಿ ನಡೆದಿದೆ. ರಾತ್ರಿ 8:45ರ ಸುಮಾರಿಗೆ ಘಟನೆ ನಡೆದಿರುವ ಬಗ್ಗೆ ತಿಳಿದುಬಂದಿದೆ. ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟವಾಗಿದ್ದು 7 ಜನರಿಗೆ ಗಾಯ ಆಗಿದೆ. ಸುಕುಮಾರ್ (48), ಹರ್ಷ (41), ಗಾನಶ್ರೀ (13), ಹೇಮೇಶ್ವರ್ (7), ಕಟ್ಟಡದ ಮಾಲಿಕರಾದ ರಾಮಕ್ಕ (65), ಅನಿತಾ (31) ರಚನಾ (21) ಗೆ ಗಾಯವಾಗಿದೆ.
ಮನೆ ಮಾಲಿಕ ಹರ್ಷಾರ ಪತ್ನಿ ಅಡುಗೆ ಮನೆಗೆ ಹೋದಾಗ ಸಿಲಿಂಡರ್ ಸೋರಿಕೆಯಾಗಿರುವುದು ಪತ್ತೆ ಆಗಿದೆ. ಸೋರಿಕೆಯಾದ ಗ್ಯಾಸ್ ದೇವರ ಕೋಣೆಯಲ್ಲಿದ್ದ ದೀಪಕ್ಕೆ ತಗುಲಿ ಸ್ಪೋಟಗೊಂಡಿದೆ. ಗಾಯಾಳುಗಳು ESI ಮತ್ತು Victoria ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 50 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಚರಣೆ ನಡೆಸಲಾಗುತ್ತಿದೆ.
ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಲಾರಿ
ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಲಾರಿ ಹೊತ್ತಿ ಉರಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬೆಳವಟಗಿ ಕ್ರಾಸ್ ಬಳಿ ರಸ್ತೆಯಲ್ಲಿ ನಡೆದಿದೆ. ಶಿವಯೋಗಪ್ಪ ಬೆಣ್ಣಿ ಎಂಬುವವರ ಲಾರಿ ಬೆಂಕಿಗಾಹುತಿ ಆಗಿದೆ. ಗೋವಿನ ಜೋಳ ಸಾಗಿಸುತ್ತಿದ್ದಾಗ ಲಾರಿ ಹೊತ್ತಿ ಉರಿದಿದೆ. ಚಾಲಕ, ಕ್ಲೀನರ್ ಲಾರಿಯಿಂದ ಜಿಗಿದು ಬಚಾವ್ ಆಗಿದ್ದಾರೆ. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಕೆಮಿಕಲ್ ಫ್ಯಾಕ್ಟರಿ
ಶಾರ್ಟ್ ಸರ್ಕ್ಯೂಟ್ನಿಂದ ಕೆಮಿಕಲ್ ಫ್ಯಾಕ್ಟರಿ ಹೊತ್ತಿ ಉರಿದ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕುಂಬಳಗೂಡಿನಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಸೋನಿ ಇಂಡಸ್ಟ್ರಿಯಲ್ ಫ್ಯಾಕ್ಟರಿ ಬೆಂಕಿಗಾಹುತಿ ಆಗಿದೆ. ಫ್ಯಾಕ್ಟರಿಯಲ್ಲಿ ಎಲ್ಲ ಕಾರ್ಮಿಕರು ಕೆಲಸ ಮುಗಿಸಿ ತೆರಳಿದ್ದರು. ಕೇವಲ ಮೂವರು ಮಾತ್ರ ಕೆಮಿಕಲ್ ಫ್ಯಾಕ್ಟರಿಯಲ್ಲಿ ಇದ್ದರು. ಬೆಂಕಿ ಕಾಣಿಸಿಕೊಳ್ತಿದ್ದಂತೆ ಫ್ಯಾಕ್ಟರಿಯಿಂದ ಹೊರ ಓಡಿದ್ದರು ಎಂದು ತಿಳಿದುಬಂದಿದೆ. 3 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಲಾಗಿದೆ.
ಬಸ್ ಚಾಲನೆ ಮಾಡುವಾಗ ಚಾಲಕನಿಗೆ ಎದೆನೋವು; ನಿಯಂತ್ರಣ ತಪ್ಪಿ ಫುಟ್ಪಾತ್ ಮೇಲೆ ಹರಿದ ಖಾಸಗಿ ಬಸ್
ಬಸ್ ಚಾಲನೆ ಮಾಡುವಾಗ ಚಾಲಕನಿಗೆ ಎದೆನೋವು ಹಿನ್ನೆಲೆ ಖಾಸಗಿ ಬಸ್ ಒಂದು ನಿಯಂತ್ರಣ ತಪ್ಪಿ ಫುಟ್ಪಾತ್ ಮೇಲೆ ಹರಿದ ಘಟನೆ ನಡೆದಿದೆ. ಬೆಂಗಳೂರಿನ ನಾಗವಾರ-ಹೆಣ್ಣೂರು ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೇವಲ ನಾಲ್ವರು ಮಾತ್ರ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬಾಣಸವಾಡಿ ಸಂಚಾರಿ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಎದೆನೋವು ಕಾಣಿಸಿಕೊಂಡ ಚಾಲಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಮಂಡ್ಯ: ಕಾರು- ಬಸ್ ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು
ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 1290 ಜನರಿಗೆ ಕೊರೊನಾ ದೃಢ; 5 ಮಂದಿ ಸಾವು