ಬೆಂಗಳೂರು, ಡಿ.29: ಜ.3 ರಿಂದ ಬೆಂಗಳೂರಿನಲ್ಲಿ ಜನಸ್ಪಂದನಾ(jana spandana) ಕಾರ್ಯಕ್ರಮ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar) ಹೇಳಿದರು. ಬಿಬಿಎಂಪಿ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಬಳಿಕ ಮಾತನಾಡಿದ ಅವರು ‘ಸುಮಾರು 10 ದಿನ ಜನಸ್ಪಂದನಾ ಕಾರ್ಯಕ್ರಮ ನಡೆಯಲಿದೆ. ನಾನು, ಸಂಬಂಧಪಟ್ಟ ಶಾಸಕರು, ಅಧಿಕಾರಿಗಳು ಭಾಗಿಯಾಗಲಿದ್ದೇವೆ ಎಂದರು.
ಜನಸ್ಪಂದನಾ ಕಾರ್ಯಕ್ರಮದಲ್ಲಿ ಜನರು ತಮ್ಮ ಸಮಸ್ಯೆ ಹೇಳಬಹುದು, ಯಾರೂ ಕೂಡ ನಮ್ಮ ಮನೆ ಬಾಗಿಲಿಗೆ ಬಂದು ನಿಲ್ಲಬಾರದು. ಮೊದಲು ಮಹದೇವಪುರದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತದೆ. ಬಳಿಕ ಕೆ.ಆರ್.ಪುರಂ, ಶಿವಾಜಿನಗರ, ಹೆಬ್ಬಾಳ, ಪುಲಕೇಶಿನಗರ, ಯಲಹಂಕ, ದಾಸರಹಳ್ಳಿ, ಬ್ಯಾಟರಾಯನಪುರ, ಗಾಂಧಿನಗರ, ಚಾಮರಾಜಪೇಟೆಯಲ್ಲಿ ನಡೆಯುತ್ತೆ. ಇನ್ನು ಈ ಜನಸ್ಪಂದನಾ ಕಾರ್ಯಕ್ರಮಗಳು ಬಹುತೇಕ ಮೈದಾನಗಳಲ್ಲಿ ನಡೆಯಲಿದೆ ಎಂದರು.
ಇದನ್ನೂ ಓದಿ:Siddaramaiah: ಒತ್ತವರಿ ಮಾಡಿಕೊಂಡ ವೃದ್ಧೆಯ ಜಮೀನು ಬಿಡಿಸಿಕೊಡುವಂತೆ ರಾಮನಗರ ಡಿಸಿಗೆ ಸೂಚಿಸಿದ ಸಿದ್ದರಾಮಯ್ಯ
ಬೆಂಗಳೂರಿಗೆ ಸಂಬಂಧಿಸಿದ ಯಾವುದೇ ದೂರು ನೀಡಿದ್ರೂ ಪರಿಗಣಿಸ್ತೇವೆ, ಪೊಲೀಸ್, ಕಂದಾಯ, ಬೆಸ್ಕಾಂ, BWSSB ಸೇರಿ ಎಲ್ಲಾ ಇಲಾಖೆ ಸಂಬಂಧಿತ ದೂರು ಸ್ವೀಕರಿಸಲಾಗುತ್ತದೆ. ಜೊತೆಗೆ ಅಲ್ಲಿಯೇ ಪರಿಹಾರ ನೀಡುತ್ತೇವೆ ಎಂದಿದ್ದಾರೆ. ನಂತರ ಬೆಂಗಳೂರಿನಲ್ಲಿ ತೆರಿಗೆ ಕಟ್ಟದಿದ್ರೆ, ಬಿಡಲ್ಲ. ಎಲ್ಲಾ ಕಡೆ ಬೀಗ ಹಾಕುತ್ತೇವೆ. ಟ್ಯಾಕ್ಸ್‌ನಿಂದಲೇ ಹಣ ಸಂಗ್ರಹ ಆಗುವುದು. ಅಭಿವೃದ್ಧಿಗೆ ಟ್ಯಾಕ್ಸ್ ಮೂಲ, ಯಾವುದೇ ಟ್ಯಾಕ್ಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದರು. ಜೊತೆಗೆ ಕನ್ನಡದ ಪರ ಹೋರಾಟಗಳಿಗೆ ನಾವು ಸ್ಪಂದಿಸುತ್ತೇವೆ, ಆದ್ರೆ ಯಾರದೊ ಆಸ್ತಿಪಾಸ್ತಿ ಹಾಳು ಮಾಡುವುದು ಸರಿಯಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ