ಜನತಾ ದರ್ಶನ: ಜನರ ಸಮಸ್ಯೆ ಪರಿಹಾರಕ್ಕೆ ನಮ್ಮ ಸರಕಾರ ಬದ್ಧ: ಸಚಿವ ರಾಮಲಿಂಗಾರೆಡ್ಡಿ

ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಇಂದು ರಾಮನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಜನಸ್ಪಂದನಾ ಕಾರ್ಯಕ್ರಮ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಪ್ರಪಂಚ ಇರುವವರೆಗೂ ಸಮಸ್ಯೆಗಳು ಬಗೆ ಹರಿಯಲ್ಲ. ಬಗೆ ಹರಿಸುವ ಸಮಸ್ಯೆ ಗಳನ್ನು ಬಗೆಹರಿಸುತ್ತೇವೆ. ಸಮಸ್ಯೆ ಪರಿಹಾರಕ್ಕೆ ನಮ್ಮ ಸರಕಾರ ಬದ್ಧವಾಗಿದೆ ಎಂದಿದ್ದಾರೆ.

ಜನತಾ ದರ್ಶನ: ಜನರ ಸಮಸ್ಯೆ ಪರಿಹಾರಕ್ಕೆ ನಮ್ಮ ಸರಕಾರ ಬದ್ಧ: ಸಚಿವ ರಾಮಲಿಂಗಾರೆಡ್ಡಿ
ಜನರ ಸಮಸ್ಯೆ ಆಲಿಸಿದ ಸಚಿವ ರಾಮಲಿಂಗಾರೆಡ್ಡಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 25, 2023 | 2:52 PM

ರಾಮನಗರ, ಸೆಪ್ಟೆಂಬರ್​ 25: ಪ್ರಪಂಚ ಇರುವವರೆಗೂ ಸಮಸ್ಯೆಗಳು ಬಗೆ ಹರಿಯಲ್ಲ. ಬಗೆ ಹರಿಸುವ ಸಮಸ್ಯೆ ಗಳನ್ನು ಬಗೆಹರಿಸುತ್ತೇವೆ. ಜನರ ಸಮಸ್ಯೆ ಪರಿಹಾರಕ್ಕೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ. ನಗರದಲ್ಲಿ ಆಯೋಜಿಸಿದ್ದ ನೂತನ ಸರ್ಕಾರದ ಪ್ರಥಮ ಜನತಾ ದರ್ಶನ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಇಂದು ಜನಸ್ಪಂದನಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿಗಳು ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಜನರ ಸಮಸ್ಯೆಗಳನ್ನು ಆಲಿಸಲು ಸಭೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಪೊಲೀಸ್, ಹಕ್ಕುಪತ್ರ,‌ ಚರಂಡಿ ಹಾಗೂ ಆನೆ ದಾಳಿ ಸಮಸ್ಯೆಗಳು ಸೇರಿದಂತೆ ಸುಮಾರು ಇನ್ನೂರು ಮನವಿಗಳು ಬಂದಿದೆ. ಮುಂದಿನ ಸಲದ ಜನತಾ ದರ್ಶನಕ್ಕೆ ಬರುವ ವೇಳೆ ಸಮಸ್ಯೆ ಬಗೆಹರಿಯಬೇಕು ಅಂತ ಹೇಳಲಾಗಿದೆ ಎಂದರು.

ಹೆಚ್​ಡಿ ಕುಮಾರಸ್ವಾಮಿಗೆ ಸಚಿವ ರಾಮಲಿಂಗರೆಡ್ಡಿ ತಿರುಗೇಟು

ಇವರೇನು ಅಭಿವೃದ್ಧಿ ಮಾಡುವುದು ಬೇಕಾಗಿಲ್ಲ, ಕ್ಷೇತ್ರವನ್ನು ನೋಡಿಕೊಂಡು ಹೋಗಲಿ ಸಾಕು ಎಂಬ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕ್ಷೇತ್ರದಲ್ಲಿ ಮೂಲಭೂತ ಸಮಸ್ಯೆ ಗಳಿವೆ. ಸಮಸ್ಯೆಗಳೆ ಇಲ್ಲ ಅಂತ ಇಲ್ಲ. ಇವು ಬಗೆಹರಿಯುವ ಸಮಸ್ಯೆಗಳಲ್ಲ. ಮುಂದಿನ ಚುನಾವಣೆಗಳಲ್ಲಿ ಕುಮಾರಸ್ವಾಮಿ ಅವರ ಮಾತಿಗೆ ಉತ್ತರ ಸಿಗಲಿದೆ ಎಂದು ಸಚಿವ ರಾಮಲಿಂಗರೆಡ್ಡಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ಕೈ ತಗಾದೆ; ಬೆಂಗಳೂರು ಸೇರಿದಂತೆ 21 ನಗರಗಳಲ್ಲಿ ಇಂದು 21 ಪತ್ರಿಕಾಗೋಷ್ಠಿ; ಯಾವ್ಯಾವ ಮುಖಂಡರು ಮಾತನಾಡಲಿದ್ದಾರೆ, ಇಲ್ಲಿದೆ ಪಟ್ಟಿ

ತಮ್ಮ ಕ್ಷೇತ್ರದಲ್ಲ ಡಿಕೆ ಬ್ರದರ್ಸ್ ಇನ್ವಾಲ್ಮೆಂಟ್ ವಿಚಾರವಾಗಿ ಮಾತನಾಡಿದ್ದು, ಅವರವರ ಕೆಲಸ ಅವರು ಮಾಡುತ್ತಿದ್ದಾರೆ. ಸಂಸದರು ಅವರ ಕೆಲಸ ಅವರು ಮಾಡುತ್ತಾರೆ ನನ್ನ ಕೆಲಸ ನಾನು ಮಾಡುತ್ತೇನೆ. ಅವರ ಅಧಿಕಾರ ವ್ಯಾಪ್ತಿಗೆ ಬರುವ ಕೆಲಸ ಅವರು ಮಾಡುತ್ತಿದ್ದಾರಷ್ಟೇ ಎಂದರು.

ಇದನ್ನೂ ಓದಿ: ಮೈಸೂರು: ಕುಕ್ಕರ್, ಐರನ್ ಬಾಕ್ಸ್ ಹಂಚಿದ್ದಾಗಿ ಹೇಳಿಕೆ, ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ದೂರು

ನಾಳೆ ಬೆಂಗಳೂರು ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಎಂಟಿಸಿ, ಕೆಎಸ್​ಆರ್​ಟಿಸಿ ಯೂನಿಯನ್ ಬಂದ್ ಬಗ್ಗೆ ನಿರ್ಣಯ ಮಾಡುತ್ತದೆ ಎಂದು ಹೇಳಿದ್ದಾರೆ.

ಡಿಸಿಎಂ ಹುದ್ದೆ ಬಗ್ಗೆ ಮಾತನಾಡುವುದು ಅನಾವಶ್ಯಕ

ಡಿಸಿಎಂ ಹುದ್ದೆ ಬಗ್ಗೆ ಮಾತನಾಡುವುದು ಅನಾವಶ್ಯಕ. ವೇಣುಗೋಪಾಲ್ ಅವರು ಸಹ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅನಾವಶ್ಯಕ ಗೊಂದಲ ಸೃಷ್ಟಿಸುವುದು ಬೇಕಿಲ್ಲ. ನೈಸ್ ರಸ್ತೆ ಅಕ್ರಮ ದಾಖಲೆ ವಿಚಾರವಾಗಿ ಮಾತನಾಡಿ, ನೈಸ್ ಅಕ್ರಮದ ಬಗ್ಗೆ ದಾಖಲೆಗಳು ಬಹಿರಂಗಗೊಳ್ಳಲಿ. ಸಂಬಂಧಿಸಿದ ಸಂಸ್ಥೆಗಳಿಗೆ ತನಿಖೆ ನೀಡಲಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.