50 ಹೊಸ ತಾಲೂಕುಗಳ ರಚನೆ ಜಾರಿಯಲ್ಲಿ ವಿಳಂಬ; ಸರ್ಕಾರದ ನಡೆಗೆ ಅಸಮಾಧಾನ, ಹೊಸ ಪ್ರಮಾಣಪತ್ರ ಸಲ್ಲಿಸಲು ಸೂಚನೆ

| Updated By: ಆಯೇಷಾ ಬಾನು

Updated on: Nov 30, 2021 | 1:52 PM

2018ರಲ್ಲಿ ರಚನೆಯಾದ ತಾಲೂಕುಗಳಲ್ಲಿ ಸೌಕರ್ಯ ಕಲ್ಪಿಸಿಲ್ಲ. ತಾಲೂಕು ಕಚೇರಿಗಳನ್ನು ಸ್ಥಾಪಿಸಿಲ್ಲವೆಂದು ಗುರುನಾಥ ವಡ್ಡೆ ಎಂಬುವವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಇಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆದಿದೆ. ವಿಚಾರಣೆ ವೇಳೆ ಸರ್ಕಾರದ ವಿಳಂಬ ನೀತಿಗೆ ಹೈಕೋರ್ಟ್ ಅಸಮಾಧಾನ ಹೊರ ಹಾಕಿದೆ.

50 ಹೊಸ ತಾಲೂಕುಗಳ ರಚನೆ ಜಾರಿಯಲ್ಲಿ ವಿಳಂಬ; ಸರ್ಕಾರದ ನಡೆಗೆ ಅಸಮಾಧಾನ, ಹೊಸ ಪ್ರಮಾಣಪತ್ರ ಸಲ್ಲಿಸಲು ಸೂಚನೆ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: 50 ಹೊಸ ತಾಲೂಕುಗಳ ರಚನೆ ಜಾರಿಯಲ್ಲಿ ವಿಳಂಬ ಹಿನ್ನೆಲೆ‌ಯಲ್ಲಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಕೈಗೆತ್ತಿಕೊಂಡಿದ್ದು ಪಿಐಎಲ್ ವಿಚಾರಣೆ ನಡೆಸಿದೆ. ರಾಜ್ಯ ಸರ್ಕಾರದ ಮೇಲೆ ಹೈಕೋರ್ಟ್ ವಿಭಾಗೀಯ ಪೀಠ ಅಸಮಾಧಾನ ಹೊರ ಹಾಕಿದ್ದು ಹೊಸ ಪ್ರಮಾಣಪತ್ರ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿದೆ.

2018ರಲ್ಲಿ ರಚನೆಯಾದ ತಾಲೂಕುಗಳಲ್ಲಿ ಸೌಕರ್ಯ ಕಲ್ಪಿಸಿಲ್ಲ. ತಾಲೂಕು ಕಚೇರಿಗಳನ್ನು ಸ್ಥಾಪಿಸಿಲ್ಲವೆಂದು ಗುರುನಾಥ ವಡ್ಡೆ ಎಂಬುವವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಇಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆದಿದೆ. ವಿಚಾರಣೆ ವೇಳೆ ಸರ್ಕಾರದ ವಿಳಂಬ ನೀತಿಗೆ ಹೈಕೋರ್ಟ್ ಅಸಮಾಧಾನ ಹೊರ ಹಾಕಿದೆ. ಸದ್ಯ ಇದಕ್ಕೆ ಹಣಕಾಸಿನ ಕೊರತೆಯ ಕಾರಣ ಹೇಳಿ ರಾಜ್ಯ ಸರ್ಕಾರ ತಪ್ಪಿಸಿಕೊಳ್ಳಲು ಮುಂದಾಗಿದ್ದು ಸರ್ಕಾರದ ನಿಲುವನ್ನು ಹೈಕೋರ್ಟ್ ವಿಭಾಗೀಯ ಪೀಠ ತಳ್ಳಿ ಹಾಕಿದೆ.

ಹೊಸ ಪ್ರಮಾಣಪತ್ರ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ. ಸರ್ಕಾರ ಶೀಘ್ರ ಮೂಲ ಸೌಕರ್ಯ ಕಲ್ಪಿಸಬೇಕು. ಇಲ್ಲವಾದರೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಜರಾಗಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ.

ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ರಾಜ್ಯದಲ್ಲಿ ಹೊಸ ತಾಲೂಕುಗಳನ್ನು ರಚಿಸಲು, ದಶಕಗಳಿಂದ ಇದ್ದ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ 50 ಹೊಸ ತಾಲೂಕುಗಳನ್ನು ರಚನೆ ಮಾಡಿತ್ತು. 2018ರ ಜನವರಿಯಲ್ಲಿ ನೂತನ ತಾಲೂಕು ಕೇಂದ್ರಗಳಲ್ಲಿ ತಾಲೂಕು ಕಚೇರಿಗಳನ್ನು ತೆರೆದು ಕಾರ್ಯಾರಂಭ ಮಾಡಲು ಆದೇಶ ಹೊರಡಿಲಾಗಿತ್ತು. ಆದ್ರೆ ಎಲ್ಲಾ ಹೊಸ ತಾಲೂಕುಗಳಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಅಧಿಕೃತವಾಗಿ ಆರಂಭವಾಗಿರಲಿಲ್ಲ. ಹೀಗಾಗಿ ಗುರುನಾಥ ವಡ್ಡೆ 2018ರಲ್ಲಿ ರಚನೆಯಾದ ತಾಲೂಕುಗಳಲ್ಲಿ ಸೌಕರ್ಯ ಕಲ್ಪಿಸಿಲ್ಲ. ತಾಲೂಕು ಕಚೇರಿಗಳನ್ನು ಸ್ಥಾಪಿಸಿಲ್ಲವೆಂದು ಪಿಐಎಲ್ ಸಲ್ಲಿಸಿದ್ದರು.

ಇದನ್ನೂ ಓದಿ: ಆರೋಪಿ ಕೋರಿಕೆಯಂತೆ ಎಸ್ಐಟಿ ರಚನೆ- ಯುವತಿ ವಕೀಲೆ ಆಕ್ಷೇಪ; ನಾವು ಯಾರಿಗೂ ಕೇರ್ ಮಾಡೊಲ್ಲ ಎಂದ ಹೈಕೋರ್ಟ್ ಸಿಜೆ

Published On - 1:51 pm, Tue, 30 November 21