ಬೆಂಗಳೂರಿನಲ್ಲಿ ಡೆಂಗ್ಯೂ ಹೆಚ್ಚಳ: ಸೊಳ್ಳೆ ನಿಯಂತ್ರಣಕ್ಕೆ ಓವಿ ಟ್ರ್ಯಾಪ್ ಅಳವಡಿಸಿದ ಬಿಬಿಎಂಪಿ

| Updated By: ಆಯೇಷಾ ಬಾನು

Updated on: Aug 26, 2024 | 12:09 PM

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ಹೀಗಾಗಿ ಆರೋಗ್ಯ ಇಲಾಖೆ ಹಾಘೂ ಬಿಬಿಎಂಪಿ ಸೊಳ್ಳೆಗಳು ಹೆಚ್ಚಿರೋ ಕಡೆ ಓವಿ ಟ್ರ್ಯಾಪ್ ಸಾಧನವನ್ನು ಅಳವಡಿಸಲು ಮುಂದಾಗಿದೆ. ಓವಿ ಟ್ರ್ಯಾಪ್ ಸಾಧನವು ಸೊಳ್ಳೆಗಳು, ಸೊಳ್ಳೆಗಳ ಮೊಟ್ಟೆ ನಾಶಪಡಿಸಲಿದೆ.

ಬೆಂಗಳೂರಿನಲ್ಲಿ ಡೆಂಗ್ಯೂ ಹೆಚ್ಚಳ: ಸೊಳ್ಳೆ ನಿಯಂತ್ರಣಕ್ಕೆ ಓವಿ ಟ್ರ್ಯಾಪ್ ಅಳವಡಿಸಿದ ಬಿಬಿಎಂಪಿ
ಡೆಂಗ್ಯೂ ಪರೀಕ್ಷೆ (ಸಾಂದರ್ಭಿಕ ಚಿತ್ರ)
Image Credit source: Getty Images
Follow us on

ಬೆಂಗಳೂರು, ಆಗಸ್ಟ್​.26: ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ (Dengue) ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ (Karnataka Health Department)  ಓವಿ ಟ್ರ್ಯಾಪ್ ಅಳವಡಿಕೆಗೆ ಮುಂದಾಗಿದೆ. ಓವಿ ಟ್ರ್ಯಾಪ್ ಅಳವಡಿಕೆಗೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರು ಇಂದು ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಚಾಲನೆ ನೀಡಿದರು. ಓವಿ ಟ್ರ್ಯಾಪ್ ಸಾಧನವು ಸೊಳ್ಳೆಗಳು, ಸೊಳ್ಳೆಗಳ ಮೊಟ್ಟೆ ನಾಶಪಡಿಸಲಿದೆ.

ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯಿಂದ ಓವಿ ಟ್ರ್ಯಾಪ್ ಅಳವಡಿಕೆ ಕಾರ್ಯ ಶುರುವಾಗಿದೆ. ಸೊಳ್ಳೆಗಳು ಹೆಚ್ಚಿರೋ ಕಡೆ ಈ ಸಾಧನ ಅಳವಡಿಸಿ ಕಂಟ್ರೋಲ್ ಗೆ ಪ್ಲಾನ್ ಮಾಡಲಾಗಿದೆ. ಡೆಂಗ್ಯೂ, ಮಲೇರಿಯಾ ಸೊಳ್ಳೆಗಳನ್ನ ಕಂಟ್ರೋಲ್ ಮಾಡಲು ಪ್ಲಾನ್ ಮಾಡಲಾಗಿದೆ.

ಏನಿದು ಬಯೋ ಟ್ರ್ಯಾಪ್? ಇದು ಹೇಗೆ ಕಾರ್ಯ ನಿರ್ವಹಿಸುತ್ತೆ?

  • ಇನ್ನು ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನಲ್ಲಿ ಡೆಂಘೀ, ಮಲೇರಿಯಾ ಕಂಟ್ರೋಲ್​ ಮಾಡಲಾಗ್ತಿದೆ​. ನಗರದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಓವಿ ಟ್ರ್ಯಾಪ್ ಅಳವಡಿಸಿದ್ದೇವೆ. ಪ್ರಾಯೋಗಿಕವಾಗಿ ಈ ಸಾಧನ ಅಳವಡಿಸಲಾಗ್ತಿದೆ. ಇದರಿಂದ ಸೊಳ್ಳೆಗಳ ನಿಯಂತ್ರಣ ಜೊತೆಗೆ ಎಷ್ಟಿದೆ ಅಂತಾ ಗೊತ್ತಾಗುತ್ತೆ. ಮುಂಬೈನ ಧಾರವಿ ಕೊಳಗೇರಿ ಪ್ರದೇಶದಲ್ಲೂ ಪ್ರಯೋಗ ನಡೀತಿದೆ. ಅದೇ ರೀತಿ ಬೆಂಗಳೂರಲ್ಲೂ ಕಂಟ್ರೋಲ್ ಮಾಡಲು ಹೊರಟಿದ್ದೇವೆ. ಸೊಳ್ಳೆಗಳ ನಿಯಂತ್ರಣದಿಂದ ವೈರಸ್​ಗಳ​​ ಕಂಟ್ರೋಲ್​ಗೆ ಸಹಕಾರಿ ಆಗಲಿದೆ ಎಂದರು.

    ರಾಜ್ಯದಲ್ಲಿ ನಿನ್ನೆ ಹೊಸದಾಗಿ 196 ಡೆಂಗ್ಯೂ ಕೇಸ್‌ಗಳು ದೃಢಪಪಟ್ಟಿದ್ದವು. ಈ ಮೂಲಕ 1,229 ಡೆಂಗ್ಯೂ ಕೇಸ್‌ಗಳು ಸಕ್ರಿಯವಾಗಿವೆ. ಡೆಂಗ್ಯೂ ದೃಢಪಟ್ಟವರಲ್ಲಿ 206 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು 10 ಸಾವಿರ ಗಡಿ ದಾಟಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಮೊನ್ನೆಯಷ್ಟೇ 199 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, 1182 ಕೇಸ್‌ಗಳು ಸಕ್ರಿಯವಾಗಿದ್ದವು. ಮೂಲಗಳ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದರೆ ಬೆಂಗಳೂರಿನಲ್ಲೇ 10,511 ಡೆಂಗ್ಯೂ ಸೋಂಕಿತರಿದ್ದಾರೆ. ಇತ್ತೀಚಿಗೆ ಸತತವಾಗಿ ಸುರಿದ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ ಎಂದು ಕೆಲ ತಜ್ಞರು ಅಂದಾಜಿಸಿದ್ದಾರೆ.

    ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:50 am, Mon, 26 August 24