BDA ಮೇಲೆ ACB ದಾಳಿ ಪ್ರಕರಣ; ಉದ್ಯಮಿಗಳಿಂದ ಸಾಲು ಸಾಲು ದೂರು

| Updated By: sandhya thejappa

Updated on: Nov 22, 2021 | 9:32 AM

ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಹಳೆ ದಾಖಲಾತಿಗಳನ್ನು ಕೆದಕುತ್ತಿದ್ದಾರೆ. 2020, 2019, 2018, 2017 ರ ವರೆಗಿನ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಒಂದೊಂದು ಫೈಲ್​ಗೂ ಒಂದೊಂದು ಎಫ್ಐಆರ್ ದಾಖಲಿಸಲು ಎಸಿಬಿ ತೀರ್ಮಾನಿಸಿದೆ.

BDA ಮೇಲೆ ACB ದಾಳಿ ಪ್ರಕರಣ; ಉದ್ಯಮಿಗಳಿಂದ ಸಾಲು ಸಾಲು ದೂರು
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಇನ್ನು ಸಂಪೂರ್ಣವಾಗಿ ಅಂತ್ಯವಾಗಿಲ್ಲ. ಸದ್ಯ ಅಧಿಕಾರಿಗಳು ಸರ್ಕಾರಿ ರಜೆ ಅಂತ ಗ್ಯಾಪ್ ಕೊಟ್ಟಿದ್ದು, ಬಿಡಿಎ ಬೀಗದ ಕೀ ಅವರ ಬಳಿಯೇ ಇದೆ. ನವೆಂಬರ್ 25ರ ವರೆಗೆ ಸರ್ಚ್ ವಾರೆಂಟ್ ಹೊಂದಿರುವ ಎಸಿಬಿ, ಅವಶ್ಯಕತೆ ಇದ್ದರೆ ಮತ್ತೆ ಸರ್ಚ್ ವಾರೆಂಟ್ ಹೆಚ್ಚುವರಿ ದಿನ ನೀಡುವಂತೆ ಕೋರ್ಟ್​ಗೆ ಮನವಿ ಮಾಡಲಿದ್ದಾರೆ. ಮೂವರು ಎಸ್ಪಿಗಳ ನೇತ್ರತ್ವದಲ್ಲಿ ನಡೆಯುತ್ತಿರುವ ಈ ದಾಳಿ ನಾಳೆ ಬೆಳಿಗ್ಗೆಯಿಂದ ಮತ್ತೆ ಮುಂದುವರೆಯಲಿದೆ.

ಬಿಡಿಎ ಅಧಿಕಾರಿಗಳಿಂದ ವಿವಿಧ ಮಾದರಿಯಲ್ಲಿ ಜನರಿಗೆ ಹಾಗು ಸರ್ಕಾರಕ್ಕೆ ವಂಚನೆಯಾಗಿದೆ. ಬ್ರೋಕರ್​ಗಳ ಮೂಲಕ ಹಣ ಪಡೆದು ವಂಚಿಸಿದ್ದಾರೆ. ಈ ಹಿಂದೆ ಅಂದರೆ 2000ನೇ ಇಸವಿ ಹಾಗೂ ಅದಕ್ಕಿಂತ ಹಿಂದೆ ಮಾರಿದ್ದ ಸೈಟ್​ಗಳನ್ನ ಮತ್ತೆ ಮತ್ತೆ ಮಾರಾಟ ಮಾಡಿದ್ದಾರೆ. ಪ್ರೈಮ್ ಏರಿಯಾದಲ್ಲಿ ನೀಡಬೇಕಿರುವ ಸೈಟ್ ಬೇರೆಯವರಿಗೆ ನೀಡಿ ಅದಕ್ಕೆ ಪ್ರತಿಯಾಗಿ ಬೇರೆಡೆ ಸೈಟ್ ನೀಡಲಾಗಿದೆ. ಅರ್ಹತೆ ಇಲ್ಲದವರಿಗೂ ಸೈಟ್ ನೀಡಲಾಗಿದೆ. ಭೂ ಸ್ವಾಧೀನ ಪಡೆಯುವಾಗಲೂ ಅಕ್ರಮ ಎಸೆದಿದ್ದಾರೆ. ಹೀಗೆ ಹಣ ಮಾಡುವ ಉದ್ದೇಶಕ್ಕೆ ಸರ್ಕಾರಕ್ಕೆ ಮತ್ತು ಜನರಿಗೆ ವಂಚಿಸಿರುವ ಬಗ್ಗೆ ದಾಖಲಾತಿ ಲಭ್ಯವಾಗಿದೆ.

ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಹಳೆ ದಾಖಲಾತಿಗಳನ್ನು ಕೆದಕುತ್ತಿದ್ದಾರೆ. 2020, 2019, 2018, 2017 ರ ವರೆಗಿನ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಒಂದೊಂದು ಫೈಲ್​ಗೂ ಒಂದೊಂದು ಎಫ್ಐಆರ್ ದಾಖಲಿಸಲು ಎಸಿಬಿ ತೀರ್ಮಾನಿಸಿದೆ. ಪ್ರತಿಯೊಂದು ಕೇಸ್ ಅತಿ ಮುಖ್ಯ ಅಂತ ಎಸಿಬಿ ಅಧಿಕಾರಿಗಳು ಹೇಳುತ್ತಿದ್ದಾರೆ. ಅಂದಾಜಿನ ಪ್ರಕಾರ ನಲವತ್ತರಿಂದ ಐವತ್ತಕ್ಕೂ ಹೆಚ್ಚು ಎಫ್ಐಆರ್ ದಾಖಲಾಗುವ ಸಾಧ್ಯತೆಯಿದೆ.

ಸಾಲು ಸಾಲು ದೂರುಗಳು
ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೆ ಬಿಡಿಎ ವಿರುದ್ಧ ಸಾಲು ಸಾಲು ದೂರುಗಳು ಬರುತ್ತಿವೆ. ಬಿಡಿಎನಿಂದ ವಂಚಿತರಾದ ಉದ್ಯಮಿಗಳು, ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ದಾಖಲೆಗಳ ಸಹಿತ ವಂಚಿತರಾದರು ದೂರು ನೀಡುತ್ತಿದ್ದಾರೆ. ಇದುವರೆಗೆ ಸುಮಾರು ಮೂವತ್ತಕ್ಕು ಹೆಚ್ಚು ದೂರು ಬಂದಿವೆ.

ಇದನ್ನೂ ಓದಿ

ಎಸಿಬಿ ದಾಳಿ ಸ್ವಾಗತಿಸುವೆ, ದಾಖಲೆಗಳ ನೀಡಿ ಸಹಕರಿಸುವೆ, ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ -ಬಿಡಿಎ ಅಧ್ಯಕ್ಷ ವಿಶ್ವನಾಥ್

ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ: 75 ಕೋಟಿ ಮೌಲ್ಯದ 6 ನಿವೇಶನಗಳ ನಕಲಿ ದಾಖಲೆ ಪತ್ತೆ

Published On - 9:31 am, Mon, 22 November 21