ಇಸ್ರೋ ಗಗನಯಾನ ಯೋಜನೆ ಕರ್ನಾಟಕದಲ್ಲಿ ಉಳಿಸಿಕೊಳ್ಳಲು ನಮ್ಮ ಹೋರಾಟ ಮುಂದುವರಿಯುತ್ತದೆ; ಡಿಕೆ ಶಿವಕುಮಾರ್

| Updated By: sandhya thejappa

Updated on: Dec 01, 2021 | 4:03 PM

ಸುಮಾರು 25 ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ. ಈ ಯೋಜನೆ ಕರ್ನಾಟಕದಲ್ಲಿ ಉಳಿಸಿಕೊಳ್ಳಲು ನಮ್ಮ ಹೋರಾಟ ಮುಂದುವರಿಯುತ್ತದೆ. ಇಡೀ ದಕ್ಷಿಣ ಭಾರತದ ವಿಜ್ಞಾನಿಗಳು ಇಲ್ಲಿಯೇ ಬಂದು ಕೆಲಸ ಮಾಡುತ್ತಿದ್ದಾರೆ.

ಇಸ್ರೋ ಗಗನಯಾನ ಯೋಜನೆ ಕರ್ನಾಟಕದಲ್ಲಿ ಉಳಿಸಿಕೊಳ್ಳಲು ನಮ್ಮ ಹೋರಾಟ ಮುಂದುವರಿಯುತ್ತದೆ; ಡಿಕೆ ಶಿವಕುಮಾರ್
ಇಸ್ರೋ ಗಗನಯಾನ ಯೋಜನೆಯ ಸ್ಥಳಾಂತರಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ
Follow us on

ಬೆಂಗಳೂರು: ಇಸ್ರೋ ಗಗನಯಾನ ಯೋಜನೆಯ ಸ್ಥಳಾಂತರಕ್ಕೆ ವಿರೋಧಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಭಟನಾ ಸ್ಥಳದಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಯೋಜನೆ ಸ್ಥಳಾಂತರ ಮಾಡದಂತೆ ನಾನು ಪತ್ರ ಬರೆದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಸಿಎಂಗೆ ಪತ್ರ ಬರೆದಿದ್ದೇನೆ. ರಾಜ್ಯದ 25 ಸಂಸದರು ಹೋಗಿ ಪ್ರಧಾನಿ ಬಳಿ ಮಾತಾಡಿ. ರಾಜ್ಯದ ಗೌರವ ಹೋಗುವ ಕೆಲಸ ಆಗುವುದು ಬೇಡ. ರಾಜ್ಯದ ಗೌರವ ಕಾಪಾಡಿ ಅಂತ ಹೇಳಿದ್ದಾರೆ.

ಸುಮಾರು 25 ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ. ಈ ಯೋಜನೆ ಕರ್ನಾಟಕದಲ್ಲಿ ಉಳಿಸಿಕೊಳ್ಳಲು ನಮ್ಮ ಹೋರಾಟ ಮುಂದುವರಿಯುತ್ತದೆ. ಇಡೀ ದಕ್ಷಿಣ ಭಾರತದ ವಿಜ್ಞಾನಿಗಳು ಇಲ್ಲಿಯೇ ಬಂದು ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾನೇ ಮುಂದಾಳತ್ವ ವಹಿಸಿಕೊಳ್ಳುತ್ತೇನೆ. ನಾವು ಬಂಧನಕ್ಕೆ ಹೆದರಲ್ಲ ಅಂತ ಡಿಕೆಶಿ ಅಭಿಪ್ರಾಯಪಟ್ಟರು.

ಪಿಎಂ, ಸಿಎಂಗೆ ಪತ್ರ ಬರೆದ ಡಿಕೆಶಿ
ಮಾನವಸಹಿತ ಗಗನಯಾನ ಕಾರ್ಯಕ್ರಮ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಮಾನವಸಹಿತ ಗಗನಯಾನ ಕಾರ್ಯಕ್ರಮವು ಬೆಂಗಳೂರಿನಿಂದ ಗುಜರಾತ್​ಗೆ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಗಗನಯಾನ ಯೋಜನೆ ಅನುಷ್ಠಾನ ಒಂದು ಜವಾಬ್ದಾರಿ. ಮಾನವಸಹಿತ ಗಗನಯಾನದಲ್ಲಿ ಭಾರತ 4ನೇ ರಾಷ್ಟ್ರವಾಗಲಿದೆ. ಕರ್ನಾಟಕದಲ್ಲಿ ಇಂತಹ ಗಗನಯಾನ ಯೋಜನೆಯಿಂದ ಕನ್ನಡಿಗರು ಹೆಮ್ಮೆಪಡುತ್ತಾರೆ. ಈ ಯೋಜನೆ ಗುಜರಾತ್​ಗೆ ಸ್ಥಳಾಂತರಿಸುವ ಪ್ರಸ್ತಾವನೆ ಇದೆ. ಈ ಪ್ರಸ್ತಾವನೆಯಿಂದ ಕನ್ನಡಿಗರು ಆಘಾತಕ್ಕೊಳಗಾಗಿದ್ದಾರೆ. ಹೀಗಾದರೆ, ಕೇಂದ್ರ ಸರಕಾರ ಸ್ಥಳೀಯರ ಭಾವನೆಗಳಿಗೆ ಮಣಿಯದೆ, ದ್ರೋಹ ಬಗೆದಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆಯಾಗಿದೆ ಎಂದು ಕನ್ನಡಿಗರಿಗೆ ಅನಿಸುತ್ತದೆ. ಈ ಕ್ರಮವು ರಾಷ್ಟ್ರದಲ್ಲಿ ಒಕ್ಕೂಟ ವ್ಯವಸ್ಥೆಯ ಬಲವರ್ಧನೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತದೆ ಅಂತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ

ಮಾನವಸಹಿತ ಗಗನಯಾನ ಕಾರ್ಯಕ್ರಮ ಸ್ಥಳಾಂತರ ಮಾಡದಂತೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿಗೆ ಮನವಿ ಪತ್ರ ಬರೆದ ಡಿಕೆ ಶಿವಕುಮಾರ್

GST Collection: ನವೆಂಬರ್​ನಲ್ಲಿ ಜಿಎಸ್​ಟಿ 1,31,526 ಕೋಟಿ ರೂ. ಸಂಗ್ರಹ; ಹೊಸ ತೆರಿಗೆ ಬಂದ ಮೇಲೆ ಎರಡನೇ ಅತ್ಯಧಿಕ ಮೊತ್ತ

Published On - 3:01 pm, Wed, 1 December 21