ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣಿಸುತ್ತಿರುವುದಕ್ಕೆ ಸರ್ಕಾರ ಜಾರಿಗೆ ತಂದಿರುವ ಕೊರೊನಾ ಕಠಿಣ ನಿಯಮಾವಳಿಗಳು ಕಾರಣ. ಅವು ನಮಗೇ ಅರ್ಥವಾಗುತ್ತಿಲ್ಲ, ಇನ್ನು ಜನಸಾಮಾನ್ಯರಿಗೆ ಅರ್ಥವಾಗುತ್ತಾ? ಸೋಂಕಿತರಿಗೆ ಆಕ್ಸಿಜನ್, ರೆಮ್ಡೆಸಿವರ್, ವೆಂಟಿಲೇಟರ್ ಸಿಗ್ತಾ ಇಲ್ಲ. ಇನ್ನೊಂದೆಡೆ ಕೊರೊನಾ ಲಸಿಕೆ ವಿತರಣೆಯೂ ಸರಿಯಾಗಿ ಆಗ್ತಾ ಇಲ್ಲ. ಹೀಗಿದ್ದಾಗ ಪ್ರಧಾನಿ ಮೋದಿ ಪ್ರವಚನವನ್ನು ಜನ ಇನ್ನು ಕೇಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಅಂಗಡಿ, ಮುಂಗಟ್ಟು ಮುಚ್ಚಿಸಿದರೆ ತೆರಿಗೆ ಸಂಗ್ರಹವೇಕೆ? ಎಲ್ಲಾ ರೀತಿಯ ತೆರಿಗೆ ಸಂಗ್ರಹಿಸಲಾಗ್ತಾ ಇದೆ. ಇನ್ನೊಂದೆಡೆ ಉಸ್ತುವಾರಿ ಸಚಿವರಿಗೆ ಜಿಲ್ಲೆಗೆ ತೆರಳಲು ಮುಖ್ಯಮಂತ್ರಿ ಸೂಚನೆ ನೀಡಿದ್ದರೂ ಸಚಿವ ಬಿ.ಶ್ರೀರಾಮುಲು ಪ್ರಚಾರದಲ್ಲಿ ತೊಡಗಿದ್ದಾರೆ. ಅವರ ಮೇಲೆ ಕೇಸ್ ದಾಖಲಿಸಬೇಕು ಎಂದು ಸಿಡಿಮಿಡಿಗೊಂಡಿದ್ದಾರೆ.
ರಾಜ್ಯದಲ್ಲಿ ಹಾಗೂ ದೇಶದಲ್ಲಿ ಉಚಿತ ಕೊರೊನಾ ಲಸಿಕೆ ವಿತರಣೆ ಆಗಬೇಕು. ಇಲ್ಲಿನ್ನೂ ಆಕ್ಸಿಜನ್ ಸಮಸ್ಯೆಯೇ ಬಗೆಹರಿದಿಲ್ಲ. ಅಗತ್ಯ ವೈದ್ಯಕೀಯ ಸೇವೆ ಲಭ್ಯವಾಗುತ್ತಿಲ್ಲ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ. ಕೊರೊನಾ ಸರ್ಟಿಫಿಕೇಟ್ನಲ್ಲೂ ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ ನಲಪ್ಪಾಡ್ ಕೇಸ್ ಬಗ್ಗೆ ಮಾತನಾಡಿ, ಅದೆಲ್ಲವೂ ಬೋಗಸ್ ಕಂಪ್ಲೆಂಟ್ ಸುಮ್ಮನೇ ರಾಜಕೀಯಕ್ಕಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಕೊರೊನಾ ದೃಢಪಟ್ಟರೆ ಆತಂಕ ಪಡಬೇಡಿ, ಜನರು ಪ್ರಾಣಾಯಾಮ ಮಾಡಬೇಕು -ಡಾ. ಕೆ.ಸುಧಾಕರ್