Dog Car Attack: ಮಾಲೀಕರ ಮೇಲಿನ ಕೋಪಕ್ಕೆ ಕಾರಿನ ಬೊನೆಟ್ ಪೀಸ್ ಪೀಸ್ ಮಾಡಿದ್ದ ನಾಯಿ, ಚಿರತೆ ಭೀತಿಯಲ್ಲಿದ ಜನರಿಗೆ ಅಚ್ಚರಿ
ನಿವಾಸಿಗಳ ಕರೆಗೆ ಸ್ಪಂದಿಸಿ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ಅಪಾರ್ಟ್ ಮೆಂಟ್ ಸುತ್ತಾ ಮುತ್ತಾ ಸರ್ಚಿಂಗ್ ಶುರು ಮಾಡಿದ್ದಾರೆ. ಎಷ್ಟೇ ಹುಡಕಿದ್ರೂ, ಸಿಸಿಟಿವಿ ಗಮನಿಸಿದ್ರೂ ಚಿರತೆ ಓಡಾಟ ಪತ್ತೆಯಾಗಿಲ್ಲ, ಬಳಿಕ ಕಾರಿನ ಮುಂಭಾಗ ಹಾಗೂ ಡೋರ್ ಬಳಿ ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಆ ಪ್ರಾಣಿಯ ಹೆಜ್ಜೆ ಗುರುತು ಪತ್ತೆಯಾಗಿದೆ.
ಹುಳಿಮಾವು: ಕಾರಿನ ಮುಂಭಾಗವನ್ನು ಪ್ರಾಣಿಯೊಂದು ಕಚ್ಚಿ ಪೀಸ್ ಪೀಸ್ ಮಾಡಿದ್ದನ್ನು ನೋಡಿದ ಅಪಾರ್ಟ್ಮೆಂಟ್ ನಿವಾಸಿಗಳು, ಚಿರತೆ ಬಂದಿದೆ ಅಂತ ಆತಂಕಕ್ಕೀಡಾಗಿದ್ದಾರೆ. ಬೆಂಗಳೂರಿನ ಹುಳಿಮಾವು ಬಳಿಯ ಹೀರಾನಂದಿನಿ ಅಪಾರ್ಟ್ಮೆಂಟ್ ಒಳಗಡೆ ಪಾರ್ಕಿಂಗ್ ಲಾಟ್ ನಲ್ಲಿ ಈ ಘಟನೆ ನಡೆದಿದೆ. ಬಿಲ್ಡಿಂಗ್ ನ ಬೇಸ್ಮೆಂಟ್ ಒಳಗಡೆ ಪಾರ್ಕ್ ಮಾಡಲಾಗಿದ್ದ ಕಾರಿನ ಮುಂಭಾಗವನ್ನು ಪ್ರಾಣಿಯೊಂದು ಕಚ್ಚಿ ಪೀಸ್ ಪೀಸ್ ಮಾಡಿತ್ತು. ಕಾರಿನ ಪರಿಸ್ಥಿತಿ ಗಮನಿಸಿದ ಕಾರ್ ಮಾಲೀಕರು ಇದು ಚಿರತೆಯದ್ದೇ ಉಪಟಳ ಅಂತ ಪೊಲೀಸರಿಗೆ ಫೋನ್ ಮಾಡಿದ್ದಾರೆ.
ನಿವಾಸಿಗಳ ಕರೆಗೆ ಸ್ಪಂದಿಸಿ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ಅಪಾರ್ಟ್ ಮೆಂಟ್ ಸುತ್ತಾ ಮುತ್ತಾ ಸರ್ಚಿಂಗ್ ಶುರು ಮಾಡಿದ್ದಾರೆ. ಎಷ್ಟೇ ಹುಡಕಿದ್ರೂ, ಸಿಸಿಟಿವಿ ಗಮನಿಸಿದ್ರೂ ಚಿರತೆ ಓಡಾಟ ಪತ್ತೆಯಾಗಿಲ್ಲ, ಬಳಿಕ ಕಾರಿನ ಮುಂಭಾಗ ಹಾಗೂ ಡೋರ್ ಬಳಿ ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಆ ಪ್ರಾಣಿಯ ಹೆಜ್ಜೆ ಗುರುತು ಪತ್ತೆಯಾಗಿದೆ. ಹಜ್ಜೆ ಪ್ರಕಾರ ಕಾರಿನ ಮುಂಭಾಗ ಕಚ್ಚಿ ಹಾಕಿದ್ದು, ಚಿರತೆಯಲ್ಲ ಬದಲಿಗೆ ನಾಯಿ ಅಂತ ಗೊತ್ತಾಗಿದೆ. ಅಪಾರ್ಟ್ಮೆಂಟ್ ನವರದ್ದೇ ಸಾಕಿರುವ ನಾಯಿ ಸಿಟ್ಟಿನಿಂದ ಈ ಕೆಲಸ ಮಾಡಿರಬಹುದು ಅಂತ ಅರಣ್ಯ ಸಿಬ್ಬಂದಿ ಅಭಿಪ್ರಾಯ ಪಟ್ಟಿದ್ದಾರೆ. ಮನೆಯ ಮಾಲೀಕರು ನಾಯಿಯನ್ನು ಹೊರಗಡೆ ಬಿಟ್ಟು ಬೇರೆಡೆ ಹೋಗಿದ್ದಾರೆ ಹಸಿವು ತಾಳಲಾರದೇ ರಾತ್ರಿ ವೇಳೆ ನಾಯಿ ಕಾರಿನ ಬೊನೆಟ್ ಪೀಸ್ ಪೀಸ್ ಮಾಡಿದೆ. ತಮ್ಮ ಅಪಾರ್ಟ್ಮೆಂಟ್ ಒಳಗಡೆ ಚಿರತೆ ಬಂದಿದೆ ಅಂತ ಆತಂಕಗೊಂಡು ಮಕ್ಕಳಿಗೆ ಶಾಲೆ ಕಾಲೇಜುಗಳಿಗೆ ಕಳುಹಿಸದ ಪೋಷಕರು, ನಾಯಿ ವಿಚಾರ ತಿಳಿದ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಅರಣ್ಯ ಸಿಬ್ಬಂದಿ ಆ ನಾಯಿಯನ್ನು ಹುಡುಕಿ ಅದರ ಆರೋಗ್ಯ ಪರೀಕ್ಷಿಸುವ ಕೆಲಸ ಮಾಡುತ್ತಿದ್ದಾರೆ.
ವರದಿ: ಸೈಯ್ಯದ್ ನಿಜಾಮುದ್ದೀನ್