ಬೆಂಗಳೂರು: ಬೈಕ್ ಕೀ ವಿಚಾರಕ್ಕೆ ಸಹೋದ್ಯೋಗಿಗಳ ಮಧ್ಯೆ ಗಲಾಟೆ, ಓರ್ವನ ಕೊಲೆಯಲ್ಲಿ ಅಂತ್ಯ

ಮಾಲೀಕ ನೀಡಿದ್ದ ಬೈಕ್​ಗಾಗಿ ಸಹೋದ್ಯೋಗಿಗಳ ನಡುವೆ ಗಲಾಟೆಯಾಗಿದ್ದು, ಕೊನೆಗೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.

ಬೆಂಗಳೂರು: ಬೈಕ್ ಕೀ ವಿಚಾರಕ್ಕೆ ಸಹೋದ್ಯೋಗಿಗಳ ಮಧ್ಯೆ ಗಲಾಟೆ, ಓರ್ವನ ಕೊಲೆಯಲ್ಲಿ ಅಂತ್ಯ
ಪ್ರಾತಿನಿಧಿಕ ಚಿತ್ರ
Edited By:

Updated on: Jul 31, 2023 | 12:22 PM

ಬೆಂಗಳೂರು, (ಜುಲೈ 31): ಬೈಕ್ ಕೀ ವಿಚಾರಕ್ಕೆ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ (Murder) ಅಂತ್ಯವಾಗಿದೆ. ಬೆಂಗಳೂರಿನ (Bengaluru) ಹೊಸಕೆರೆಹಳ್ಳಿಯಲ್ಲಿ ನಿನ್ನೆ(ಜುಲೈ 31) ರಾತ್ರಿ ಈ ಘಟನೆ ನಡೆದಿದೆ. ಚಾಕುವಿನಿಂದ ಇರಿದು ನೇಪಾಳ‌ ಮೂಲದ ತಿಲಕ್ ಎಂಬಾತನನ್ನು ಸಹೋದ್ಯೋಗಿ ಸಿದ್ದರಾಜು ಹತ್ಯೆ ಮಾಡಿದ್ದಾನೆ.  ನೇಪಾಳ‌ ಮೂಲದ ತಿಲಕ್​ ಹಾಗೂ ಮಂಡ್ಯ ಮೂಲದ ಸಿದ್ದರಾಜು ಒಂದೇ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಓಡಾಡಲು ಅಂಗಡಿ ಮಾಲೀಕ ಬೈಕ್ ​ನೀಡಿದ್ದ. ಆದ್ರೆ, ನಿನ್ನೆ ರಾತ್ರಿ ರೂಮ್​ನಲ್ಲಿ ಇಬ್ಬರೂ ಮದ್ಯಪಾನ ಮಾಡಿ ಬೈಕ್​ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಸಿದ್ದರಾಜು, ತಿಲಕ್​ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಮೆಡಿಕಲ್ ಕಾಲೇಜ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಅನಾಥ ಶವಗಳ ಮೇಲೆ ನಡೆಯುತ್ತಿದ್ಯಾ ಹಣ ಮಾಡುವ ದಂಧೆ?

ಬೈಕ್ ಕೀ ನೀಡುವಂತೆ ತಿಲಕ್​ ಬಳಿ ಸಿದ್ದರಾಜು ಕೇಳಿದ್ದಾನೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದ ಗಲಾಟೆಯಾಗಿ ತಿಲಕ್​, ಸಿದ್ದರಾಜುಗೆ ಕುಕ್ಕರ್​ನಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಸಿದ್ದರಾಜು, ತಿಲಕ್​ಗೆ ಚಾಕುವಿನಿಂದ ಚುಚ್ಚಿದ್ದಾನೆ. ಪರಿಣಾಮ ಸಿದ್ದರಾಜು ಮೃತಪಟ್ಟಿದ್ದು, ಬಳಿಕ ಸಿದ್ದರಾಜು ಗಿರಿನಗರ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಲಿಸುತ್ತಿದ್ದ ಲಾರಿ ಹಿಂಬದಿಗೆ ಬೈಕ್ ಡಿಕ್ಕಿ-ಇಬ್ಬರು ಸಾವು

ಬೆಂಗಳೂರು, (ಜುಲೈ 31):ಚಲಿಸುತ್ತಿದ್ದ ಲಾರಿ ಹಿಂಬದಿಗೆ ಬೈಕ್​ ಡಿಕ್ಕಿಯಾಗಿದ್ದು, ಬೈಕ್​ ಸವಾರರಿಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕುಣಿಗಲ್ ಬೈ‌ಪಾಸ್‌ನಲ್ಲಿ ನಡೆದಿದೆ. ಬೈಕ್​ ಸವಾರರಾದ ವಿನೋದ್(32), ಪ್ರಕಾಶ್(29) ಮೃತ ಯುವಕರು. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇನ್ನಷ್ಟು ಕರ್ನಾಟಕ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:14 pm, Mon, 31 July 23

ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Loading...
Unable to load recommendations.
Follow Us