ಬೆಂಗಳೂರು: ನಶೆಯಲ್ಲಿ ಕಾರು ಗಾಜು ಒಡೆದು ಯುವಕನ ಪುಂಡಾಟ

|

Updated on: Aug 21, 2024 | 10:38 AM

ಬೆಂಗಳೂರಿನಲ್ಲಿ ಪುಂಡರ ಹಾವಳಿ ಮಿತಿ ಮೀರಿದೆ. ರೋಡ್ ರೇಜ್ ಕೇಸ್​ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ಯುವಕ ಕಾರಿನ ಗ್ಲಾಸ್​ ಒಡೆದು ಅಟ್ಟಹಾಸ ಮೆರೆದಿರುವ ಘಟನೆ ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನೆಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು: ನಶೆಯಲ್ಲಿ ಕಾರು ಗಾಜು ಒಡೆದು ಯುವಕನ ಪುಂಡಾಟ
ಯುವಕನ ಅಟ್ಟಹಾಸ
Follow us on

ಬೆಂಗಳೂರು, ಆಗಸ್ಟ್​ 21: ನಗರದಲ್ಲಿ (Bengaluru) ರೋಡ್ ರೇಜ್ ಕೇಸ್​ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ಯುವಕ ಕಾರಿನ ಗ್ಲಾಸ್​ ಒಡೆದು ಅಟ್ಟಹಾಸ ಮೆರೆದಿರುವ ಘಟನೆ ಸರ್ಜಾಪುರ ಮುಖ್ಯರಸ್ತೆಯ (Sarjapur Road) ದೊಡ್ಡಕನ್ನೆಹಳ್ಳಿಯಲ್ಲಿ ನಡೆದಿದೆ. ಗ್ಲಾಸ್ ಒಡೆಯುತ್ತಿದ್ದಂತೆ ಕಾರಿನ‌ ಒಳಗಿದ್ದವರು ಕಿರುಚಾಡಿದ್ದಾರೆ. ಕಾರಿನಲ್ಲಿ ಪುಟ್ಟ ಮಗು ಇದೆ ಎಂದು ಚಾಲಕ ಹೇಳಿದರೂ, ಕೇಳದ ಯುವಕ ಗಲಾಟೆ ಮುಂದುವರೆಸಿದ್ದಾನೆ. ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಯುವಕನ ಪುಂಡಾಟವನ್ನು ಕಾರಿನಲ್ಲಿದ್ದವರು ತಮ್ಮ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಲಾತಣಾದಲ್ಲಿ ಸಿಟಿಜನ್ಸ್​ ಮೂಮೆಂಟ್​ ಈಸ್ಟ್​ ಬೆಂಗಳೂರು ಎಂಬ ಹೆಸರಿನ ಖಾತೆ ಪೋಸ್ಟ್​ ಮಾಡಿದ್ದು, ವಿಡಿಯೋದಲ್ಲಿ ಯುವಕ ಗಾಜು ಒಡೆಯುವುದು ಮತ್ತು ಕಾರಿನಲ್ಲಿದ್ದ ಕುಟುಂಬ ಕಿರುಚಾಡಿದ್ದನ್ನು ಕಾಣಬಹುದು. ಕಾರು ಚಾಲಕ “ಕಾರು ಚಾಲ ಒಂದು ಸೆಕೆಂಡ್​ ತಾಳು, ಹೀಗೆಲ್ಲ ಮಾಡಬೇಡ. ಕಾರಿನಲ್ಲಿ ಮಗು ಇದೆ” ಎಂದು ಹೇಳಿದರೂ ಯುವಕ ಮಾತು ಕೇಳದೆ ತನ್ನ ಅಟ್ಟಹಾಸ ಮುಂದುವರೆಸಿದ್ದಾನೆ.

ಇದನ್ನೂ ಓದಿ: ಚೇಸ್​ ಮಾಡಿಕೊಂಡು ಬಂದು ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಿಡಿಗೇಡಿಗಳು

ಸ್ಥಳೀಯರು ಯುವಕನನ್ನು ತಡೆಯಲು ಯತ್ನಿಸಿದರೂ ಮಾತು ಕೇಳದೆ, ತನ್ನ ದರ್ಪ ತೋರಿಸಿದ್ದಾನೆ.
ಟ್ವೀಟ್​ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಸಂಖ್ಯೆ.532/2024 ಕಲಂ.126(2),324(4),351(2), r/w34 ಅಡಿಯಲ್ಲಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ. ಕೃತ್ಯ ಎಸಗಿದ ಆರೋಪಿ ನವೀನ್ ರೆಡ್ಡಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ವೀಡಿಯೋ ಹೊರಬಿದ್ದ ಕೂಡಲೇ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಬೆಂಗಳೂರಿನಲ್ಲಿ ಇಂತಹ ಘಟನೆಗಳು ಬಹಳ ಸಾಮಾನ್ಯವಾಗಿದೆ ಎಂದು ಕೆಲವರು ಎಕ್ಸ್​ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ