ಬೆಂಗಳೂರು: ಚೇಸ್​ ಮಾಡಿಕೊಂಡು ಬಂದು ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಿಡಿಗೇಡಿಗಳು

ಬೆಂಗಳೂರಿನಲ್ಲಿ ಪುಂಡರ ಹಾವಳಿ ಮಿತಿ ಮೀರಿದೆ. ಬೈಕ್​​ನಲ್ಲಿ ಹಿಂಬಾಲಿಸಿಕೊಂಡು ಬಂದು ಕಾರನ್ನು ಅಡ್ಡಗಟ್ಟಿ ಗಲಾಟೆ‌ ಮಾಡಿರುವ ಘಟನೆ ಇಂದಿರಾನಗರದಲ್ಲಿ ನಡೆದಿದೆ. ಮತ್ತೊಂದು ಘಟನೆಯಲ್ಲಿ ನಿಮಿಷಾಂಭ ದೇಗುಲದ ಸಿಗ್ನಲ್ ಬಳಿ ಫುಡ್ ಡೆಲಿವರಿ ಬಾಯ್​​ಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ.

ಬೆಂಗಳೂರು: ಚೇಸ್​ ಮಾಡಿಕೊಂಡು ಬಂದು ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಿಡಿಗೇಡಿಗಳು
ಕಾರು ಅಡ್ಡಗಟ್ಟಿದ ಕಿಡಿಗೇಡಿಗಳು
Follow us
| Updated By: ವಿವೇಕ ಬಿರಾದಾರ

Updated on: Aug 20, 2024 | 3:07 PM

ಬೆಂಗಳೂರು, ಆಗಸ್ಟ್​ 20: ನಗರದಲ್ಲಿ ರೋಡ್ ರೇಜ್ ಕೇಸ್​ಗಳು ಮುಂದುವರೆದಿವೆ. ಬೈಕ್​​ನಲ್ಲಿ ಹಿಂಬಾಲಿಸಿಕೊಂಡು ಬಂದು ಕಾರನ್ನು ಅಡ್ಡಗಟ್ಟಿ ಗಲಾಟೆ‌ ಮಾಡಿರುವ ಘಟನೆ ಇಂದಿರಾನಗರದಲ್ಲಿ (Indiranagar) ನಡೆದಿದೆ. ಜಿತಿನ್ ರಾಜ್ ಎಂಬುವವರು ಕಾರಲ್ಲಿ ಗೆಳೆಯನ ಜೊತೆ ಇಂದಿರಾನಗರದಲ್ಲಿರುವ ಮತ್ತೊಬ್ಬ ಗೆಳೆಯನ ಮನೆಗೆ ಹೋಗುತ್ತಿದ್ದರು. ಇವರ ಕಾರನ್ನು 3-4 ಕಿಮೀನಿಂದ ಹಿಂಬಾಲಿಸಿಕೊಂಡು ಬಂದ ಕಿಡಿಗೇಡಿಗಳು ಇಂದಿರಾನಗರ ಸಿಗ್ನಲ್​ನಲ್ಲಿ ಓವರ್​ ಟೇಕ್​ ಮಾಡಿ ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಆರೋಪಿಗಳು ಅಡ್ಡುಗಟ್ಟಿದ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರುಚಾಲಕ ಜಿತಿನ್ ರಾಜ್ ಅವರು ಸಾಮಜಿಕ ಜಾಲತಾಣ ಎಕ್ಸ್​ನಲ್ಲಿ ಘಟನೆ ಬಗ್ಗೆ ಪೋಸ್ಟ್​​ ಹಾಕಿ ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.

ಫುಡ್ ಡೆಲಿವರಿ ಬಾಯ್​​ಗೆ ಹಿಗ್ಗಾಮುಗ್ಗಾ ಥಳಿತ

ಫುಡ್ ಡೆಲಿವರಿ ಬಾಯ್​​ಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಯನಗರದ ನಿಮಿಷಾಂಭ ದೇಗುಲದ ಸಿಗ್ನಲ್ ಬಳಿ ನಡೆದಿದೆ. ಬಸ್​ನಲ್ಲಿ ತೆರಳುವ ವ್ಯಕ್ತಿ ಗಲಾಟೆಯ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಫುಡ್ ಡೆಲಿವರಿ ಬಾಯ್ ಬೈಕ್​​ ಮುಂದೆ ಹೋಗುತ್ತಿದ್ದ ಆಟೋಗೆ ಟಚ್ ಆಗಿದೆ. ಇದೇ ವಿಚಾರಕ್ಕೆ ಆಟೋ ಚಾಲಕ ಮತ್ತು ಫುಡ್ ಡೆಲಿವರಿ ಬಾಯ್ ಮಧ್ಯೆ ಮಾತಿಗೆ ಮಾತು ಬೆಳೆದಿದೆ.

ಇದನ್ನೂ ಓದಿ: ಹೆಚ್ಚಿದ ಬೀದಿ ನಾಯಿ ಕಾಟ, ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಳ

ಮುಂದಿನ ಸಿಗ್ನಲ್ ಬಳಿ ಆಟೋ ಚಾಲಕ ಮತ್ತು ಆತನ ಸ್ನೇಹಿತರು ಫುಡ್ ಡಿಲಿವರಿ ಬಾಯ್​ನನ್ನು ಹಿಡಿದು ಹಲ್ಲೆ ಮಾಡಿದ್ದಾರೆ. ಸದ್ಯ ಜಯನಗರ ಠಾಣಾ ಪೊಲೀಸರು ಫುಡ್ ಡಿಲಿವರಿ ಬಾಯ್​ ಅವರನ್ನು ಕರೆದು ಮಾಹಿತಿ ಪಡೆದಿದ್ದಾರೆ.

ಕಾರು ಗ್ಲಾಸ್​ ಒಡೆದು ಗಲಾಟೆ

ಕ್ಷುಲ್ಲಕ ಕಾರಣಕ್ಕೆ ಯುವಕ ಕಾರಿನ ಗ್ಲಾಸ್​ ಒಡೆದು ಅಟ್ಟಹಾಸ ಮೆರೆದಿರುವ ಘಟನೆ ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನೆಹಳ್ಳಿಯಲ್ಲಿ ನಡೆದಿದೆ. ಗ್ಲಾಸ್ ಒಡೆಯುತ್ತಿದ್ದಂತೆ ಕಾರಿನ‌ ಒಳಗಿದ್ದವರು ಚೀರಾಡಿದ್ದಾರೆ. ಕಾರಿನಲ್ಲಿ ಪುಟ್ಟ ಮಗು ಇದೆ ಎಂದು ಚಾಲಕ ಹೇಳಿದರೂ ಯುವಕ ಗಲಾಟೆ ಮುಂದುವರೆಸಿದ್ದಾನೆ. ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ