ಬೆಂಗಳೂರು: ಚೀನಿ ಮೈಕ್ರೋ ಫೈನಾನ್ಸ್ ಆಪ್ ಅಕ್ರಮ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ವಿವಿಧ ಌಪ್ಗಳ ಬ್ಯಾಂಕ್ ಖಾತೆಗಳಲ್ಲಿದ್ದ ₹106 ಕೋಟಿ ಜಪ್ತಿ ಮಾಡಿರುವುದಾಗಿ ಬುಧವಾರ ತಿಳಿಸಿದ್ದಾರೆ. ಚೀನಾದ ಪ್ರಜೆಗಳ ಪರವಾಗಿ ನಕಲಿ ನಿರ್ದೇಶಕ, ಚಂದಾದಾರರನ್ನ ನೇಮಿಸಿಕೊಂಡು ಅಕ್ರಮ ವ್ಯವಹಾರ ನಡೆಸಲಾಗುತ್ತಿದೆ. ಇದರಲ್ಲಿ ಕೆಲವು ಸಂಸ್ಥೆಗಳು ಸೇರಿಕೊಂಡಿವೆ ಎಂದು ಇಡಿ ಹೇಳಿದೆ.
ಆ್ಯಪ್‌ನಲ್ಲಿ ಗ್ರಾಹಕರಿಗೆ ಸಾಲ ನೀಡಿದ ಬಳಿಕ ಅವರಿಗೆ ಚಿತ್ರಹಿಂಸೆ ನೀಡಿ ದುಬಾರಿ ಬಡ್ಡಿ ವಸೂಲಿ ಮಾಡುತ್ತಿದ್ದರು. ಈ ಹಿನ್ನೆಲೆ ಈ ಆ್ಯಪ್‌ಗಳ ವಿರುದ್ಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಲೇವಾದೇವಿ ವ್ಯವಹಾರ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ, ಅಧಿಕ ಬಡ್ಡಿ ನಿಷೇಧ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದು ತನಿಖೆ ನಡೆಯುತ್ತಿದೆ. ಸಾಲದ ಆ್ಯಪ್ ಕಂಪನಿಗಳ ಮಾಲೀಕರಿಗೆ ಸೇರಿದ ಬ್ಯಾಂಕ್ ಖಾತೆಯಲ್ಲಿ 106 ಕೋಟಿ ರೂ ಹಣವಿದ್ದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru: ಚೀನಾ ಲೋನ್ ಕಂಪನಿಗಳಿಂದ ವಂಚನೆ: 7 ಸಂಸ್ಥೆ, ಐವರ ವಿರುದ್ಧ ತನಿಖಾ ವರದಿ ಸಲ್ಲಿಸಿದ ಇಡಿ
ಕೊರೊನಾ ಲಾಕ್‌ಡೌನ್ ವೇಳೆ ಚೀನಾ ವ್ಯಕ್ತಿಗಳು ಸಾಲದ ಆ್ಯಪ್‌ಗಳನ್ನು ತೆರೆದು ಅದರ ಮೂಲಕ ಸಾಲ ಕೊಡಲು ಮುಂದಾಗಿದ್ದರು. ಇದಕ್ಕೆ ಸ್ಥಳೀಯರನ್ನು ಮಾಲೀಕರು, ನಿರ್ದೇಶಕರನ್ನಾಗಿ ಮಾಡಿ ಬ್ಯಾಂಕ್ ಖಾತೆಗಳನ್ನು ಅವರ ಹೆಸರಿನಲ್ಲಿ ತೆರೆದು ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಆದರೆ ವ್ಯವಹಾರದ ಸಂಪೂರ್ಣ ನಿಯಂತ್ರಣವನ್ನು ಚೀನಾದ ವ್ಯಕ್ತಿಗಳೇ ನಿರ್ವಹಿಸುತ್ತಿದ್ದರು. ಸಾರ್ವಜನಿಕರಿಗೆ ಆ್ಯಪ್‌ನಲ್ಲಿ ಸಾಲ ಕೊಟ್ಟು ನಿಗದಿಗಿಂತ ಹೆಚ್ಚಿನ ದರದಲ್ಲಿ ಬಡ್ಡಿ ವಸೂಲಿ ಮಾಡಲಾಗುತ್ತಿತ್ತು. ಸಾಲ ಪಡೆದು ಗ್ರಾಹಕರು ಹಣ ಕೊಡದೇ ಇದ್ದರೆ ಗ್ರಾಹಕರ ಮೊಬೈಲ್‌ನಿಂದ ಕಳವು ಮಾಡಿದ್ದ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಸಾಲಗಾರರ ತೇಜೋವಧೆ ಮಾಡುತ್ತಿದ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:11 am, Thu, 30 March 23