ವಿಡಿಯೋ ಶೂಟ್ ಮಾಡುತ್ತಿದ್ದ ಯುವತಿಯರ ಫೋನ್ ಕಸಿಯಲು ಯತ್ನ: ಖದೀಮರ ವಿಡಿಯೋ ವೈರಲ್
ಕಳ್ಳರು ಮೊಬೈಲ್ ಕಸಿಯುಲು ಯತ್ನಿಸಿದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರು ಬೆಂಗಳೂರಿನಲ್ಲಿ ಫುಡ್ ಬ್ಲಾಗರ್‌ನ ಮೊಬೈಲ್ ದೋಚಲು ಯತ್ನಿಸಿ ವಿಫಲರಾಗಿದ್ದಾರೆ. ಕಳ್ಳರು ಮೊಬೈಲ್ ಕಸಿಯುಲು ಯತ್ನಿಸಿದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಬೆಂಗಳೂರಿನ ಸುರಕ್ಷತಾ ಕ್ರಮಗಳನ್ನು ಪ್ರಶ್ನಿಸಿ ಟ್ವಿಟರ್ನಲ್ಲಿ ಕಮೆಂಟ್ ಮಾಡಲಾಗುತ್ತಿದೆ.
ಇನ್ನು ಘಟನೆಯ ಬಗ್ಗೆ ವಿವರಿಸುತ್ತಾ, ಕಂಟೆಂಟ್ ಕ್ರಿಯೇಟರ್ ರುಚಿಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಅನುಭವವನ್ನು ಹಂಚಿಕೊಂಡಿದ್ದಾರೆ. “ನಿನ್ನೆ ರೆಸ್ಟೊರೆಂಟ್‌ಗಾಗಿ ಚಿತ್ರೀಕರಣ ಮಾಡುವಾಗ ಅಪಾಯಕಾರಿಯಾದ ಘಟನೆ ನಡೆದಿದೆ ಮತ್ತು ನಾನು ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ಎಂದು ಘಟನೆಯನ್ನು ವಿವರಿಸಿದ್ದಾರೆ.”
A follower ruchika writes: As we are content creators and we were regular shooting content for the restaurant when these two boys approached and tried to snatch my phone from my hand , luckily I pulled my phone down at that point , preventing him from snatching it.@BlrCityPolice pic.twitter.com/RALPqQlTVT
— Bangalore 360 (@bangalore360_) March 27, 2023
ಇದನ್ನೂ ಓದಿ: ಚಿರತೆ ಸೂರ್ಯ ನಮಸ್ಕಾರ ಹೇಗೆ ಮಾಡುತ್ತಿದೆ ನೋಡಿ: ವಿಡಿಯೋ ವೈರಲ್
ನಾವು ಕಂಟೆಂಟ್ ಕ್ರಿಯೇಟರ್‌ಗಳಾಗಿರುವುದರಿಂದ, ನಾವು ರೆಸ್ಟೊರೆಂಟ್ವೊಂದರ ಶೂಟಿಂಗ್ ಮಾಡುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ಕಳ್ಳರು ನನ್ನ ಕೈಯಿಂದ ನನ್ನ ಫೋನ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಅದೃಷ್ಟವಶಾತ್ ನಾನು ಆ ಸಮಯದಲ್ಲಿ ನನ್ನ ಫೋನ್ ಅನ್ನು ಕೆಳಗೆ ಮಾಡಿದೆ, ಆದರೆ, ವಿಡಿಯೋದಲ್ಲಿ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಸ್ಪಷ್ಟವಾಗಿಲ್ಲ ಮತ್ತು ರೆಸ್ಟೋರೆಂಟ್ ಮುಖ್ಯ ದ್ವಾರದ ಮುಂಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಇದೆ ಎಂದು ಘಟನೆಯನ್ನು ವಿವರಿಸಿದ್ದಾರೆ.
ಇನ್ನು ಈ ವಿಡಿಯೋಗೆ ಪ್ರತಿಕ್ರಿಯಿಸಿದ ಬಳಕೆದಾರ, ಎಲ್ಲರೂ ಜಾಗರೂಕರಾಗಿರಿ, ಮುಖ್ಯವಾಗಿ ಕಂಟೆಂಟ್ ಕ್ರಿಯೇಟರ್ಸ್. ಫೋನ್ ಕಳ್ಳತನ ಹೆಚ್ಚುತ್ತಿದೆ ಮತ್ತು ಅಪರಾಧಿಗಳು ಎಂದಿಗಿಂತ ವಿಶ್ವಾಸ ಹೊಂದಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಟ್ವಿಟರ್ ಬಳಕೆದಾರ, ದಯವಿಟ್ಟು ಫೋನ್ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವ ಈ ವ್ಯಕ್ತಿಗಳ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಪೋಲಿಸರನ್ನು ಒತ್ತಾಯಿಸಿದ್ದಾರೆ. ಹಾಗೂ ವಿಡಿಯೋದಲ್ಲಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ಪೊಲೀಸರು ಭರವಸೆ ನೀಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:57 am, Thu, 30 March 23