AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಚೀನಿ ಮೈಕ್ರೋ ಫೈನಾನ್ಸ್​ ಆ್ಯಪ್​ಗಳ ಅಕ್ರಮ, 106 ಕೋಟಿ ಜಪ್ತಿ ಮಾಡಿದ ಇಡಿ

ಆ್ಯಪ್‌ನಲ್ಲಿ ಗ್ರಾಹಕರಿಗೆ ಸಾಲ ನೀಡಿದ ಬಳಿಕ ಅವರಿಗೆ ಚಿತ್ರಹಿಂಸೆ ನೀಡಿ ದುಬಾರಿ ಬಡ್ಡಿ ವಸೂಲಿ ಮಾಡುತ್ತಿದ್ದರು. ಈ ಹಿನ್ನೆಲೆ ಈ ಆ್ಯಪ್‌ಗಳ ವಿರುದ್ಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿತ್ತು.

ಬೆಂಗಳೂರು: ಚೀನಿ ಮೈಕ್ರೋ ಫೈನಾನ್ಸ್​ ಆ್ಯಪ್​ಗಳ ಅಕ್ರಮ, 106 ಕೋಟಿ ಜಪ್ತಿ ಮಾಡಿದ ಇಡಿ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on:Mar 30, 2023 | 9:11 AM

Share

ಬೆಂಗಳೂರು: ಚೀನಿ ಮೈಕ್ರೋ ಫೈನಾನ್ಸ್​ ಆಪ್ ಅಕ್ರಮ ವ್ಯವಹಾರ​ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ವಿವಿಧ ಌಪ್​​ಗಳ ಬ್ಯಾಂಕ್​ ಖಾತೆಗಳಲ್ಲಿದ್ದ ₹106 ಕೋಟಿ ಜಪ್ತಿ ಮಾಡಿರುವುದಾಗಿ ಬುಧವಾರ ತಿಳಿಸಿದ್ದಾರೆ. ಚೀನಾದ ಪ್ರಜೆಗಳ ಪರವಾಗಿ ನಕಲಿ ನಿರ್ದೇಶಕ, ಚಂದಾದಾರರನ್ನ ನೇಮಿಸಿಕೊಂಡು ಅಕ್ರಮ ವ್ಯವಹಾರ ನಡೆಸಲಾಗುತ್ತಿದೆ. ಇದರಲ್ಲಿ ಕೆಲವು ಸಂಸ್ಥೆಗಳು ಸೇರಿಕೊಂಡಿವೆ ಎಂದು ಇಡಿ ಹೇಳಿದೆ.

ಆ್ಯಪ್‌ನಲ್ಲಿ ಗ್ರಾಹಕರಿಗೆ ಸಾಲ ನೀಡಿದ ಬಳಿಕ ಅವರಿಗೆ ಚಿತ್ರಹಿಂಸೆ ನೀಡಿ ದುಬಾರಿ ಬಡ್ಡಿ ವಸೂಲಿ ಮಾಡುತ್ತಿದ್ದರು. ಈ ಹಿನ್ನೆಲೆ ಈ ಆ್ಯಪ್‌ಗಳ ವಿರುದ್ಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಲೇವಾದೇವಿ ವ್ಯವಹಾರ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ, ಅಧಿಕ ಬಡ್ಡಿ ನಿಷೇಧ ಕಾಯ್ದೆಯಡಿ ಎಫ್​​ಐಆರ್ ದಾಖಲಿಸಿದ್ದು ತನಿಖೆ ನಡೆಯುತ್ತಿದೆ. ಸಾಲದ ಆ್ಯಪ್ ಕಂಪನಿಗಳ ಮಾಲೀಕರಿಗೆ ಸೇರಿದ ಬ್ಯಾಂಕ್ ಖಾತೆಯಲ್ಲಿ 106 ಕೋಟಿ ರೂ ಹಣವಿದ್ದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru: ಚೀನಾ ಲೋನ್​ ಕಂಪನಿಗಳಿಂದ ವಂಚನೆ: 7 ಸಂಸ್ಥೆ, ಐವರ ವಿರುದ್ಧ ತನಿಖಾ ವರದಿ ಸಲ್ಲಿಸಿದ ಇಡಿ

ಕೊರೊನಾ ಲಾಕ್‌ಡೌನ್ ವೇಳೆ ಚೀನಾ ವ್ಯಕ್ತಿಗಳು ಸಾಲದ ಆ್ಯಪ್‌ಗಳನ್ನು ತೆರೆದು ಅದರ ಮೂಲಕ ಸಾಲ ಕೊಡಲು ಮುಂದಾಗಿದ್ದರು. ಇದಕ್ಕೆ ಸ್ಥಳೀಯರನ್ನು ಮಾಲೀಕರು, ನಿರ್ದೇಶಕರನ್ನಾಗಿ ಮಾಡಿ ಬ್ಯಾಂಕ್ ಖಾತೆಗಳನ್ನು ಅವರ ಹೆಸರಿನಲ್ಲಿ ತೆರೆದು ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಆದರೆ ವ್ಯವಹಾರದ ಸಂಪೂರ್ಣ ನಿಯಂತ್ರಣವನ್ನು ಚೀನಾದ ವ್ಯಕ್ತಿಗಳೇ ನಿರ್ವಹಿಸುತ್ತಿದ್ದರು. ಸಾರ್ವಜನಿಕರಿಗೆ ಆ್ಯಪ್‌ನಲ್ಲಿ ಸಾಲ ಕೊಟ್ಟು ನಿಗದಿಗಿಂತ ಹೆಚ್ಚಿನ ದರದಲ್ಲಿ ಬಡ್ಡಿ ವಸೂಲಿ ಮಾಡಲಾಗುತ್ತಿತ್ತು. ಸಾಲ ಪಡೆದು ಗ್ರಾಹಕರು ಹಣ ಕೊಡದೇ ಇದ್ದರೆ ಗ್ರಾಹಕರ ಮೊಬೈಲ್‌ನಿಂದ ಕಳವು ಮಾಡಿದ್ದ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಸಾಲಗಾರರ ತೇಜೋವಧೆ ಮಾಡುತ್ತಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:11 am, Thu, 30 March 23

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ