ಬೆಂಗಳೂರು, ಮಾ.05: ಇಡಿ ಪ್ರಕರಣದಲ್ಲಿ(ED Case) ಬಿಗ್ ರಿಲೀಫ್ ವಿಚಾರವಾಗಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar), ‘ಸುಪ್ರೀಂಕೋರ್ಟ್ ಹಾಗೂ ನ್ಯಾಯಮೂರ್ತಿಗಳಿಗೆ ಸಾಷ್ಟಾಂಗ ನಮಸ್ಕಾರ ಎಂದಿದ್ದಾರೆ. ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ‘ಸುಪ್ರೀಂ ರಿಲೀಫ್ ನೀಡಿದ ಮಾಹಿತಿ ಸಿಕ್ಕಿದ್ದು, ಕಷ್ಟದ ಜೀವನದ ದೊಡ್ಡ ಸಂತೋಷದ ಇವತ್ತು. ವಕೀಲರುಗಳಿಂದ ಫೋನಿನ ಸುರಿಮಳೆ ಬರುತ್ತಿದೆ. ನಾನೇನೂ ತಪ್ಪು ಮಾಡಿಲ್ಲ. ಇಡಿ ಅಧಿಕಾರಿಗಳಿಂದ ಕ್ರಮ ಆಗಿದ್ದು ತಪ್ಪು ಎನ್ನುವ ಮಾಹಿತಿ ಗೊತ್ತಾಗ್ತಿದೆ. ಈಗಲೂ ಸಿಬಿಐನವರು ಏನೇನು ಮಾಡ್ತಿದ್ದಾರೆಂದು ಸದ್ಯದಲ್ಲೇ ಹೇಳುವೆ ಎಂದರು.
‘ಸುರ್ಜೇವಾಲ ಸೇರಿದಂತೆ ಎಲ್ಲರೂ ಸುಪ್ರೀಂಕೋರ್ಟ್‌ನಲ್ಲಿ ಇದ್ದರು. ಸುಪ್ರೀಂಕೋರ್ಟ್‌ನ ತೀರ್ಪಿನ ಮುಂದೆ ಮತ್ತೇನಿದೆ. ಜೈಲಿಗೆ ಹೋಗುವಾಗಲೂ ಆತ್ಮವಿಶ್ವಾಸದಿಂದಲೇ ಹೋಗಿದ್ದೆ, ಈಗಲೂ ಅದೇ ಆತ್ಮ ವಿಶ್ವಾಸದಲ್ಲಿದ್ದೇನೆ. ಸಿಬಿಐನವರು ಈಗಲೂ ನನ್ನ ಸುತ್ತಮುತ್ತಲಿನವರಿಗೆ ಕಿರುಕುಳ ನೀಡುತ್ತಿದ್ದಾರೆ. ಆದರೆ, ಯಾರೂ ಕೂಡ ವಿರೋಧಿಗಳಿಲ್ಲ, ಎಲ್ಲಾ ಪ್ರಕೃತಿಯ ನಿಯಮ ಎಂದಿದ್ದಾರೆ. ಇದೇ ವೇಳೆ ಕಲ್ಲು ಕಡಿದ್ರೆ ಆಕೃತಿ, ಪೂಜಿಸಿದ್ರೆ ಸಂಸ್ಕೃತಿ ಎಂಬ ಗಾದೆ ಮಾತು ಹೇಳಿದ್ದಾರೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿಸಿಎಂ ಡಿಕೆ ಶಿವಕುಮಾರ್ಗೆ ಸುಪ್ರೀಂ ಕೋರ್ಟ್ನಲ್ಲಿ ಬಿಗ್ ರಿಲೀಫ್
ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ನಿವಾಸದಲ್ಲಿ 2018 ಆಗಸ್ಟ್ ತಿಂಗಳಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ ಪ್ರಮಾನದ ನಗದು ಪತ್ತೆಯಾಗಿತ್ತು. ಆಗ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಜಾರಿ ನಿರ್ದೇಶನಾಲಯ ನೀಡಿದ ಸಮನ್ಸ್ ಅನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಇದರ ವಿರುದ್ಧ ಡಿಕೆ ಶಿವಕುಮಾರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:51 pm, Tue, 5 March 24