ಚೈನಾ ಮೂಲದ ಬೆಂಗಳೂರಿನಲ್ಲಿನ ಯಲ್ಲೋ ಟ್ಯೂನ್ ಟೆಕ್ನಾಲಜಿಸ್‌ ಪ್ರೈವೇಟ್ ಲಿಮಿಟೆಡ್ ಕಚೇರಿ ಮೇಲೆ ಇಡಿ ದಾಳಿ

| Updated By: ವಿವೇಕ ಬಿರಾದಾರ

Updated on: Aug 12, 2022 | 6:45 PM

ಇಡಿ ಅಧಿಕಾರಿಗಳು ಯಲ್ಲೋ ಟ್ಯೂನ್ ಟೆಕ್ನಾಲಜಿಸ್‌ ಪ್ರೈವೇಟ್ ಲಿ.ಗೆ ಸೇರಿದ ಬೆಂಗಳೂರಿನಲ್ಲಿರುವ ಕಂಪನಿ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

ಚೈನಾ ಮೂಲದ ಬೆಂಗಳೂರಿನಲ್ಲಿನ ಯಲ್ಲೋ ಟ್ಯೂನ್ ಟೆಕ್ನಾಲಜಿಸ್‌ ಪ್ರೈವೇಟ್ ಲಿಮಿಟೆಡ್ ಕಚೇರಿ ಮೇಲೆ ಇಡಿ ದಾಳಿ
ಇಡಿ
Follow us on

ಬೆಂಗಳೂರು: ಇಡಿ ಅಧಿಕಾರಿಗಳು ಯಲ್ಲೋ ಟ್ಯೂನ್ ಟೆಕ್ನಾಲಜಿಸ್‌ ಪ್ರೈವೇಟ್ ಲಿ.ಗೆ ಸೇರಿದ ಬೆಂಗಳೂರಿನಲ್ಲಿರುವ ಕಂಪನಿಯ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ದಾಳಿಯಲ್ಲಿ 370 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಇಡಿ ಅಧಿಕಾರಿಗಳು ಕಂಪನಿ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿ ಕಂಪನಿಯ ಬ್ಯಾಂಕ್ ಅಕೌಂಟ್‌ನಲ್ಲಿದ್ದ ನಗದು ಸೇರಿದಂತೆ 370 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ.

ಇಡಿ ಯೆಲ್ಲೋ ಟ್ಯೂನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ವಿವಿಧ ಆವರಣದಲ್ಲಿ ಹುಡುಕಾಟ ನಡೆಸಿದೆ. ಲಿಮಿಟೆಡ್ ಮತ್ತು ಕಂಪನಿಯ ಬ್ಯಾಂಕ್ ಬ್ಯಾಲೆನ್ಸ್, ಪಾವತಿ ಗೇಟ್‌ವೇ ಬ್ಯಾಲೆನ್ಸ್ ಮತ್ತು ಫ್ಲಿಪ್‌ವೋಲ್ಟ್ ಕ್ರಿಪ್ಟೋ-ಕರೆನ್ಸಿ ಎಕ್ಸ್‌ಚೇಂಜ್‌ನ ಕ್ರಿಪ್ಟೋ ಬ್ಯಾಲೆನ್ಸ್‌ಗಳನ್ನು ಒಟ್ಟು 370 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಫ್ರೀಜ್ ಮಾಡಲು ಆದೇಶ ಹೊರಡಿಸಿದೆ.

ಯೆಲ್ಲೋ ಟ್ಯೂನ್ ಟೆಕ್ನಾಲಜೀಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಚೈನಾ ಮೂಲದ ವ್ಯಕ್ತಿಗಳು ಸ್ಥಳಿಯವಾಗಿ ಸ್ಥಾಪಿಸಿದ್ದಾರೆ. ಈ ಕಂಪನಿಯ ಆರ್.ಬಿ.ಐ ನಿಯಮ ಉಲ್ಲಂಘಿಸಿ ಮೈಕ್ರೋ ಫೈನಾನ್ಸಿಂಗ್ ಮಾಡಿದ್ದಾರೆಂದು ಇಡಿ ಆರೋಪಿಸಿದೆ.

ಕಂಪನಿಯು ಕ್ರಿಫ್ಟೋ ಕರೆನ್ಸಿ, ಸ್ಥಿರ ಹಾಗೂ ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಇ.ಡಿ ನೋಟಿಸ್ ನೀಡಿದೆ. ಪ್ಲಿಪ್ ವೋಲ್ಟ್ ಕ್ರಿಪ್ಟೋ ಎಕ್ಸ್ ಚೇಂಜ್ ಕಂಪನಿ ಮೂಲಕ ಅಕ್ರಮವಾಗಿ ಕ್ರಿಫ್ಟೋ ರೂಪದಲ್ಲಿ ಹಣ ಪಡೆದ ಆರೋಪ ಕೇಳಿಬಂದಿದೆ.

ನಕಲಿ ಸಹಿ, ಡಿಜಿಟಲ್ ದಾಖಲಾತಿಗಳ ಮೂಲಕ ಯೆಲ್ಲೋ ಟ್ಯೂನ್ ಕಂಪನಿ ತೆರೆಯಲಾಗಿದೆ. 2020ರಲ್ಲೇ ಕಂಪನಿ ಮಾಲೀಕರು ಭಾರತವನ್ನು ತೊರೆದಿದ್ದಾರೆ. ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ ಯೆಲ್ಲೋ ಟ್ಯೂನ್, ಪ್ಲಿಪ್ ವೋಲ್ಟ್ ಕಂಪನಿ ಆಸ್ತಿ, ಖಾತೆಗಳು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಮಂತ್ರಿ ಗ್ರೂಪ್ಸ್ ಒಡೆತನದ 300.4 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಬೆಂಗಳೂರು: ಮಂತ್ರಿ ಗ್ರೂಪ್ಸ್ ಒಡೆತನದ 300.4 ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಗೃಹ ನಿರ್ಮಾಣ ಯೋಜನೆಗಳಡಿ ಹೂಡಿಕೆದಾರರಿಗೆ 7-10 ವರ್ಷಗಳಾದರೂ ಫ್ಲ್ಯಾಟ್ ನೀಡಿರಲಿಲ್ಲ. ಕಬ್ಬನ್‌ಪಾರ್ಕ್‌, ಸುಬ್ರಹ್ಮಣ್ಯನಗರ ಠಾಣೆಗಳಲ್ಲಿ FIR ದಾಖಲಾಗಿತ್ತು. ಬಳಿಕ ಪ್ರತ್ಯೇಕ ಕೇಸ್ ದಾಖಲಿಸಿಕೊಂಡು ಇಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:26 pm, Fri, 12 August 22