KG Halli: ಕಾಲೇಜ್ ಫೆಸ್ಟ್ ವೇಳೆ ಬೆಂಗಳೂರಲ್ಲಿ ಕಾಲೇಜು ಯುವಕನ ಕೊಲೆ

ಗಲಾಟೆ ವಿಚಾರಕ್ಕೆ ಇಂದು ಅರ್ಬಾಜ್ ಕೊಲೆ‌ಯಾಗಿರುವ ಶಂಕೆ ವ್ಯಕ್ತವಾಗಿದೆ. ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

KG Halli: ಕಾಲೇಜ್ ಫೆಸ್ಟ್ ವೇಳೆ ಬೆಂಗಳೂರಲ್ಲಿ ಕಾಲೇಜು ಯುವಕನ ಕೊಲೆ
ಕಾಲೇಜ್ ಫೆಸ್ಟ್ ವೇಳೆ ಬೆಂಗಳೂರಲ್ಲಿ ಕಾಲೇಜು ಯುವಕನ ಕೊಲೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 12, 2022 | 5:57 PM

ಬೆಂಗಳೂರು: ಬೆಂಗಳೂರಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ (College student) ಕೊಲೆಯಾಗಿದ್ದಾನೆ. ಅರ್ಬಾಜ್ (18) ಕೊಲೆಯಾದ ಯುವಕ. ನಿನ್ನೆ ಗುರುವಾರ ಕಾಲೇಜ್ ಫೆಸ್ಟ್ ವೇಳೆ (College fest) ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಅದೇ ಗಲಾಟೆ ವಿಚಾರಕ್ಕೆ ಇಂದು ಇಂದು ಮಧ್ಯಾಹ್ನ 2.30 ಸುಮಾರಿಗೆ ಅರ್ಬಾಜ್ ಕೊಲೆ‌ಯಾಗಿರುವ ಶಂಕೆ ವ್ಯಕ್ತವಾಗಿದೆ. ಕೆಜಿ ಹಳ್ಳಿ (KG Halli) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ (Bangalore).

ನಮಾಜ್ ಮುಗಿಸಿ ಕಾಲೇಜಿಗೆ ಬಂದಿದ್ದ ಆರ್ಬಾಜ್ ಭೀಕರ ಹತ್ಯೆ:

ಆರ್ಬಾಜ್ ಪ್ರಾವಿನ್ಸ್ ಕಾಲೇಜಿನಲ್ಲಿ ಪಿಯು ಓದುತ್ತಿದ್ದ ವಿದ್ಯಾರ್ಥಿ. ನಿನ್ನೆ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಕೆಲವು ವಿದ್ಯಾರ್ಥಿಗಳ ಜೊತೆ ಆರ್ಬಾಜ್ ಜಗಳ ಮಾಡಿಕೊಂಡಿದ್ದ. ಆರ್ಬಾಜ್, ಇಂದು ಮಧ್ಯಾಹ್ನ ನಮಾಜ್ ಮುಗಿಸಿ ಕಾಲೇಜಿಗೆ ಬಂದಿದ್ದ. ಬಳಿಕ ಕಾಲೇಜಿನಿಂದ ಹೊರ ಕರೆದು ಹತ್ಯೆ ಮಾಡಲಾಗಿದೆ. ಬಳಿಕ ಗಾಯಾಳು ಆರ್ಬಾಜ್ ನನ್ನು ಕೆಜಿ ಹಳ್ಳಿಯ ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಹಂತಕರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಕೆ ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read:

ಭಾರತೀಯ ಗ್ರಾಹಕರಿಗೆ 5ಜಿ ವಲಯದಲ್ಲಿ ಕ್ರಾಂತಿಕಾರಕ ಸೇವೆ ಒದಗಿಸುವ ನಿಟ್ಟಿನಲ್ಲಿ 19,867.8 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಖರೀದಿಸಿದ ಏರ್‌ಟೆಲ್‌

Published On - 5:00 pm, Fri, 12 August 22