AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Greenpeace India Report: ಲಾಕ್‌ಡೌನ್ ಅವಧಿಯಲ್ಲಿ ವಾಯುಮಾಲಿನ್ಯ ಕ್ಷೀಣಿಸಿದ್ದು ಬೆಂಗಳೂರಿನಲ್ಲಿ ಮುಕ್ತವಾದ ಕೆಲಸದ ನೀತಿಗಳಿಗೆ ಒತ್ತು ಕೊಡುತ್ತದೆ!

ವರದಿಯಲ್ಲಿ ವಿಶ್ಲೇಷಿಸಲಾದ ಮೇಲಿನ ಐದು ಟ್ರಾಫಿಕ್ ದಟ್ಟಣೆಯ ಸ್ಥಳಗಳಲ್ಲಿ 500ಕ್ಕೂ ಹೆಚ್ಚು ಐಟಿ ಸೇವೆಗಳು ಮತ್ತು ಬಿಪಿಒ ಕಂಪನಿಗಳು ಅಸ್ತಿತ್ವದಲ್ಲಿರುವುದು ಗಮನಾರ್ಹ. ಇಂತಹ ಅಧ್ಯಯನಗಳು ಈ ಕೈಗಾರಿಕೆ/ಕಂಪನಿಗಳಿಗೆ ದೀರ್ಘಾವಧಿಯ ಹೈಬ್ರಿಡ್ ಅಥವಾ ಮುಕ್ತ ಕೆಲಸದ ನೀತಿಗಳನ್ನು ಅಳವಡಿಸಿಕೊಳ್ಳುವುದಕ್ಕೆ ಒತ್ತು ನೀಡುತ್ತದೆ.

Greenpeace India Report: ಲಾಕ್‌ಡೌನ್ ಅವಧಿಯಲ್ಲಿ ವಾಯುಮಾಲಿನ್ಯ ಕ್ಷೀಣಿಸಿದ್ದು ಬೆಂಗಳೂರಿನಲ್ಲಿ ಮುಕ್ತವಾದ ಕೆಲಸದ ನೀತಿಗಳಿಗೆ ಒತ್ತು ಕೊಡುತ್ತದೆ!
ಲಾಕ್‌ಡೌನ್ ಅವಧಿಯಲ್ಲಿ ವಾಯುಮಾಲಿನ್ಯ ಕ್ಷೀಣಿಸಿದ್ದು ಮುಕ್ತವಾದ ಕೆಲಸದ ನೀತಿಗಳಿಗೆ ಒತ್ತು ಕೊಡುತ್ತದೆ!
TV9 Web
| Updated By: ಸಾಧು ಶ್ರೀನಾಥ್​|

Updated on:Aug 12, 2022 | 4:42 PM

Share

ಬೆಂಗಳೂರು: ಗ್ರೀನ್‌ಪೀಸ್ ಇಂಡಿಯಾದ ಇತ್ತೀಚಿನ ವರದಿ ಫ್ಲೆಕ್ಸಿಸಿಟಿಯು ಬೆಂಗಳೂರಿನಲ್ಲಿ ಕೋವಿಡ್-19 ಲಾಕ್‌ಡೌನ್‌ (2020) ಮೊದಲು ಮತ್ತು ಲಾಕ್‌ಡೌನ್‌ ಅವಧಿ ಮತ್ತು ತದನಂತರದ ಗಾಳಿಯ ಗುಣಮಟ್ಟ ಮತ್ತು ವಾಹನಗಳ ಚಲನತೆ ಮಾದರಿಗಳ ತುಲನಾತ್ಮಕ ಅಧ್ಯಯನವಾಗಿದೆ ಮತ್ತು ನಗರದಲ್ಲಿನ ಹೈಬ್ರಿಡ್ ಕೆಲಸದ ವ್ಯವಸ್ಥೆಗಳೊಂದಿಗೆ ಅವುಗಳ ಪರಸ್ಪರ ಸಂಬಂಧವನ್ನು ಹೊಂದಿದೆ. ಬೆಂಗಳೂರಿನ ಗಾಳಿಯ ಗುಣಮಟ್ಟಕ್ಕೆ ವಾಹನ ಹೊರಸೂಸುವಿಕೆಯ ಕೊಡುಗೆಯನ್ನು ವಿಶ್ಲೇಷಿಸಲು ಮತ್ತು ಮುಕ್ತವಾದ ಕೆಲಸದ ನೀತಿ, ಹೈಬ್ರಿಡ್ ಕೆಲಸದ ವ್ಯವಸ್ಥೆಗಳ ರೂಪದಲ್ಲಿ ತಗ್ಗಿಸುವ ಕ್ರಮಗಳನ್ನು ಶಿಫಾರಸು ಮಾಡುವುದು ಈ ಅಧ್ಯಯನದ ಉದ್ದೇಶವಾಗಿದೆ.

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆಯ ಅನಿಯಂತ್ರಿತ ಬೆಳವಣಿಗೆಯು ಟ್ರಾಫಿಕ್ ದಟ್ಟಣೆಯ ಉಲ್ಬಣಗೊಳಿಸುವುದನ್ನು ಮುಂದುವರೆಸಿದೆ. ಇದರ ಪರಿಣಾಮವಾಗಿ ಸಮಯದ ಸದುಪಯೋಗ ಮತ್ತು ದಕ್ಷತೆ ಪೋಲಾಗುತ್ತಿದೆ. ಹಾಗೆಯೇ ನಗರದ ಹಸಿರು ಹೊದಿಕೆಯನ್ನು ಕುಗ್ಗಿಸುತ್ತಿದೆ ಮತ್ತು ವಾಯುಮಾಲಿನ್ಯದ ಮಟ್ಟವನ್ನು ಹದಗೆಡಿಸುತ್ತಿದೆ. Google ಸಮುದಾಯ ಚಲನಶೀಲ ವರದಿಯ (Google Community Mobility Report) ಡೇಟಾವನ್ನು ಬಳಸಿಕೊಂಡು, ವರದಿಯು ಮೂರು ವಿಭಿನ್ನ ಅವಧಿಗಳಲ್ಲಿ ಟ್ರಾಫಿಕ್ ಡೇಟಾದ ತುಲನಾತ್ಮಕ ವಿಶ್ಲೇಷಣೆಗಾಗಿ ನಗರದೊಳಗೆ ಐದು ಪ್ರಾಥಮಿಕ ಸಂಚಾರ ದಟ್ಟಣೆ ಆಯಕಟ್ಟಿನ ಸ್ಥಳಗಳನ್ನು ಗುರುತಿಸುತ್ತದೆ. ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾದ ಐದು ರಸ್ತೆಗಳೆಂದರೆ ಎಂಜಿ ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್, ಬಿಟಿಎಂ ಲೇಔಟ್, ಬಾಪೂಜಿ ನಗರ ಮತ್ತು ಟಿನ್ ಫ್ಯಾಕ್ಟರಿ.

ಅಧ್ಯಯನ ವರದಿಯು ಲಾಕ್‌ಡೌನ್ ಪೂರ್ವ ಅವಧಿಯಲ್ಲಿ (2020ರ ಫೆಬ್ರವರಿಯಿಂದ ಮಾರ್ಚ್) ಹೆಚ್ಚಿನ ವಾಹನ ಸಂಚಾರ ದಟ್ಟಣೆಯನ್ನು ಗಮನಿಸಿದೆ. ಇದು ರಾಜಧಾನಿಯಲ್ಲಿನ ಸರಾಸರಿ ಸಂಚಾರ ದಟ್ಟಣೆ ಪ್ರಮಾಣಕ್ಕೆ (ಬೇಸ್‌ಲೈನ್‌ನಂತೆ ಸ್ಥಾಪಿಸಲಾಗಿದೆ) ಹತ್ತಿರದಲ್ಲಿದೆ. ಲಾಕ್‌ಡೌನ್ ಅವಧಿಯಲ್ಲಿ (ಮೇ 2020), ಟ್ರಾಫಿಕ್ ಸಾಂದ್ರತೆಯಲ್ಲಿ 60 ಪ್ರತಿಶತದಷ್ಟು ಇಳಿಕೆ ಕಂಡುಬಂದಿದೆ. AQI ನಲ್ಲಿ 95 ರಿಂದ 61 ಕ್ಕೆ ಅನುಗುಣವಾದ ಇಳಿಕೆ (ಲಾಕ್‌ಡೌನ್ ಪೂರ್ವ ತಿಂಗಳುಗಳಲ್ಲಿ). ಲಾಕ್‌ಡೌನ್ ನಂತರ (ಅಕ್ಟೋಬರ್ 2020), ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಲಾಗಿರುವುದರಿಂದ ಮತ್ತು ಹಬ್ಬದ ಋತುವಿನ ಪ್ರಾರಂಭದ ಕಾರಣದಿಂದಾಗಿ ಟ್ರಾಫಿಕ್ ಚಲನೆಯಲ್ಲಿ ಶೇಕಡಾ 35 ರಷ್ಟು ಹೆಚ್ಚಳವಾಗಿದೆ. ನಗರದ AQI ಮಟ್ಟಗಳು ಲಾಕ್‌ಡೌನ್ ನಂತರದ ಅವಧಿಯಲ್ಲಿ ಸ್ಥಿರವಾದ ಏರಿಕೆಯನ್ನು ತೋರಿಸುತ್ತಿರುವುದು ಗಮನಾರ್ಹವಾಗಿದೆ. ಅಕ್ಟೋಬರ್‌ನಿಂದ ಡಿಸೆಂಬರ್ 2020 ರ ತಿಂಗಳುಗಳಲ್ಲಿ ಲಾಕ್‌ಡೌನ್ ಪೂರ್ವಮಾಲಿನ್ಯ ಮಟ್ಟವನ್ನು ತಲುಪುತ್ತದೆ. ಲಾಕ್‌ಡೌನ್ ಅವಧಿಯಲ್ಲಿ ಗಾಳಿಯ ಗುಣಮಟ್ಟದಲ್ಲಿನ ಸುಧಾರಣೆಯು ಬಹುತೇಕ ಆರ್ಥಿಕ ಚಟುವಟಿಕೆಗಳನ್ನು ಹಠಾತ್ ಸ್ಥಗಿತಗೊಳಿಸಿರುವುದು ಕಾರಣವಾಗಿದೆ. ಆದರೆ, ನಗರ ವ್ಯಾಪ್ತಿಯಲ್ಲಿ ಪ್ರಮುಖ ಕೈಗಾರಿಕೆಗಳು ಇಲ್ಲದಿರುವುದುವ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯ ನಿಯಂತ್ರಣದಲ್ಲಿ (PM10) ಗಮನಾರ್ಹ ಕೊಡುಗೆ ನೀಡಿದೆ ಎಂಬುದು ವರದಿಯಿಂದ ತಿಳಿದುಬರುತ್ತದೆ.

ಗ್ರೀನ್‌ಪೀಸ್ ಇಂಡಿಯಾದ ಕ್ಯಾಂಪೇನ್ ಮ್ಯಾನೇಜರ್ ಅವಿನಾಶ್ ಕುಮಾರ್ ಚಂಚಲ್ (Avinash Kumar Chanchal, Campaign Manager at Greenpeace India), ಹೇಳುವಂತೆ ಹೆಚ್ಚು ವಾಹನ ದಟ್ಟಣೆಯ ನಗರದಲ್ಲಿ ಖಾಸಗಿ ಸಾರಿಗೆಯು ಸಾರ್ವಜನಿಕ ಆರೋಗ್ಯದ ಮೇಲೆ – ದೈಹಿಕವಾಗಿ ಮತ್ತು ಮಾನಸಿಕವಾಗಿ – ಮತ್ತು ಪರಿಸರದ ಆರೋಗ್ಯದ ಮೇಲೆಯೂ ಅನೇಕ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಮತ್ತು ದೀರ್ಘಾವಧಿಯ ಪರಿಣಾಮಗಳ ಬಗ್ಗೆ ತೀವ್ರ ಅಧ್ಯಯನದ ಅಗತ್ಯವಿರುವುದು ಗೋಚರಿಸುತ್ತದೆ. ಖಾಸಗಿ ಸಾರಿಗೆಯು ಪಳೆಯುಳಿಕೆ-ಇಂಧನ ಅವಲಂಬಿತ/ ಬಳಕೆಯಿಂದ ದೂರ ಸರಿಯುವುದು ಮತ್ತು ಬೆಂಗಳೂರಿನಲ್ಲಿ ಸ್ವಚ್ಛ, ಸುಸ್ಥಿರ ಮತ್ತು ಕೈಗೆಟುಕುವ ಸಾರ್ವಜನಿಕ ಸಾರಿಗೆ ಆಯ್ಕೆಗಳನ್ನು ಉತ್ತೇಜಿಸುವುದು ತುರ್ತು ಅಗತ್ಯವಾಗಿದೆ. ಈ ವರದಿಯೊಂದಿಗೆ, ದೊಡ್ಡ ಉದ್ಯೋಗದಾತರು ನಗರದ ಮೇಲೆ ವಹಿಸಬಹುದಾದ ಮಹತ್ವದ ಪಾತ್ರದ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ನಾವು ಹೊಂದಿದ್ದೇವೆ. ಉದ್ಯೋಗಿ-ಸ್ನೇಹಿ ಮುಕ್ತ ಕೆಲಸದ ನೀತಿಗಳನ್ನು ಪರಿಚಯಿಸುವ ಮೂಲಕ ವಾಯು ಗುಣಮಟ್ಟ ಕಾಪಾಡಬಹುದಾಗಿದೆ.

ವರದಿಯಲ್ಲಿ ವಿಶ್ಲೇಷಿಸಲಾದ ಮೇಲಿನ ಐದು ಟ್ರಾಫಿಕ್ ದಟ್ಟಣೆಯ ಸ್ಥಳಗಳಲ್ಲಿ 500ಕ್ಕೂ ಹೆಚ್ಚು ಐಟಿ ಸೇವೆಗಳು ಮತ್ತು ಬಿಪಿಒ ಕಂಪನಿಗಳು ಅಸ್ತಿತ್ವದಲ್ಲಿರುವುದು ಗಮನಾರ್ಹ. ಇಂತಹ ಅಧ್ಯಯನಗಳು ಈ ಕೈಗಾರಿಕೆ/ಕಂಪನಿಗಳಿಗೆ ದೀರ್ಘಾವಧಿಯ ಹೈಬ್ರಿಡ್ ಅಥವಾ ಮುಕ್ತ ಕೆಲಸದ ನೀತಿಗಳನ್ನು ಅಳವಡಿಸಿಕೊಳ್ಳುವುದಕ್ಕೆ ಒತ್ತು ನೀಡುತ್ತದೆ. ಇದು ಕಡಿಮೆ ವಾಹನ ಹೊರಸೂಸುವಿಕೆಯೊಂದಿಗೆ ನೇರ ಸಂಬಂಧವನ್ನು ಹೊಂದಿದೆ.

ಗ್ರೀನ್‌ಪೀಸ್ ಇಂಡಿಯಾದ (Greenpeace India) ಲೆಟಸ್ ಫ್ಲೆಕ್ಸ್ ಇಟ್ (ಐಟಿ) (Let’s Flex IT) ಅಧ್ಯಯನವು ಕಾರ್ಪೊರೇಟ್ ವರ್ಕ್​ ಸೆಟಪ್, ವಾಹನಗಳ ಚಲನಶೀಲತೆ ಮತ್ತು ವಾಯು ಗುಣಮಟ್ಟದ ನಡುವಿನ ನೇರ ಸಂಬಂಧವನ್ನು ಹೈಲೈಟ್ ಮಾಡುವ ಗುರಿಯನ್ನು ಹೊಂದಿದೆ. ಪರಿಸರದ ಜೊತೆ ಹೊಂದಿಕೊಳ್ಳುವ ಕೆಲಸದ ನೀತಿಗಳ ಸಕಾರಾತ್ಮಕ ಪರಿಣಾಮಗಳನ್ನು ಸೆರೆಹಿಡಿಯಲು ಯೋಜನೆ ಗುರಿ ಹೊಂದಿದೆ ಮತ್ತು ನಮ್ಮ ನಗರಗಳಲ್ಲಿ ವಾಹನದಟ್ಟಣೆ ಕಡಿಮೆ ಮಾಡಲು ಸುಲಭವಾದ ಪರಿಹಾರಗಳಲ್ಲಿ ಒಂದಾಗಿದೆ. ನವೀನ ಮತ್ತು ಸುಸ್ಥಿರ ಕೆಲಸದ ನೀತಿಗಳ ನಿಯೋಜನೆಯ ಕುರಿತು ಬೆಂಗಳೂರು ಮೂಲದ ನಿಗಮಗಳಿಗೆ ಶ್ರೇಯಾಂಕ ನೀಡಲು ವರ್ಕಿಂಗ್ ಲೀಡರ್‌ಬೋರ್ಡ್ ಅನ್ನು ಸಹ ಸ್ಥಾಪಿಸಲಾಗುತ್ತಿದೆ.

Also Read:

ಭಾರತೀಯ ಗ್ರಾಹಕರಿಗೆ 5ಜಿ ವಲಯದಲ್ಲಿ ಕ್ರಾಂತಿಕಾರಕ ಸೇವೆ ಒದಗಿಸುವ ನಿಟ್ಟಿನಲ್ಲಿ 19,867.8 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಖರೀದಿಸಿದ ಏರ್‌ಟೆಲ್‌

Published On - 4:30 pm, Fri, 12 August 22

ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ