ಭಾರತೀಯ ಗ್ರಾಹಕರಿಗೆ 5ಜಿ ವಲಯದಲ್ಲಿ ಕ್ರಾಂತಿಕಾರಕ ಸೇವೆ ಒದಗಿಸುವ ನಿಟ್ಟಿನಲ್ಲಿ 19,867.8 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಖರೀದಿಸಿದ ಏರ್‌ಟೆಲ್‌

5ಜಿ ಸ್ಪೆಕ್ಟ್ರಮ್‌ನ ಹರಾಜು ಪ್ರಕ್ರಿಯೆಯಲ್ಲಿ ಸರಕಾರವು 5ಜಿ 10 ಬ್ಯಾಂಡ್‌ಗಳನ್ನು ಅನೇಕ ಲೋ-ಫ್ರೀಕ್ವೆನ್ಸಿ ಬ್ಯಾಂಡ್‌ಗಳಲ್ಲಿ, ಒಂದು ಹೈ-ಫ್ರೀಕ್ವೆನ್ಸಿ ಬ್ಯಾಂಡ್‌ನಲ್ಲಿ, ಹಾಗೂ ಒಂದು ಮೀಡಿಯಮ್‌ ಫ್ರೀಕ್ವೆನ್ಸಿ ಬ್ಯಾಂಡ್‌ನಲ್ಲಿ ನೀಡಿತು. ಏರ್‌ಟೆಲ್‌ ಕಂಪನಿಯು 5ಜಿ ಸ್ಪೆಕ್ಟ್ರಮ್‌ ಅನ್ನು 900 ಮೆಗಾಹರ್ಟ್ಸ್‌, 1800 ಮೆಗಾಹರ್ಟ್ಸ್‌, 2100 ಮೆಗಾಹರ್ಟ್ಸ್‌, 3300 ಮೆಗಾಹರ್ಟ್ಸ್‌, ಮತ್ತು 26 ಗಿಗಾಹರ್ಟ್ಸ್‌ಗಳ ಫ್ರೀಕ್ವೆನ್ಸಿ ಬ್ಯಾಂಡ್‌ಗಳಲ್ಲಿ 20 ವರ್ಷಗಳ ಅವಧಿಗೆ 43,084 ಕೋಟಿ ರೂಪಾಯಿಗಳ ಒಟ್ಟು ವೆಚ್ಚದಲ್ಲಿ ಸ್ವಾಧೀನಪಡಿಸಿಕೊಂಡಿತು.

ಭಾರತೀಯ ಗ್ರಾಹಕರಿಗೆ 5ಜಿ ವಲಯದಲ್ಲಿ ಕ್ರಾಂತಿಕಾರಕ ಸೇವೆ ಒದಗಿಸುವ ನಿಟ್ಟಿನಲ್ಲಿ 19,867.8 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಖರೀದಿಸಿದ ಏರ್‌ಟೆಲ್‌
Airtel
TV9kannada Web Team

| Edited By: Apurva Kumar Balegere

Aug 30, 2022 | 4:09 PM

ದೂರಸಂಪರ್ಕ ಸೇವೆಗಳನ್ನು ಒದಗಿಸುವ ಭಾರತದ ಅಗ್ರಮಾನ್ಯ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್‌ ದೇಶದಲ್ಲಿನ 5ಜಿ ಕ್ರಾಂತಿಯ ನಾಯಕತ್ವ ವಹಿಸಲು ಸಜ್ಜಾಗಿದ್ದು 17,867.8 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಅನ್ನು ಇತ್ತೀಚೆಗೆ ಭಾರತ ಸರಕಾರದ ದೂರಸಂಪರ್ಕ ಇಲಾಖೆಯು ನಡೆಸಿದ ಹರಾಜಿನಲ್ಲಿ ಸ್ವಾಧೀನಪಡಿಸಿಕೊಂಡಿದೆ. ಈ ಪ್ರಕ್ರಿಯೆಯು ಏರ್‌ಟೆಲ್‌ ಕಂಪನಿಯನ್ನು ತನ್ನ ಗ್ರಾಹಕರಿಗೆ 5ಜಿ ಸೇವೆಯನ್ನು ಕೈಗೆಟಕುವ ದರಗಳಲ್ಲಿ ಒದಗಿಸುವಲ್ಲಿ ಅತ್ಯುನ್ನತ ಸ್ಥಾನದಲ್ಲಿರಿಸಿದೆ.

ಈ ಹರಾಜು ಪ್ರಕ್ರಿಯೆಯಲ್ಲಿ ಸರಕಾರವು 5ಜಿ ಸ್ಪೆಕ್ಟ್ರಮ್‌ನ 10 ಬ್ಯಾಂಡ್‌ಗಳನ್ನು ಅನೇಕ ಲೋ-ಫ್ರೀಕ್ವೆನ್ಸಿ ಬ್ಯಾಂಡ್‌ಗಳಲ್ಲಿ, ಒಂದು ಹೈ-ಫ್ರೀಕ್ವೆನ್ಸಿ ಬ್ಯಾಂಡ್‌ನಲ್ಲಿ, ಹಾಗೂ ಒಂದು ಮೀಡಿಯಮ್‌ ಫ್ರೀಕ್ವೆನ್ಸಿ ಬ್ಯಾಂಡ್‌ನಲ್ಲಿ ನೀಡಿತು. ಏರ್‌ಟೆಲ್‌ ಕಂಪನಿಯು 5ಜಿ ಸ್ಪೆಕ್ಟ್ರಮ್‌ ಅನ್ನು 900 ಮೆಗಾಹರ್ಟ್ಸ್‌, 1800 ಮೆಗಾಹರ್ಟ್ಸ್‌, 2100 ಮೆಗಾಹರ್ಟ್ಸ್‌, 3300 ಮೆಗಾಹರ್ಟ್ಸ್‌, ಮತ್ತು 26 ಗಿಗಾಹರ್ಟ್ಸ್‌ಗಳ ಫ್ರೀಕ್ವೆನ್ಸಿ ಬ್ಯಾಂಡ್‌ಗಳಲ್ಲಿ 20 ವರ್ಷಗಳ ಅವಧಿಗೆ 43,084 ಕೋಟಿ ರೂಪಾಯಿಗಳ ಒಟ್ಟು ವೆಚ್ಚದಲ್ಲಿ ಸ್ವಾಧೀನಪಡಿಸಿಕೊಂಡಿತು.

ಭಾರತ ದೇಶಾದ್ಯಂತ 3.5 ಗಿಗಾಹರ್ಟ್ಸ್‌ ಮತ್ತು 26 ಗಿಗಾಹರ್ಟ್ಸ್‌ ಬ್ಯಾಂಡ್‌ಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿ ಪ್ರಮುಖ ಸ್ಥಾನದಲ್ಲಿರುವ ಏರ್‌ಟೆಲ್‌ ಕಂಪನಿಯು ಈಗ ದೇಶದಲ್ಲಿ ಅತ್ಯಂತ ಹೆಚ್ಚಿನ ವಿಸ್ತಾರದ ಮೊಬೈಲ್‌ ಬ್ರಾಡ್‌ಬ್ಯಾಂಡ್‌ ಸಂಪರ್ಕಜಾಲವನ್ನು ಹೊಂದಿದೆ. ಕಂಪನಿಯು ಅನೇಕ ವರ್ಷಗಳಲ್ಲಿ ಬಹಳ ಚುರುಕಾದ ಹಾಗೂ ನಿರ್ದಿಷ್ಟ ಉದ್ದೇಶಂದ ಒಡಗೂಡಿದ ಸ್ಪೆಕ್ಟ್ರಮ್‌ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದ್ದು ಇದು ಏರ್‌ಟೆಲ್‌ ಕಂಪನಿಯು ಇಂದು 1800/2100/2300 ಗಿಗಾಹರ್ಟ್ಸ್‌ ಬ್ಯಾಂಡ್‌ಗಳಲ್ಲಿ ಲೋ-ಬ್ಯಾಂಡ್‌ ಮತ್ತು ಮಿಡ್‌-ಬ್ಯಾಂಡ್‌ ಸ್ಪೆಕ್ಟ್ರಮ್‌ಗಳ ಅತಿದೊಡ್ಡ ಆಧಾರವನ್ನು ಹೊಂದಲು ಕಾರಣವಾಗಿದೆ. ಇದು ದೂರಸಂಪರ್ಕ ವಲಯದ ದಿಗ್ಗಜ ಕಂಪನಿಯು ತನ್ನ ಗ್ರಾಹಕರಿಗೆ ಅತ್ಯುತ್ತಮ 5ಜಿ ಸೇವೆಗಳನ್ನು ಒದಗಿಸಲು ಹಾಗೂ ಈಗಿರುವುದಕ್ಕಿಂದ 100 ಪಟ್ಟು ಹೆಚ್ಚಿನ ಸಾಮರ್ಥ್ಯಗಳನ್ನು ಅತ್ಯಲ್ಪ ವೆಚ್ಚಗಳಲ್ಲಿ ನಿರ್ಮಿಸಲು ಅದಕ್ಕೆ ಅನುವು ಮಾಡಿಕೊಟ್ಟಿದೆ.

ಇದರೊಂದಿಗೆ, ಇತ್ತೀಚಿನ ಸ್ಪೆಕ್ಟ್ರಮ್‌ ಸ್ವಾಧೀನ ಪ್ರಕ್ರಿಯೆಯು ಹೊಸ ಸ್ಪರ್ಧಿಗಳಿಗೆ ಹೋಲಿಸಿದರೆ ಏರ್‌ಟೆಲ್‌ ಕಂಪನಿಗೆ ಸ್ಪೆಕ್ಟ್ರಮ್‌ ಬಳಕೆಯ ಶುಲ್ಕವನ್ನು (ಎಸ್‌ಯುಸಿ) ಗಮನಾರ್ಹವಾಗಿ ಕಡಿತಗೊಳಿಸಲು ಹಾಗೂ ಅಡ್ವರ್ಸ್‌ ಎಸ್‌ಯುಸಿ ಆರ್‌ಬಿಟ್ರೇಜ್‌ ಅನ್ನು ತೀವ್ರಸ್ವರೂಪದಲ್ಲಿ ಕಡಿಮೆ ಮಾಡಲು ಅವಕಾಶ ನೀಡಿದೆ.

ಈ ಸ್ವಾಧೀನ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾ ಭಾರ್ತಿ ಏರ್‌ಟೆಲ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಗೋಪಾಲ್‌ ವಿಟ್ಟಲ್‌ರವರು “5ಜಿ ಹರಾಜು ಪ್ರಕ್ರಿಯೆಯ ಫಲಿತಾಂಶವು ಏರ್‌ಟೆಲ್‌ಗೆ ಅತ್ಯಂತ ಹರ್ಷದಾಯಕವಾಗಿದೆ. ಇತ್ತೀಚಿನ ಹರಾಜು ಪ್ರಕ್ರಿಯೆಯಲ್ಲಿ ನಾವು ಸ್ಪೆಕ್ಟ್ರಮ್‌ ಅನ್ನು ಸ್ವಾಧೀನಪಡಿಸಿಕೊಂಡಿರುವುದು ನಮ್ಮ ಪ್ರತಿಸ್ಪರ್ಧಿಗಳ ವೆಚ್ಚಗಳಿಗೆ ಹೋಲಿಸಿದಾಗ ಗಣನೀಯ ಪ್ರಮಾಣದ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಸ್ಪೆಕ್ಟ್ರಮ್‌ ಸ್ವತ್ತುಗಳನ್ನು ಕೊಳ್ಳುವ ನಮ್ಮ ಉದ್ದೇಶಿತ ಕಾರ್ಯತಂತ್ರದ ಒಂದು ಭಾಗವಾಗಿತ್ತು” ಎಂದು ಹೇಳಿದ್ದಾರೆ.

ತಮ್ಮ ಗ್ರಾಹಕರಿಗೆ ಅತ್ಯುತ್ತಮ 5ಜಿ ಸೇವೆಗಳನ್ನು ಒದಗಿಸಲು ಸಮರ್ಥರಾಗಿರುವ ಬಗ್ಗೆ ಮುಂದುವರೆದು ಮಾತನಾಡಿದ ಅವರು “ಭಾರತದಲ್ಲಿ ವ್ಯಾಪ್ತಿ, ವೇಗ, ಮತ್ತು ಸುಪ್ತತೆಯ ವಿಷಯಗಳಲ್ಲಿ ಗ್ರಾಹಕರಿಗೆ ಅತ್ಯುತ್ತಮ 5ಜಿ ಅನುಭವನ್ನು ನೀಡಲು ಸಮರ್ಥರಾಗಲಿದ್ದೇವೆ ಎನ್ನುವ ಆತ್ಮವಿಶ್ವಾಸ ನಮಗಿದೆ” ಎಂದು ಹೇಳಿದರು.

ಇದು ನಮಗೆ ಎರಡೂ ಬಗೆಯ ಗ್ರಾಹಕರಾದ ವ್ಯಹಾರದಿಂದ -ಗ್ರಾಹಕರ (ಬಿ2ಸಿ) ಮತ್ತು ವ್ಯಹಾರದಿಂದ ವ್ಯವಹಾರಕ್ಕಾಗಿರುವ (ಬಿ2ಬಿ) ಗ್ರಾಹಕರ ಜೊತೆ ನಡೆಸುವ ವ್ಯವಹಾರಗಳ ಸ್ಥಾಪಿತ ಮಾದರಿಗಳನ್ನು ಬದಲಾಯಿಸುವ ಅವಕಾಶವನ್ನು ನೀಡುತ್ತದೆ. 5ಜಿ ತಂತ್ರಜ್ಞಾನವು ಭಾರತದ ಉತ್ಪಾದನಾವಲಯ, ಸೇವಾವಲಯ, ಮತ್ತು ಇನ್ನಿತರ ಅನೇಕ ವಲಯಗಳ ಸ್ವರೂಪವನ್ನೇ ಬದಲಿಸಿಬಿಡಬಲ್ಲ ಕ್ರಾಂತಿಯಾಗಿದೆ” ಎಂದೂ ಅವರು ಹೇಳಿದರು.

Airtel

Airtel

ಏರ್‌ಟೆಲ್‌ನ 5ಜಿ ಸೇವೆಗಳು ಇದೇ (August 2022) ತಿಂಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ

ದೇಶಾದ್ಯಂತ 5ಜಿ ಸೇವೆಯನ್ನು ತ್ವರಿತಗತಿಯಲ್ಲಿ ಒದಗಿಸಬೇಕೆನ್ನುವುದು ಈ ದೂರಸಂಪರ್ಕ ಕಂಪನಿಯ ಯೋಜನೆಯಾಗಿದ್ದು ಸೇವೆಯು ಪ್ರಮುಖ ನಗರಗಳಲ್ಲಿ ಮೊದಲು ಆರಂಭವಾಗಲಿದೆ. ಏರ್‌ಟೆಲ್‌ 5ಜಿ ಸೇವೆಗಳು 2022ರ ಆಗಸ್ಟ್‌ ತಿಂಗಳಲ್ಲೇ ಆರಂಭಿಸಲಾಗುವುದೆಂದು ಇನ್ನೊಂದು ಹೇಳಿಕೆಯಲ್ಲಿ ಕಂಪನಿಯು ಘೋಷಿಸಿದ್ದು, ತಾನು ಭಾರತದಾದ್ಯಂತ ಹೊಸ ತಂತ್ರಜ್ಞಾನವನ್ನು ಪೂರೈಸಲು ತಂತ್ರಜ್ಞಾನ ವಲಯದ ಅಗ್ರಮಾನ್ಯ ಹೆಸರುಗಳಾದ ಎರಿಕ್‌ಸನ್‌, ನೋಕಿಯಾ, ಮತ್ತು ಸ್ಯಾಮ್‌ಸಂಗ್‌ ಕಂಪನಿಗಳೊಂದಿಗೆ ಸಹಯೋಗವನ್ನು ಹೊಂದಿರುವುದಾಗಿಯೂ ಸಹ ತಿಳಿಸಿದೆ.

ಕಳೆದ ಕೆಲ ವರ್ಷಗಳಲ್ಲಿ ಏರ್‌ಟೆಲ್‌ ಕಂಪನಿಯು 5ಜಿ ಸೇವೆಗಳ ಸಾಮರ್ಥ್ಯವನ್ನು ಪರಿಶೀಲಿಸುವ ಸಲುವಾಗಿ ಉತ್ಪಾದನೆ, ರಿಟೈಲ್‌, ತಂತ್ರಜ್ಞಾನ, ಮತ್ತು ಆರೋಗ್ಯ ಸೇವೆಗಳ ವಲಯಗಳಿಗೆ ಸೇರಿದ ಅನೇಕ ಅಗ್ರಗಣ್ಯ ಬಹುರಾಷ್ಟ್ರೀಯ ಬ್ರಾಂಡ್‌ಗಳೊಂದಿಗೆ ಸಹಯೋಗವನ್ನು ಹೊಂದಿದ್ದು ಅನೇಕ ಯಶಸ್ವೀ ಬಳಕೆಯ ಪ್ರಕರಣಗಳನ್ನು ದಾಖಲಿಸಿದೆ. ಉದಾಹರಣೆಗೆ, ಕಳೆದ ತಿಂಗಳಲ್ಲೇ, ಭಾರತದ ಮೊಟ್ಟಮೊದಲ ಖಾಸಗಿ 5ಜಿ ಸಂಪರ್ಕಜಾಲವನ್ನು ಬಾಷ್‌ನ (BOSCH) ಒಂದು ಸ್ಥಾವರದಲ್ಲಿ ಬ್ರಾಂಡ್‌ ಕಾರ್ಯಾರಂಭಗೊಳಿಸಿತು. ಅದು 5ಜಿ ಅಂತರ್ಜಾಲ ಸಂಪರ್ಕದಿಂದ ಸುಸಜ್ಜಿತವಾದ ದೇಶದ ಮೊಟ್ಟಮೊದಲ ಖಾಸಗಿ ಆಂಬ್ಯುಲೆನ್ಸ್‌ ವಾಹನವನ್ನು ದೇಶಕ್ಕೆ ಸಮರ್ಪಿಸಲು ಅಪೋಲೋ ಆಸ್ಪತ್ರೆಯೊಂದಿಗೆ ಜೊತೆಯಾಗಿ ಕಾರ್ಯ ನಿರ್ವಹಿಸಿತು.

ಏರ್‌ಟೆಲ್‌ ಸಂಸ್ಥೆಯ 5ಜಿ ಸೇವಾವಲಯದ ಪ್ರಪ್ರಥಮಗಳ ಪರಂಪರೆಗೆ ಇವೆಲ್ಲಾ ಇತ್ತೀಚಿನ ಸೇರ್ಪಡೆಗಳಾಗಿವೆ. ಕಂಪನಿಯು ಹೊಸ ತಂತ್ರಜ್ಞಾನದ ಪರೀಕ್ಷೆಯನ್ನು 2018ರಲ್ಲೇ ನಡೆಸಿದ ಭಾರತದ ಮೊಟ್ಟಮೊದಲ ದೂರಸಂಪರ್ಕ ಸಂಸ್ಥೆಯಾಗಿದೆ. ಈ ಪರೀಕ್ಷೆಯ ನಂತರ ದೆಹಲಿಯ ಹೊರವಲಯದಲ್ಲಿ ನಡೆದ ಭಾರತದ ಪ್ರಪ್ರಥಮ ಗ್ರಾಮೀಣ ಪ್ರದೇಶದ 5ಜಿ ಪರೀಕ್ಷೆಯೂ ಸೇರಿದಂತೆ ಇತರ ಅನೇಕ ಪರೀಕ್ಷೆಗಳು ನಡೆದವು. ಕಳೆದ ವರ್ಷ 700 ಮೆಗಾಹರ್ಟ್ಸ್‌ ಬ್ಯಾಂಡ್‌ನಲ್ಲಿ 5ಜಿ ಪರೀಕ್ಷೆ ನಡೆಸಿದ ಮೊಟ್ಟಮೊದಲ ಕಂಪನಿಯೂ ಸಹ ಏರ್‌ಟೆಲ್‌ ಆಗಿತ್ತು.

ಕಳೆದ ವರ್ಷ ದೇಶದ ಪ್ರಪ್ರಥಮ ಕ್ಲೌಡ್‌ ಗೇಮಿಂಗ್‌ ಚಟುವಟಿಕೆಗೆ ಏರ್‌ಟೆಲ್‌ ಕಂಪನಿಯು ತನ್ನ ಪ್ರತ್ಯಕ್ಷ (ಲೈವ್‌) 5ಜಿ ಪರೀಕ್ಷಾ ಸಂಪರ್ಕಜಾಲದಲ್ಲಿ ಆತಿಥ್ಯವಹಿಸಿದ್ದು ಅದರಲ್ಲಿ ಇಬ್ಬರು ಪ್ರೊ ಗೇಮರ್‌ಗಳು ತಡೆರಹಿತ ಆನ್‌ಲೈನ್‌ ಗೇಮಿಂಗ್‌ ಅನುಭವವನ್ನು ಸಾಮಾನ್ಯ ಸ್ಮಾರ್ಟ್‌ಫೋನ್‌ಗಳ ಮೇಲೆ ಆಸ್ವಾದಿಸಿದರು. ಅಂತರ್ಜಾಲ ಸಂಪರ್ಕದ ವ್ಯಾಪ್ತಿಯನ್ನೇ ಬದಲಿಸಲಿರುವ 5ಜಿ ಸೇವೆಯ ತ್ವರಿತವಾದವೇಗ ಮತ್ತು ಅತ್ಯಲ್ಪ ಸುಪ್ತತೆಯನ್ನು (ಲೇಟೆನ್ಸಿ) ಪ್ರದರ್ಶಿಸುವ ಉದ್ದೇಶದಿಂದ ಈ ಚಟುವಟಿಕೆಯನ್ನು ಆಯೋಜಿಸಲಾಗಿತ್ತು. ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಏರ್‌ಟೆಲ್‌ ಕಂಪನಿಯು 175* ಮರುಪ್ರದರ್ಶವನ್ನು ಆಯೋಜಿಸಿ ಅದರಲ್ಲಿ ಭಾರತೀಯ ಕ್ರಿಕೆಟ್‌ ತಂಡದ ಜನಪ್ರಿಯ ಮಾಜಿನಾಯಕರಾದ ಕಪಿಲ್‌ ದೇವ್‌ರವರನ್ನು ಒಳಗೊಂಡಿದ್ದ ಮೊಟ್ಟಮೊದಲ 5ಜಿ-ಆಧಾರಿತ ಹೋಲೋಗ್ರಾಮ್‌ ಅನ್ನು ಪ್ರದರ್ಶಿಸಿತು. ಅದು ಮತ್ತೊಮ್ಮೆ 5ಜಿ ಸೇವೆಗಳು ಹೇಗೆ ಪ್ರತ್ಯಕ್ಷ (ಲೈವ್‌) ಮನರಂಜನೆಯನ್ನು ಬದಲಿಸಬಹುದು ಹಾಗೂ ನಾವು ಈ ತಂತ್ರಜ್ಞಾನದಿಂದ ಭವಿಷ್ಯದಲ್ಲಿ ಏನನ್ನು ನಿರೀಕ್ಷಿಸಬಹುದು ಎನ್ನುವುದರ ಕಿರುನೋಟವನ್ನು ಒದಗಿಸಿತು.

 

(ಹಕ್ಕು ನಿರಾಕರಣೆ: ಇದು 5G ಸ್ಪೆಕ್ಟ್ರಮ್ ಖರೀದಿ ಕುರಿತು ಪಾಲುದಾರ ಪೋಸ್ಟ್ ಆಗಿರುತ್ತದೆ)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada