ಬೆಂಗಳೂರು ಸಿಟಿ ಪೊಲೀಸ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ; ಪೊಲೀಸ್ ಇಲಾಖೆ ಸ್ಪಷ್ಟನೆ

|

Updated on: Apr 28, 2023 | 9:47 PM

ಬೆಂಗಳೂರು ನಗರ ಪೊಲೀಸ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಯೊಂದು ಕಾರ್ಯಾಚರಿಸುತ್ತಿದ್ದು, ನಾಗರಿಕರು ಎಚ್ಚರವಹಿಸುವಂತೆ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ಸಿಟಿ ಪೊಲೀಸ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ; ಪೊಲೀಸ್ ಇಲಾಖೆ ಸ್ಪಷ್ಟನೆ
ನಕಲಿ ಟ್ವಿಟರ್ ಖಾತೆಯ ಚಿತ್ರ
Follow us on

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ (BlrCityPolice) ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಯೊಂದು ಕಾರ್ಯಾಚರಿಸುತ್ತಿದ್ದು, ನಾಗರಿಕರು ಎಚ್ಚರವಹಿಸುವಂತೆ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. blrcitypolicee ಹೆಸರಿನಲ್ಲಿ ನಕಲಿ ಖಾತೆ ಕಾರ್ಯಾಚರಿಸುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ತಿಳಿಸಿದೆ.

‘blrcitypolicee’ ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್ ಬೆಂಗಳೂರು ನಗರ ಪೊಲೀಸ್​ ಟ್ವಿಟರ್​​ ಖಾತೆಯನ್ನೇ ಹೋಲುವಂತೆ ಇದ್ದು, ಜನರನ್ನು ಹಾದಿತಪ್ಪಿಸುತ್ತಿದೆ. ಈ ಖಾತೆಯ ಟ್ವೀಟ್‌ಗಳನ್ನು ನಮ್ಮ ಅಧಿಕೃತ ಹ್ಯಾಂಡಲ್‌ನಿಂದ ಬಂದ ಟ್ವೀಟ್​​ಗಳೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ನಮ್ಮ ಅಧಿಕೃತ ಟ್ವಿಟರ್​ ಹ್ಯಾಂಡಲ್ @BlrCityPolice ಆಗಿದ್ದು ಗ್ರೇ ಚೆಕ್​ಮಾರ್ಕ್ ಹೊಂದಿದೆ. ನಕಲಿ ಖಾತೆ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಟ್ವೀಟ್ ಮಾಡಿದೆ. ನಕಲಿ ಖಾತೆಯ ಸ್ಕ್ರೀನ್​ಶಾಟ್ ಅನ್ನೂ ಟ್ವೀಟ್ ಜತೆ ಲಗತ್ತಿಸಲಾಗಿದೆ.


ನಕಲಿ ಖಾತೆಯಲ್ಲಿ ಹಾಸ್ಯಮಯ ಸಂದೇಶಗಳನ್ನು ಹಂಚಿಕೊಂಡಿರುವುದೂ ಕಂಡುಬಂದಿದೆ. ಟ್ರಾಫಿಕ್ ಸಿಗ್ನಲ್ ಇದ್ದಾಗ ರಸ್ತೆ ದಾಟುವುದನ್ನು ತಪ್ಪಿಸಿ, ರೋಹಿತ್ ಶರ್ಮಾ ವಿದೇಶ ಟೂರ್​ಗಳನ್ನು ತಪ್ಪಿಸಿಕೊಂಡಂತೆ. ಸ್ಟೇ ಫಿಟ್ ಸ್ಟೇ ಹೆಲ್ದಿ. ಅರ್ಧಶತಕ ಸಮೀಪಿಸುತ್ತಿದ್ದಾಗ ವಿರಾಟ್ ಕೊಹ್ಲಿ ನಿಧಾನ ಮಾಡಿದಂತೆ ಝೀಬ್ರಾ ಕ್ರಾಸಿಂಗ್​ನಲ್ಲಿ ನಿಧಾನವಾಗಿರಿ ಎಂಬ ಸಂದೇಶ ನಕಲಿ ಟ್ವಿಟರ್​​ ಖಾತೆಯಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ