ಬೆಂಗಳೂರಿನಲ್ಲಿ ಬ್ಯಾಚುಲರ್ಸ್ಗಳಿಗೆ ಬಾಡಿಗೆ ಮನೆ ಏಕೆ ಕೊಡಲ್ಲ ಗೊತ್ತಾ? ಟ್ವಿಟರ್ನಲ್ಲಿ ಹರಿದಾಡುತ್ತಿರುವ ಫೋಟೋಗಳೇ ಹೇಳುತ್ತಿವೆ ಕಾರಣ
ಫ್ಲ್ಯಾಟ್ಅನ್ನು ಬಾಡಿಗೆಗೆ ಕೊಟ್ಟ ಮಹಾಪರಾಧಕ್ಕೆ ಆ ಫ್ಲ್ಯಾಟ್ನ ಮಾಲೀಕ ಎಂತಹ ಪರಿಸ್ಥಿತಿ ಎದುರಿಸಿದ ಎಂಬುದು ಆ ಪೋಸ್ಟ್ ಮೂಲಕ ಸಾಬೀತಾಗಿದೆ.
ಬೆಂಗಳೂರು ಇತರೆ ಕೆಲ ಕಾಸ್ಮೋಪಾಲಿಟನ್ ನಗರಗಳಂತೆ ಇಲ್ಲ. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬಗ್ಗೆ ಈ ವಿಷಯ ಹೇಳುತ್ತಿರುವುದು. ಅಪಾರ್ಟ್ಮೆಂಟ್ ಒಂದರಲ್ಲಿ ಫ್ಲ್ಯಾಟ್ ಬಾಡಿಗೆ ಪಡೆಯಬೇಕು ಅಂದರೆ ಸುಂದರವಾದ ಪಾರ್ಕ್ ನಲ್ಲಿ ಅಡ್ಡಾಡಿದಂಗೆ ಅಲ್ಲ. ಹತ್ತಾರು ಬಾರಿ ಮಾಲೀಕನ ಭೇಟಿ/ ಸಂದರ್ಶನಗಳು ನಡೆಯಬೇಕು. ಇನ್ನು ಅವಿವಾಹಿತ ಜೋಡಿಗಳು ಅಥವಾ ಯುವಕ, ಯುವತಿಯರಿಗೆ ಪ್ರತ್ಯೇಕವಾಗಿ ಬಾಡಿಗೆ ಪಡೆಯುವಾಗ ಎದುರಿಸುವ ಇಂತಹ ಅಡೆತಡೆಗಳ ಪಟ್ಟಿ ಹನುಮಂತನ ಬಾಲದಂತೆ ಇದೆ. ಪರಿಸ್ಥಿತಿ ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ರೆಡ್ಇಟ್ ಪೋಸ್ಟ್ ವೈರಲ್ ಆಗಿದೆ. ಅವುಗಳನ್ನೆಲ್ಲ ಮೀರಿ, ಅಂದರೆ ಯಾವುದೇ ಅಡೆತಡೆಗಳನ್ನು ಒಡ್ಡದೆ, ಸಲೀಸಾಗಿ ಫ್ಲ್ಯಾಟ್ಅನ್ನು ಬಾಡಿಗೆಗೆ ಕೊಟ್ಟ ಮಹಾಪರಾಧಕ್ಕೆ ಆ ಫ್ಲ್ಯಾಟ್ನ ಮಾಲೀಕ ಎಂತಹ ಪರಿಸ್ಥಿತಿ ಎದುರಿಸಿದ ಎಂಬುದು ಆ ಪೋಸ್ಟ್ ಮೂಲಕ ಸಾಬೀತಾಗಿದೆ.
MNCಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ತನ್ನ ಫ್ಲ್ಯಾಟ್ನ ಬಾಡಿಗೆಗೆ ನೀಡಿದಕ್ಕೆ ಮಾಲೀಕ ಈಗ ತಲೆ ಚಚ್ಚಿಕೊಳ್ಳುವಂತಾಗಿದೆ. ಬಾಡಿಗೆದಾರರೊಬ್ಬರು 3-4 ತಿಂಗಳು ಬಾಡಿಗೆ ಪಾವತಿಸಿ ನಂತರ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ನಂತರ ಕೆಲ ದಿನಗಳ ಬಳಿಕ ಮನೆಯನ್ನು ಖಾಲಿ ಮಾಡಬೇಕಾಗಿದೆ. ಹೀಗಾಗಿ ಭದ್ರತಾ ಠೇವಣಿ ಹಣವನ್ನು ಹಿಂತಿರುಗಿಸಿ ಎಂದು ಕರೆ ಮಾಡಿದ್ದರು. ಫ್ಲಾಟ್ ಅನ್ನು ಸರಿಯಾಗಿ ಹಸ್ತಾಂತರಿಸಲು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದ ಮಾಲೀಕ ಫ್ಲಾಟ್‌ಗೆ ಹೋಗಿ ನೋಡಿದಾಗ ಬಿಗ್ ಶಾಕ್ ಆಗಿದೆ. ಇಡೀ ಮನೆ ಹಸದ ಬುಟ್ಟಿಯಂತೆ ಕಂಡಿದೆ. ನೆಲದ ಮೇಲೆಲ್ಲ ಕಸ, ಕಿಟಕಿಗಳು ತೆರೆದಿದ್ದವು, ಪಾರಿವಾಳಗಳು ಮನೆಯ ಒಳಗೆ ಬಂದು ಗಲೀಜು ಮಾಡಿದ್ದವು. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ತೂರಾಡುತ್ತಿದ್ದವು. ನೆಲದ ಮೇಲೆ ಬಿದ್ದಿದ್ದ ಕೊಳಕು ಹಾಸಿಗೆ ಹೇಸಿಗೆ ತರುವಂತಿತ್ತು. ಅಡುಗೆ ಮನೆ, ಶೌಚಾಲಯ ಕೊಳೆತು ನಾರುತ್ತಿತ್ತು. ಇದನ್ನು ಕಂಡ ಮಾಲೀಕನಿಗೆ ತನ್ನ ಫ್ಲಾಟ್ ಸ್ಥಿತಿ ನೋಡಿ ಆಘಾತವಾಗಿದೆ.
ಇನ್ನು ರೆಡ್ಡಿಟ್ನಲ್ಲಿ ಮನೆ ಮಾಲೀಕ ಮಾಡಿದ್ದ ಪೋಸ್ಟನ್ನು ಡಿಲಿಟ್ ಮಾಡಲಾಗಿದೆ. ಆದ್ರೆ ಟ್ವಿಟರ್ ಬಳಕೆದಾರರು ಕೊಳಕಾದ ಫ್ಲ್ಯಾಟ್ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈಗ ಇವು ವೈರಲ್ ಆಗಿವೆ. ಕೆಲ ಬಳಕೆದಾರರು ಬ್ಯಾಚುಲರ್ ಯುವಕನ್ನು ಟೀಕಿಸಿದ್ದಾರೆ. ಫೋಟೋಗಳನ್ನು ಫೋಸ್ಟ್ ಮಾಡಿ, ಇದೇ ಕಾರಣಕ್ಕಾಗಿ ಬ್ಯಾಚುಲರ್ಗಳಿಗೆ ಮನೆ ಬಾಡಿಗೆ ಕುಡುವುದಿಲ್ಲ.. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ವಿಧ್ಯಾವಂತರು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಪಾಠ ಕಲಿತಿಲ್ಲ ಎಂದು ಟೀಕಿಸಿದ್ದಾರೆ. ಮತ್ತೆ ಕೆಲವರು ಮಾಲೀಕರು ತೆಗೆದುಕೊಂಡ ಠೇವಣಿಯಿಂದ ಸ್ವಚ್ಛತಾ ಶುಲ್ಕವನ್ನು ಕಡಿತಗೊಳಿಸಬಹುದು ಎಂದು ಸಲಹೆ ನೀಡಿದ್ದಾರೆ.
This is why people don’t like renting to bachelors.
An “educated” bachelor working in a “large MNC” did this in Bangalore.
Got these pics from Reddit. pic.twitter.com/LbYhEk9hx5
— Ravi Handa (@ravihanda) April 26, 2023
What if I tell you that in most cases this happens coz the landlord has already decided to deduct an exorbitant amount of money from the deposit. https://t.co/PArAdAYqaP pic.twitter.com/7wo8QESJc0
— holyforkingshirtballs ?️? (@forkingheck1) April 27, 2023
ಬೆಂಗಳೂರಿಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:00 pm, Thu, 27 April 23