Karnataka Assembly Election 2023: ಬೆಂಗಳೂರಿಗೆ ಕೊಟ್ಟ ತಮ್ಮ ಕೊಡಿಗೆಗಳ ಬಗ್ಗೆ ವಿವರಿಸಿದ ಹೆಚ್ಡಿ ದೇವೇಗೌಡ
ಬೆಂಗಳೂರಿಗೆ ನನ್ನ ಕೊಡುಗೆ ಸಾಕಷ್ಟಿದೆ. ದಾಬಸ್ಪೇಟೆ, ಹೊಸಕೋಟೆಯಲ್ಲಿ ರಿಂಗ್ ರೋಡ್ ಮಾಡಿದ್ದೇನೆ. 7 ಗ್ರಾಮ ಪಂಚಾಯತಿ ಜನರಿಗೆ ಕುಡಿಯುವ ನೀರು, ಸರಿಯಾದ ರಸ್ತೆ ಇರಲಿಲ್ಲ. ಅದನ್ನ ಬಿಬಿಎಂಪಿಗೆ ಸೇರಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.
ಬೆಂಗಳೂರು: ‘ಬೆಂಗಳೂರಿಗೆ ನನ್ನ ಕೊಡುಗೆ ಸಾಕಷ್ಟು ಇದೆ. ದಾಬಸ್ಪೇಟೆ, ಹೊಸಕೋಟೆಯಲ್ಲಿ ರಿಂಗ್ ರೋಡ್ ಮಾಡಿದ್ದೇನೆ. 7 ಗ್ರಾಮ ಪಂಚಾಯತಿ ಜನರಿಗೆ ಕುಡಿಯುವ ನೀರು, ಸರಿಯಾದ ರಸ್ತೆ ಇರಲಿಲ್ಲ. ಅದನ್ನ ಬಿಬಿಎಂಪಿಗೆ ಸೇರಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ(H. D. Deve Gowda) ಹೇಳಿದರು. ಬೆಂಗಳೂರಿನ ಜೆಡಿಎಸ್(JDS) ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ನಾಳೆಯಿಂದ ಮೇ 8ರವರೆಗೆ 62 ಕಡೆ ತಾತ್ಕಾಲಿಕ ಕಾರ್ಯಕ್ರಮ ನಿಗದಿಯಾಗಿದ್ದು, ವಾರದಲ್ಲಿ ಒಂದು ದಿನ ಆರೋಗ್ಯದ ಕಾರಣ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಜೆಡಿಎಸ್ ನಾಯಕರ ವಿರುದ್ಧ ಸಂಸದೆ ಸುಮಲತಾ ಟೀಕೆ ವಿಚಾರ ‘ದೊಡ್ಡವರ ಹೆಸರು ಪ್ರಸ್ತಾಪಿಸಿ ಯಾವುದೇ ಗೊಂದಲಕ್ಕೀಡಾಗಲ್ಲ. ಯಾರು ಏನು ಹೇಳಿದರು, ಅದಕ್ಕೂ ನನಗೂ ಸಂಬಂಧವಿಲ್ಲ. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಮಾತನಾಡಲಿ ಎನ್ನುವ ಮೂಲಕ ಸುಮಲತಾಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ:ಲಕ್ಷ್ಮಣ ಸವದಿ ರಾಜಕೀಯ ಜೀವನ ಅಂತ್ಯಗೊಳಿಸಲು ರಮೇಶ್ ಜಾರಕಿಹೊಳಿ ಪಣ, ಪ್ರಮುಖ ಹುದ್ದೆ ಕಿತ್ತುಕೊಳ್ಳಲು ಮೆಗಾ ಪ್ಲಾನ್
ಪ್ರಹ್ಲಾದ್ ಜೋಷಿ ಜೆಡಿಎಸ್ ಗೆ ಕೇವಲ 10,15 ಸ್ಥಾನ ಬರುತ್ತೆ ಎಂಬ ಹೇಳಿಕೆ ‘ ಮಾತನಾಡಲು ಅವರಿಗೆ ಸ್ವಾತಂತ್ರ್ಯ ವಿದೆ. ನಾವು ಅದನ್ನ ತಡೆಯಲು ಆಗೊಲ್ಲ, ಕಾಂಗ್ರೆಸ್‌ನವರು 25 ಸ್ಥಾನ ಬರುತ್ತೆ ಎಂದು ಹೇಳ್ತಾರೆ. ಅದನ್ನ ಜನರು ತೀರ್ಮಾನ ಮಾಡ್ತಾರೆ, 13 ನೇ ತಾರೀಖಿನವರೆಗೂ ಕಾದು ನೋಡೋಣ ಎಂದರು.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Thu, 27 April 23