ಐಪಿಎಲ್ನಲ್ಲೂ ಸದ್ದು ಮಾಡಿದ ಬಾಡಿಗೆ ಮನೆ ಗೋಳು: ಇಂದಿರಾನಗರದಲ್ಲಿ ಮನೆ ಬೇಕೆಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪೋಸ್ಟರ್ ಪ್ರದರ್ಶನ
ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್(CSK) ನಡುವೆ ನಡೆದ ಪಂದ್ಯ ವೀಕ್ಷಿಸಲು ಬಂದಿದ್ದ ಯುವಕರು ತಮಗೆ ಇಂದಿರಾನಗರದಲ್ಲಿ ಬಾಡಿಗೆ ಮನೆ ಬೇಕು ಎಂದು ಬೋರ್ಡ್ ಹಿಡಿದು ನಿಂತಿದ್ದ ಫೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು: ಕನಸಿನ ನಗರಿ ಬೆಂಗಳೂರಿನಲ್ಲಿ ನಮಗೆ ಸರಿಹೊಂದುವ ಬಾಡಿಗೆ ಮನೆ(Rent House In Bengaluru) ಹುಡುಕುವುದು ಕತ್ತಲಲ್ಲಿ ಸೂಜಿ ಹುಡುಕುವಷ್ಟು ಕಷ್ಟವಾಗಿದೆ. ಅದರಲ್ಲೂ ಇಂದಿರಾನಗರದಲ್ಲಿ(Indiranagar) ಬಾಡಿಗೆ ಮನೆಗಳಿಗಾಗಿ ಯುವಕರು ಪರದಾಡುವಂತಹ ಪರಿಸ್ಥಿತಿ ಇದೆ. ಹೀಗಾಗಿ ಆಗಾಗ ಬೆಂಗಳೂರಿನಲ್ಲಿ ಮನೆ ಬೇಕು ಎಂಬ ಬಗ್ಗೆ ತಮಾಷೆಯ ಫೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಆದ್ರೆ ಈ ಬಾರಿ ಒಂದು ಹೆಜ್ಜೆ ಮುಂದಿಟ್ಟು ಐಪಿಎಲ್ನಲ್ಲೂ ಬಾಡಿಗೆ ಮನೆಯ ಬಗ್ಗೆ ಚರ್ಚೆ ಜೋರಾಗಿದೆ.
ಸಾಮಾನ್ಯವಾಗಿ ಐಪಿಎಲ್ನಲ್ಲಿ ಪಂದ್ಯ ಆಡುವ ಆಟಗಾರರು, ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳು ವೈರಲ್ ಆಗುತ್ತಾರೆ. ಕೆಲವೊಮ್ಮೆ ಅಭಿಮಾನಿಗಳು ವರ್ತಿಸುವ ರೀತಿಯ ವಿಡಿಯೋಗಳು ಭಾರೀ ಸದ್ದು ಮಾಡುತ್ತವೆ. ಆದ್ರೆ ನಿನ್ನೆ(ಏಪ್ರಿಲ್ 17) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್(CSK) ನಡುವೆ ನಡೆದ ಪಂದ್ಯ ವೀಕ್ಷಿಸಲು ಬಂದಿದ್ದ ಯುವಕರು ತಮಗೆ ಇಂದಿರಾನಗರದಲ್ಲಿ ಬಾಡಿಗೆ ಮನೆ ಬೇಕು ಎಂದು ಬೋರ್ಡ್ ಹಿಡಿದು ನಿಂತಿದ್ದ ಫೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Could’ve asked Kolhi to marry us, but right now, priorities :@peakbengaluru pic.twitter.com/esLDUcR3Em
— Atin Bose (@BoseAtin) April 16, 2023
ಇದನ್ನೂ ಓದಿ: ಕಿಡ್ನಿ ಮಾರಾಟಕ್ಕಿದೆ -ಇಂದಿರಾನಗರದಲ್ಲಿ ಬಾಡಿಗೆ ಮನೆಗೆ ಡೆಪಾಸಿಟ್ ಇಡಲು ಹಣ ಬೇಕು, ವಿಚಿತ್ರ ಪೋಸ್ಟರ್ ವೈರಲ್
IPL ವೀಕ್ಷಿಸಲು ಬಂದ ಪ್ರೇಕ್ಷಕರೊಬ್ಬರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರಿನ ಇಂದಿರಾನಗರದಲ್ಲಿ 2 ಬಿಹೆಚ್ಕೆ ಮನೆ ಬೇಕಿದೆ ಎಂದು ಬೋರ್ಡ್ ಹಿಡಿದು ನಿಂತಿರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗ್ತಿದೆ. ಹಾಗೂ ಈ ಬಗ್ಗೆ ಚರ್ಚೆಗಳು ಶುರುವಾಗಿವೆ. ಅನೇಕರು ಈ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಈ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ ಟ್ವಿಟರ್ ಬಳಕೆದಾರರೊಬ್ಬರು, ಇಂದಿರಾನಗರದಲ್ಲಿ ಮನೆ ಹುಡುಕಲು ಇಂದಿರಾನಗರದ ಗೂಂಡಾ ಅಂದರೆ ರಾಹುಲ್ ದ್ರಾವಿಡ್ ಅವರೇ ಸಹಾಯ ಮಾಡಬಹುದು ಎಂದು ಹಾಸ್ಯ ಮಾಡಿದ್ದಾರೆ.
ಮಹಾಮಾರಿ ಕೊರೊನಾದ ನಂತರ ಬೆಂಗಳೂರು ಸಹಜ ಸ್ಥಿತಿಗೆ ಮರಳಿದ್ದು ನಗರದಲ್ಲಿ ಮನೆ ಹುಡುಕುವುದು ಕಷ್ಟಕರವಾಗಿದೆ. ಅದರಲ್ಲೂ ಬ್ಯಾಚುಲರ್ಸ್ಗಳ ಗೋಳು ಹೇಳತೀರದು. ಮದುವೆ ಆದವರಿಗೆ ಅಥವಾ ಫ್ಯಾಮಿಲಿಗೆ ಬೇಗನೆ ಮನೆ ಸಿಗುತ್ತದೆ. ಆದರೆ ಸಿಂಗಲ್ ಹುಡುಗರಿಗೆ ಮನೆ ನೀಡಲು ಮಾಲೀಕರು ತಕರಾರು ತೆಗೆಯುತ್ತಾರೆ.
ಬೆಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:34 pm, Tue, 18 April 23