ಕಿಡ್ನಿ ಮಾರಾಟಕ್ಕಿದೆ -ಇಂದಿರಾನಗರದಲ್ಲಿ ಬಾಡಿಗೆ ಮನೆಗೆ ಡೆಪಾಸಿಟ್ ಇಡಲು ಹಣ ಬೇಕು, ವಿಚಿತ್ರ ಪೋಸ್ಟರ್​ ವೈರಲ್

ಬೆಂಗಳೂರಿನ ಇಂದಿರಾನಗರದಲ್ಲಿ ಬಾಡಿಗೆ ಮನೆ ಪಡೆಯಲು ಮನೆಗೆ ಠೇವಣಿ ನೀಡುವ ಬಗ್ಗೆ ವ್ಯಕ್ತಿಯೊಬ್ಬರ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಿಡ್ನಿ ಮಾರಾಟಕ್ಕಿದೆ -ಇಂದಿರಾನಗರದಲ್ಲಿ ಬಾಡಿಗೆ ಮನೆಗೆ ಡೆಪಾಸಿಟ್ ಇಡಲು ಹಣ ಬೇಕು, ವಿಚಿತ್ರ ಪೋಸ್ಟರ್​ ವೈರಲ್
ವೈರಲ್ ಪೋಸ್ಟರ್
Follow us
ಆಯೇಷಾ ಬಾನು
|

Updated on:Feb 27, 2023 | 11:15 AM

ಬೆಂಗಳೂರು: ಸಿಲಿಕಾನ್ ಸಿಟಿ, ಟೆಕ್ ಸಿಟಿ, ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಒಂದು ಮನೆ ಹುಡುಕುವುದು ತಮಾಷೆಯ ವಿಷಯವಲ್ಲ. ಅದರಲ್ಲೂ ಕೋಟ್ಯಾನು ಕೋಟಿ ಜನರ ಕನಸಿನ ನಗರಿಯಲ್ಲಿ ಸಿಂಗಲ್ ಬೆಡ್​ ರೂಂಗೂ ಬಾಯಿ ತೆರೆಯುವಷ್ಟು ಕಾಸ್ಟ್ಲಿ. ಇಲ್ಲಿ ನಮಗೆ ಇಷ್ಟು ಆಗುವ ಮನೆ ಬೇಕು ಅಂದ್ರೆ ದುಪ್ಪಟ್ಟು ಹಣ ನೀಡಬೇಕು. ಅದರಲ್ಲೂ ಓನರ್​ಗಳ ಒಂದಷ್ಟು ರೂಲ್ಸ್​ಗೆ ಓಕೆ ಅನ್ನಬೇಕು. ಸದ್ಯ ಬೆಂಗಳೂರಿನ ಇಂದಿರಾನಗರದಲ್ಲಿ ಬಾಡಿಗೆ ಮನೆ ಪಡೆಯಲು ಮನೆಗೆ ಠೇವಣಿ ನೀಡುವ ಬಗ್ಗೆ ವ್ಯಕ್ತಿಯೊಬ್ಬರ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಅನೇಕರು ಕಮೆಂಟ್ ಮಾಡುತ್ತಿದ್ದಾರೆ.

ಕಿಡ್ನಿ ಮಾರಾಟಕ್ಕಿದೆ

ಇಂದಿರಾನಗರದಲ್ಲಿ ಬಾಡಿಗೆ ಮನೆಗೆ ಸೆಕ್ಯೂರಿಟಿ ಡೆಪಾಸಿಟ್ ಇಡಲು ಹಣ ಬೇಕಿದೆ. ಹೀಗಾಗಿ ನನ್ನ ಎಡ ಕಿಡ್ನಿ ಮಾರಾಟಕ್ಕಿದೆ… ಇದು ತಮಾಷೆಗಾಗಿ, ಆದ್ರೆ ನನಗೆ ಇಂದಿರಾನಗರದಲ್ಲಿ ಮನೆ ಬೇಕಿದೆ. ನನ್ನ ಪ್ರೊಫೈಲ್​ಗಾಗಿ ಇಲ್ಲಿ ಸ್ಕ್ಯಾನ್ ಮಾಡಿ ಎಂದು ಕ್ಯೂಆರ್ ಕೋಡ್ ಹಾಕಿರುವ ಪೋಸ್ಟರನ್ನು ಮರಕ್ಕೆ ಅಂಟಿಸಲಾಗಿದೆ. ಸದ್ಯ ಈ ಪೋಸ್ಟರ್​ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅನೇಕರು ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ಹಾಗೂ ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Rasgulla Chai: ರಸಗುಲ್ಲಾ ಚಹಾವನ್ನು ನೀವು ಎಂದಾದರೂ ಟ್ರೈ ಮಾಡಿದ್ದೀರಾ? ಇಲ್ಲಿದೆ ನೋಡಿ ವೈರಲ್​ ವಿಡಿಯೋ

ಇದು ತಮಾಷೆಯ ಪೋಸ್ಟ್ ಆಗಿದ್ದರೂ ಜನಸಾಮಾನ್ಯರ ಗೋಳಾಗಿದೆ. ಇದಕ್ಕೆ ರಮ್ಯಖ್ ಎಂಬ ಹೆಸರಿನ ಟ್ವಿಟರ್ ಬಳಕೆದಾರ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ.

ಟೆಕ್ ಕ್ಯಾಪಿಟಲ್‌ ಬೆಂಗಳೂರಿನಲ್ಲಿ ಮನೆಗಳ ಹೆಚ್ಚಿನ ಬಾಡಿಗೆ ಮತ್ತು ಠೇವಣಿಗಳ ಬಗ್ಗೆ ಜನರು ಪ್ರತಿಕ್ರಿಯಿಸುವುದರೊಂದಿಗೆ ತಮ್ಮ ಅನುಭವವನ್ನೂ ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟರ್ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಡಿಗೆ ಮತ್ತು ಠೇವಣಿಗಳ ಕುರಿತು ಚರ್ಚೆಗೆ ವೇದಿಕೆಯಾಗಿದೆ.

ಅನಿತಾ ರಾಣೆ ಎಂಬ ಬಳಕೆದಾರರು, ಬೆಂಗಳೂರು ದೇಶ ಮತ್ತು ಪ್ರಪಂಚದ ಹಲವು ಭಾಗಗಳ ಜನರಿಗೆ ನೆಲೆಯಾಗಿದೆ. ಮಾರ್ಕೆಟಿಂಗ್ ತಂತ್ರಗಳನ್ನು ಆಶ್ರಯಿಸಬೇಕಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ಅಭಿತೋಷ್ ಎಂಬ ಬಳಕೆದಾರರು, ತಾವು ಮನೆ ಹುಡುಕುವಾಗ ಮಾಲೀಕರಿಗೆ ನಿನ್ನನ್ನು ಶ್ರೀಮಂತನನ್ನಾಗಿ ಮಾಡುವ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದೆ ಎಂದು ಕಮೆಂಟ್ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:13 am, Mon, 27 February 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್