ಆಶಾ ಕಾರ್ಯಕರ್ತೆಯರಿಗೆ ಹಂಚಿದ ಸೌಧಿಯ 500 ರಿಯಲ್ ಭಾರತದಲ್ಲಿ ಎಷ್ಟು? ಸ್ಪಷ್ಟನೆ ಕೊಟ್ಟ ಜಮೀರ್
ಆಶಾ ಕಾರ್ಯಕರ್ತೆಯರಿಗೆ ಸೌಧಿಯ 500 ರಿಯಲ್ ಹಂಚಿರುವುದಕ್ಕೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್(zameer ahmed khan) ಅವರು ಆಶಾ ಕಾರ್ಯಕರ್ತೆಯರಿಗೆ ವಿದೇಶಿ ಕರೆನ್ಸಿ ಹಂಚಿದ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಇನ್ನು ಚುನಾವಣೆ ಸಂದರ್ಭದಲ್ಲಿ ವಿದೇಶಿ ಕರೆನ್ಸಿ ಹಂಚಿಕೆ ಮಾಡಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಜಮೀರ್ ಅಹಮ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಫೆಬ್ರುವರಿ 27) ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ಸೌದಿಗೆ ಹೋಗುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ ಹಣ ನೀಡಿದ್ದೇನೆ. ಸೌದಿಯಲ್ಲಿ ಕರೆನ್ಸಿ ಬದಲಾಯಿಸಲು ಹೇಳಿದ್ದೇನೆ. ವಿದೇಶಿ ಕರೆನ್ಸಿ ಹಂಚಿದ್ದಕ್ಕೆ ಕಾನೂನು ತೊಡಕು ಏನೂ ಆಗುವುದಿಲ್ಲ, ಅವರಿಗೆ ತಲಾ 12 ಸಾವಿರ ಹಂಚಿದ್ದೇನೆ. ಸೌಧಿಯಲ್ಲಿ 500 ರಿಯಲ್ ಆಗುತ್ತೆ. ಅಲ್ಲಿ ಹೋಗಿ ಕರೆನ್ಸಿ ಬದಲಾಯಿಸಲು ಹೇಳಿದ್ದೇನೆ. ನೋಟು ಹಂಚಿದ್ದು ಕಾನೂನು ತೊಡಕು ಏನು ಆಗಲ್ಲ. ನಾನು ಅದರ ವಿವರಣೆ ಕೊಟ್ಟು ಕಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ 123 ಮಿಷನ್ ಬಗ್ಗೆ ಮಾತನಾಡಿದ ಜಮೀರ್, ಜೆಡಿಎಸ್ನವರು ತಪ್ಪಾಗಿ ಒಂದು ಸೇರಿಸಿ ಬಿಟ್ಟಿದ್ದಾರೆ. ಅವರು ಗೆಲ್ಲುವುದು 23 ಕ್ಷೇತ್ರ ಮಾತ್ರ. ಯಾರೇ ಆದ್ರೂ ದೇವೇಗೌಡರ ಮನೆಗೆ ಹೋಗುವುದಾದರೆ ಅವರಿಗೆ ಬಹುಮತ ಬರಲ್ಲ ಅಂತ ಅಲ್ವಾ. ಮತ್ತೆ 123 ಮಿಷನ್ ಹೇಗೆ ಆಗುತ್ತೆ ಎಂದು ಜೆಡಿಎಸ್ ಬಗ್ಗೆ ವ್ಯಂಗ್ಯವಾಡಿದರು.
ಮುಖಬೆಲೆಯ ನೋಟು ನೀಡುವುದರ ಜೊತೆಗೆ ನ್ಯಾಷನಲ್ ಟ್ರಾವೆಲ್ಸ್ ಕಿಟ್ ವಿತರಣೆ ಮಾಡಿದ್ದರು. ಬೆಂಗಳೂರಿನ ಗೋರಿಪಾಳ್ಯದ ಪೋಸ್ಟ್ ಆಫೀಸ್ ಆವರಣದಲ್ಲಿ ಸೌದಿ ಅರೇಬಿಯಾದ 500 ಮುಖಬೆಲೆಯ ನೋಟು ನೀಡಿ ಬಿಬಿಎಂಪಿಯ 46 ಆಶಾ ಕಾರ್ಯಕರ್ತೆಯರನ್ನು ಮೆಕ್ಕಾಗೆ ಕಳಿಸಿಕೊಟ್ಟರು. ಪಾದರಾಯನಪುರ ವಾರ್ಡ್, ಜೆಜೆಆರ್ ನಗರದ ವಾರ್ಡ್ ಹಾಗೂ ರಾಯಪುರಂ ವಾರ್ಡ್ ಆಶಾ ಕಾರ್ಯಕರ್ತೆಯರಿಗೆ ವಿದೇಶಿ ನೋಟು ನೀಡಿದ್ದಾರೆ. ಜಮೀರ್ ಹಂಚಿದ ಸೌದಿ ಅರೇಬಿಯಾದ 5೦೦ ರೂ.ಗೆ ಭಾರತದಲ್ಲಿ 11ಸಾವಿರದ 34 ರೂಪಾಯಿ.