ಬೆಂಗಳೂರು: ಹಸು ಲೋನ್ಗೆ ದಾಖಲೆ ನೀಡಿದ್ದ ರೈತನಿಗೆ ನೋಟಿಸ್ ನೀಡಲಾಗಿದೆ. 40 ಲಕ್ಷ ತೆರಿಗೆ ಕಟ್ಟಬೇಕು ಎಂದು ರೈತನಿಗೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯ ಚೊಕ್ಕನಹಳ್ಳಿ ಗ್ರಾಮದ ರೈತ ಮುನಿರಾಜುಗೆ ನೋಟಿಸ್ ಜಾರಿಯಾಗಿದೆ. ಹಸು ಲೋನ್ ಕೊಡಿಸುವುದಾಗಿ ಆಕ್ರಮ ವಹಿವಾಟು ಮಾಡಲಾಗಿತ್ತು. ಮುನಿರಾಜು ಬ್ಯಾಂಕ್ ಖಾತೆಯಲ್ಲಿ ಅಕ್ರಮ ವಹಿವಾಟು ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಈಗ ರೈತ ಬಲಿಪಶುವಾಗಿದ್ದಾರೆ ಎಂದು ತಿಳಿದುಬಂದಿದೆ.
ರೈತನಿಗೆ ಲೋನ್ ಕೊಡಿಸುವುದಾಗಿ ಝಾನ್ಸಿ ಹೇಳಿದ್ದರು. ರೈತನ ಬ್ಯಾಂಕ್ ಖಾತೆ ವಿವರಗಳನ್ನ ಝಾನ್ಸಿ ಎಂಬವರು ಪಡೆದಿದ್ದರು. 2 ಬಾರಿ ಝಾನ್ಸಿಗೆ ರೈತ ಮುನಿರಾಜು ಒಟಿಪಿ ಹೇಳಿದ್ದರು. ಬಳಿಕ ಲೋನ್ ರಿಜೆಕ್ಟ್ ಆಗಿದೆ ಎಂದು ಝಾನ್ಸಿ ಹೇಳಿದ್ದಳು. ಇದಾದ ಬಳಿಕ ಜಿಎಸ್ಟಿ ಅಧಿಕಾರಿಗಳಿಂದ ನೋಟಿಸ್ ಬಂದಿದೆ. ನಿಮ್ಮ ಖಾತೆಯಲ್ಲಿ 2 ಕೋಟಿ ರೂ. ವಹಿವಾಟು ಆಗಿದೆ. 40 ಲಕ್ಷ ತೆರಿಗೆ ಕಟ್ಟಬೇಕು ಎಂದು ರೈತನಿಗೆ ನೋಟಿಸ್ ಬಂದಿದೆ. ಈ ಬಗ್ಗೆ ಬಾಗಲೂರು ಠಾಣೆಗೆ ಮುನಿರಾಜು ದೂರು ನೀಡಿದ್ಧಾರೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.
ಚಿಕ್ಕಮಗಳೂರು: ಬಾರ್ ಧ್ವಂಸಗೊಳಿಸಿದ ಮಹಿಳೆಯರು
ಮುಸ್ಲಾಪುರದಲ್ಲಿ ಬಾರ್ಗೆ ನುಗ್ಗಿ ಮಹಿಳೆಯರು ಬಾರ್ ಧ್ವಂಸಗೊಳಿಸಿದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ಬಾರ್ ಧ್ವಂಸ ಮಾಡಿದ ಘಟನೆ ನಡೆದಿದೆ. ನಮ್ಮೂರಿನಲ್ಲಿ ಬಾರ್ ತೆರೆಯಬೇಡಿ ಎಂದು ಮಹಿಳೆಯರು ಧರಣಿ ನಡೆಸಿದ್ದರು. ಸ್ಥಳೀಯರ ವಿರೋಧದ ನಡುವೆಯೂ ಬಾರ್ ತೆರೆಯಲಾಗಿತ್ತು. ರೊಚ್ಚಿಗೆದ್ದು ಬಾರ್ಗೆ ನುಗ್ಗಿದ ಮಹಿಳೆಯರಿಂದ ವಸ್ತುಗಳು ಧ್ವಂಸ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಬಾರ್ ನಡೆಸಲು ಬಿಡಲ್ಲ ಎಂದು ಮಹಿಳೆಯರು ಪಟ್ಟು ಹಿಡಿದಿದ್ದಾರೆ.
ಚಿಕ್ಕಮಗಳೂರು: 25 ವರ್ಷದ ಗಂಡಾನೆ ಸಾವು
ಚಿಕ್ಕಮಗಳೂರು ತಾಲೂಕಿನ ತರೀಕೆರೆ ತಾಲೂಕಿನ ನಂದಿಬಟ್ಟಲು ಗ್ರಾಮದಲ್ಲಿ 25 ವರ್ಷದ ಗಂಡಾನೆ ಸಾವನ್ನಪ್ಪಿದೆ. ಅನುಮಾನಾಸ್ಪದ ರೀತಿಯಲ್ಲಿ ಕಾಡಾನೆ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕಳ್ಳಸಾಗಣೆ ಮಾಡುತ್ತಿದ್ದ 170 ನಕ್ಷತ್ರ ಆಮೆಗಳ ರಕ್ಷಣೆ
ಇದನ್ನೂ ಓದಿ: Crime News: ಮಾನವ ಹಕ್ಕು, ಭ್ರಷ್ಟಾಚಾರ ಮುಕ್ತ ಸಂಘಟನೆಯ ಉಪಾಧ್ಯಕ್ಷರ ಬರ್ಬರ ಹತ್ಯೆ