ಚುನಾವಣೆ ಹೊಸ್ತಿಲಲ್ಲೇ ಸಾಲು ಸಾಲು ಪ್ರತಿಭಟನೆ; ಮಾರ್ಚ್ 16ರ ಮಧ್ಯ ರಾತ್ರಿಯಿಂದಲೇ ಲಾರಿ ಮುಷ್ಕರ

ಮಧ್ಯಮ ಹಾಗೂ ಲಘು ಸರಕು ಸಾಗಾಣಿಕೆ ವಾಹನಗಳನ್ನು ನಗರದ ಒಳಗೆ ನಿಷೇಧ ಮಾಡಿರುವುದಕ್ಕೆ ಬೆಂಗಳೂರು ನಗರ ಟೆಂಪೋ ಮಾಲೀಕರ ಸಂಘಗಳ ಒಕ್ಕೂಟದಿಂದ ಮುಷ್ಕರಕ್ಕೆ ಕರೆ ಕೊಡಲಾಗಿದೆ.

ಚುನಾವಣೆ ಹೊಸ್ತಿಲಲ್ಲೇ ಸಾಲು ಸಾಲು ಪ್ರತಿಭಟನೆ; ಮಾರ್ಚ್ 16ರ ಮಧ್ಯ ರಾತ್ರಿಯಿಂದಲೇ ಲಾರಿ ಮುಷ್ಕರ
ಸಾಂದರ್ಭಿಕ ಚಿತ್ರ

Updated on: Mar 15, 2023 | 3:18 PM

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಟ್ಟಲಿದೆ. ನಾಳೆಯಿಂದ ರಾಜ್ಯದಲ್ಲಿ ಸಾಲು ಸಾಲು ಪ್ರತಿಭಟನೆಗಳು ನಡೆಯಲಿವೆ. ಕೆಪಿಟಿಸಿಎಲ್, ಕೆಎಸ್​ಆರ್​ಟಿಸಿ, ಪೌರ ಕಾರ್ಮಿಕರು ಪ್ರತಿಭಟನೆಗೆ ಕರೆ ಕೊಟ್ಟಿದ್ದು ಇದೀಗ ಲಾರಿ ಮಾಲೀಕರು ಕೂಡ ಪ್ರತಿಭಟನೆ ನಡೆಸಲಿದ್ದಾರೆ. ನಾಳೆಯಿಂದ(ಮಾರ್ಚ್ 16) ಅನಿರ್ದಿಷ್ಟವಧಿ ಮುಷ್ಕರಕ್ಕೆ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ಕರೆ ಕೊಟ್ಟಿದೆ.

ಮಾರ್ಚ್ 16 ರಿಂದ ರಾಜ್ಯಾದ್ಯಂತ ಮುಷ್ಕರ ನಡೆಸಲು ಕೆಪಿಟಿಸಿಎಲ್​ ನೌಕರರು ನಿರ್ಧರಿಸಿದ್ದರು. ಆದ್ರೆ ಈಗ ಮುಷ್ಕರವನ್ನು ಹಿಂಪಡೆದಿದ್ದಾರೆ. ಇನ್ನು ಮತ್ತೊಂದೆಡೆ ಬಿಬಿಎಂಪಿ ಕಸ ಸಾಗಣೆ ಕಾರ್ಮಿಕರು ಮಾರ್ಚ್ 20ರಂದು ಮುಷ್ಕರಕ್ಕೆ ನಿರ್ಧರಿಸಿದ್ದಾರೆ. ಜೊತೆಗೆ ಯುಗಾದಿ ಹಬ್ಬದ ಒಂದು ದಿನ ಹಿಂದೆ ಅಂದ್ರೆ ಮಾರ್ಚ್ 21ರಂದು ಧರಣಿ ನಡೆಸಲು ಕೆಎಸ್​ಆರ್​ಟಿಸಿ ನಿರ್ಧರಿಸಿದೆ. ಈ ಮುಷ್ಕರಕ್ಕೆ 4 ನಿಗಮಗಳ ನೌಕರರು ಬೆಂಬಲ ವ್ಯಕ್ತಪಡಿಸಿದ್ದಯ ಯುಗಾದಿ ಹಬ್ಬಕ್ಕೆ ಊರಿಗೆ ಹೋಗಲು ಸಿದ್ಧತೆ ನಡೆಸುತ್ತಿರುವವರಿಗೆ ಭಾರಿ ಸಮಸ್ಯೆ ಎದುರಾಗಲಿದೆ. ಇವುಗಳ ನಡುವೆ ಇದೀಗ ನಾಳೆಯಿಂದಲೇ ಮುಷ್ಕರ ನಡೆಸಲು ಲಾರಿ ಮಾಲೀಕರು ಮುಂದಾಗಿದ್ದಾರೆ.

ಮಧ್ಯಮ ಹಾಗೂ ಲಘು ಸರಕು ಸಾಗಾಣಿಕೆ ವಾಹನಗಳನ್ನು ನಗರದ ಒಳಗೆ ನಿಷೇಧ ಮಾಡಿರುವುದಕ್ಕೆ ಬೆಂಗಳೂರು ನಗರ ಟೆಂಪೋ ಮಾಲೀಕರ ಸಂಘಗಳ ಒಕ್ಕೂಟದಿಂದ ಮುಷ್ಕರಕ್ಕೆ ಕರೆ ಕೊಡಲಾಗಿದೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆ ರಾತ್ರಿ 12 ಗಂಟೆಯಿಂದ ಲಾರಿ ಮಾಲೀಕರ ಅನಿರ್ದಿಷ್ಟವಧಿ ಮುಷ್ಕರ ನಡೆಸಲಿದ್ದಾರೆ.

ಇದನ್ನೂ ಓದಿ: ಮಾ, 20ರಂದು ಬಿಬಿಎಂಪಿ ಪೌರಕಾರ್ಮಿಕರಿಂದ ಪ್ರತಿಭಟನೆಗೆ ಕರೆ: ನಗರದಲ್ಲಿ ಎದುರಾಗಲಿದೆ ಕಸ ವಿಲೇವಾರಿ ಸಮಸ್ಯೆ

ಲಾರಿ ಮಾಲೀಕರ ಸಂಘದ ಬೇಡಿಕೆಗಳೇನು?

  • ಕ್ಯೂಆರ್ ಕೋಡ್ ಆಧರಿತ ರಿಫ್ಲ್ಕ್ಟರ್ ಟೇಪುಗಳನ್ನು ಅಳವಡಿಸಿಕೊಳ್ಳಬೇಕು ಅನ್ನೋ ನಿಯಮ ತೆಗೆಯಬೇಕು
  • ಬೆಂಗಳೂರು- ಮೈಸೂರು ರಸ್ತೆಯಲ್ಲಿ ದ್ವಿಚಕ್ರ ಮತ್ತು ಮಂದಗತಿಯಲ್ಲಿ ಚಲಿಸುವ ಟ್ರಾಕ್ಟರ್ ಆಟೋರಿಕ್ಷಾಗಳ ಓಡಾಟ ನಿಷೇಧಿಸಬೇಕು
  • ನೈಸ್ ರಸ್ತೆಯಲ್ಲಿ ಕಳೆದ 10 ವರ್ಷಗಳಿಂದ ಹೆಚ್ಚು ಟೋಲ್ ಹಣ ತೆಗೆದುಕೊಳ್ಳುತ್ತಿದ್ದಾರೆ. ಆದ್ರಿಂದ ಹಗಲು ದರೋಡೆ ಮಾಡಲಾಗುತ್ತಿದೆ ಅದನ್ನು ಈ ಕೂಡಲೇ ತಡೆಯಬೇಕು
  • ಲಾರಿ ಬಾಡಿಗೆಯೊಂದಿಗೆ ಟೋಲ್ ಸುಂಕವನ್ನು ಬಾಡಿಗೆ ನೀಡಿದವರೇ ಕೊಡಬೇಕು
  • ನಗರದ ಒಳಗೆ ಅವೈಜ್ಞಾನಿಕ ವಾಹನಗಳನ್ನ ನಿಷೇಧಿಸಿರುವ ನಿಯಮವನ್ನ ವಾಪಸ್ಸು ಪಡೆಯಬೇಕು

    ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ