ಭಾರತೀಯ ಜಲ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಕರ್ನಾಟಕದ 5 ಜಲ ಮೂಲಗಳು ಇಲ್ಲಿವೆ

ದೇಶದ 75 ಜಲ ಪಾರಂಪರಿಕ ತಾಣಗಳ ಪಟ್ಟಿಗೆ ರಾಜ್ಯದ 5 ಜಲ ಮೂಲಗಳು ಸೇರ್ಪಡೆಯಾಗಿವೆ. ಈ 5 ಜಲ ಮೂಲಗಳು ಸುಮಾರು 100 ವರ್ಷಗಳ ಇತಿಹಾಸ ಹೊಂದಿವೆ.

ಭಾರತೀಯ ಜಲ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಕರ್ನಾಟಕದ 5 ಜಲ ಮೂಲಗಳು ಇಲ್ಲಿವೆ
ಮದಗಾದ ಕೆರೆ
Follow us
ವಿವೇಕ ಬಿರಾದಾರ
|

Updated on: Mar 16, 2023 | 6:00 AM

ಬೆಂಗಳೂರು: ದೇಶದ 75 ಜಲ ಪಾರಂಪರಿಕ ತಾಣಗಳ (Water Heritage Sites) ಪಟ್ಟಿಗೆ ರಾಜ್ಯದ 5 ಜಲ ಮೂಲಗಳು ಸೇರ್ಪಡೆಯಾಗಿವೆ ಎಂದು ಖಾಸಗಿ ಸುದ್ದಿ ಸಂಸ್ಥೆ ದಿ ಇಂಡಿಯನ್​ ಎಕ್ಸಪ್ರೆಸ್​ ವರದಿ ಮಾಡಿದೆ. ಈ 5 ಜಲ ಮೂಲಗಳು ಸುಮಾರು 100 ವರ್ಷಗಳ ಇತಿಹಾಸ ಹೊಂದಿವೆ.

ಜಲ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಕರ್ನಾಟಕದ 5 ಜಲ ಮೂಲಗಳು

  1. ಹೆಸರಘಟ್ಟ ಕೆರೆ​ (ಬೆಂಗಳೂರು)

1500 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿರವ ಹೆಸರಘಟ್ಟ ಕೆರೆ​ ಜಲ ಪಾರಂಪರಿಕ ಪಟ್ಟಿಗೆ ಸೇರಿದೆ. ಜಲ ಶಕ್ತಿ ಸಚಿವಾಲಯದ ಪ್ರಕಾರ, ಶಾಸನಗಳ ಆಧಾರದ ಮೇಲೆ, ಹೆಸರಘಟ್ಟ ಕೆರೆ 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಬೆಂಗಳೂರಿನ ಹೆಸರಗಟ್ಟದಲ್ಲಿದೆ. ಸದ್ಯ ಹೆಸರಘಟ್ಟ ಕೆರೆ​ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಡಿಯಲ್ಲಿದೆ.

2. ಹೊಸ ಮದಗಾದ ಕೆರೆ (ಚಿಕ್ಕಮಗಳೂರು)

ಚಿಕ್ಕಮಗಳೂರು ಜಿಲ್ಲೆಯ ಮದಗಾದ ಕೆರೆ ಮತ್ತೊಂದು ಜಲ ಪಾರಂಪರಿಕ ತಾಣವಾಗಿದೆ. ಈ ಕೆರೆಗೆ ಬಾಬಾಬುಡನ್ ಗಿರಿ ಬೆಟ್ಟಗಳಿಂದ ನೀರು ಹರಿದುಬಂದು ಶೇಖರಣೆಯಾಗುತ್ತದೆ. ಇದರಿಂದ ಕರೆ ಸದಾ ತುಂಬಿರುತ್ತದೆ. ಈ ಕೆರೆಯನ್ನು 500 ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿತ್ತು ಎನ್ನಲಾಗುತ್ತಿದೆ.

3. ಚೋಳನಕುಂಟೆ ಕೆರೆ (ಕೋಲಾರ)

ಚೋಳನಕುಂಟೆ ಕೆರೆಯನ್ನು ಕ್ರಿಶ 11ನೇ ಶತಮಾನದಲ್ಲಿ ಚೋಳರು ನಿರ್ಮಿಸಿದ್ದಾರೆ. ಈ ಕೆರೆ ಕೂಡ ಜಲ ಪಾರಂಪರಿಕ ತಾಣ ಪಟ್ಟಿಗೆ ಸೇರಿದೆ.

4. ವಿಜಯನಗರ ಕಾಲುವೆ

ತುಂಗಭದ್ರಾ ನದಿಗೆ ನಿರ್ಮಿಸಲಾಗಿರುವ ವಿಜಯನಗರ ಕಾಲುವೆ ಜಲ ಪಾರಂಪರಿಕ ತಾಣ ಪಟ್ಟಿಗೆ ಸೇರಿದೆ. 215 ಕಿಮೀ ಉದ್ದ ಕಾಲುವೆ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ನೀರು ಸರಬರಾಜು ಮಾಡುತ್ತದೆ. ಈ ಕಾಲುವೆಯಿಂದ 16,242 ಹೆಕ್ಟರ್​ ಭೂ ಪ್ರದೇಶಕ್ಕೆ ನೀರು ಪೂರೈಕೆಯಾಗುತ್ತದೆ. ಸುಮಾರು 400 ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯದ ರಾಜರು ಈ ಕಾಲುವೆಯನ್ನು ನಿರ್ಮಾಣ ಮಾಡಿದ್ದಾರೆ.

5 ಮೆಟ್ಟಿಲುಬಾವಿ (ಬಾಗಲಕೋಟೆ)

ಬಾಗಲಕೋಟೆ ಜಿಲ್ಲೆಯಲ್ಲಿರವ ಐಹೊಳೆಯಲ್ಲಿರುವ ದೊಡ್ಡ ದುರ್ಗಾ ದೇವಾಲಯದ ಆವರಣದಲ್ಲಿರುವ ಮೆಟ್ಟಲುಬಾವಿ, ಜಲ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿದೆ. ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಿಸುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ