Bangalore: ಮೆಜೆಸ್ಟಿಕ್​ನ ಸಿಟಿ ಸೆಂಟರ್​ ಶಾಪ್ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ, 5 ಲಕ್ಷ ರೂ. ವಶಕ್ಕೆ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಚುನಾವಣಾಧಿಕಾರಿಗಳು ಫುಲ್ ಆಕ್ಟಿವ್ ಆಗಿದ್ದು, ಅಲ್ಲಲ್ಲಿ ದಾಳಿ ನಡೆಸಿ ದಾಖಲೆ ಇಲ್ಲದ ಹಣ, ವಸ್ತುಗಳನ್ನು ವಶಕ್ಕೆ ಪಡೆದಯುತ್ತಿದ್ದಾರೆ. ಇದೀಗ ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿ ದಾಳಿ ನಡೆಸಿದ ಫ್ಲೈಯಿಂಗ್ ಸ್ಕ್ವಾಡ್, ನಗದು ಜಪ್ತಿ ಮಾಡಿದೆ.

Bangalore: ಮೆಜೆಸ್ಟಿಕ್​ನ ಸಿಟಿ ಸೆಂಟರ್​ ಶಾಪ್ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ, 5 ಲಕ್ಷ ರೂ. ವಶಕ್ಕೆ
ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿರುವ ಸಿಟಿ ಸೆಂಟರ್​ ಶಾಪ್ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ, 5 ಲಕ್ಷ ರೂ. ವಶಕ್ಕೆ (ಸಾಂದರ್ಭಿಕ ಚಿತ್ರ)
Follow us
Rakesh Nayak Manchi
|

Updated on:May 06, 2023 | 4:47 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಹಿನ್ನೆಲೆ ಚುನಾವಣಾಧಿಕಾರಿಗಳು ಫುಲ್ ಆಕ್ಟಿವ್ ಆಗಿದ್ದು, ಅಲ್ಲಲ್ಲಿ ದಾಳಿ ನಡೆಸಿ ದಾಖಲೆ ಇಲ್ಲದ ಹಣ, ವಸ್ತುಗಳನ್ನು ವಶಕ್ಕೆ ಪಡೆದಯುತ್ತಿದ್ದಾರೆ. ಇದೀಗ ಬೆಂಗಳೂರಿನ ಮೆಜೆಸ್ಟಿಕ್​ನಲ್ಲಿ ದಾಳಿ ನಡೆಸಿದ ಫ್ಲೈಯಿಂಗ್ ಸ್ಕ್ವಾಡ್, ನಗದು ಜಪ್ತಿ ಮಾಡಿದೆ. ಸಿಟಿ ಸೆಂಟರ್​ಗೆ (City Center) ದಾಳಿ ನಡೆಸಿ ಶಾಪ್​ವೊಂದರಲ್ಲಿ ಹಣ ಪತ್ತೆಯಾಗಿದೆ. ವಿಚಾರಣೆ ವೇಳೆ ದಾಖಲೆ ಇಲ್ಲದೇ ಇರುವುದು ತಿಳಿದುಬಂದ ಹಿನ್ನೆಲೆ 5.22 ಲಕ್ಷ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯದ ಹಲವೆಡೆ ಮತದಾರರಿಗೆ ಹಂಚಲು ಕೊಂಡೊಯ್ಯಲಾಗುತ್ತಿರುವ ಲಕ್ಷ ಲಕ್ಷ ರೂ. ನಗದು, ಚಿನ್ನಾಭರಣ, ಕುಕ್ಕರ್ ಸೇರಿದಂತೆ ಗೃಹ ಬಳಕೆಯ ಸಾಮಗ್ರಿಗಳನ್ನು ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:46 pm, Sat, 6 May 23