ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಜಾಮೀನು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 19, 2021 | 4:40 PM

ಜಾಮೀನು ದೊರೆತ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಶೀಘ್ರ ಬಿಡುಗಡೆಯಾಗುವ ಸಾಧ್ಯತೆಯಿದೆ. ಜೈಲಿನಿಂದ ಬಿಡುಗಡೆಯಾದರೂ ಧಾರವಾಡ ಪ್ರವೇಶಿಸುವಂತಿಲ್ಲ.

ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಜಾಮೀನು
ವಿನಯ್ ಕುಲಕರ್ಣಿ (ಸಂಗ್ರಹ ಚಿತ್ರ).
Follow us on

ಬೆಂಗಳೂರು: ಕೊಲೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಜಾಮೀನು ನೀಡಿದೆ. ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಆರೋಪಿಯಾಗಿದ್ದಾರೆ. ಕೊಲೆ ಪ್ರಕರಣದಲ್ಲಿ ಈ ಹಿಂದೆ ಸುಪ್ರೀಂಕೋರ್ಟ್​ ಜಾಮೀನು ನೀಡಿತ್ತು. ಇದೀಗ ಜನಪ್ರತಿನಿಧಿಗಳ ಕೋರ್ಟ್​ನಿಂದ ಸಾಕ್ಷಿನಾಶ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕಿದೆ.

ಜಾಮೀನು ದೊರೆತ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಶೀಘ್ರ ಬಿಡುಗಡೆಯಾಗುವ ಸಾಧ್ಯತೆಯಿದೆ. ಜೈಲಿನಿಂದ ಬಿಡುಗಡೆಯಾದರೂ ಧಾರವಾಡ ಪ್ರವೇಶಿಸುವಂತಿಲ್ಲ. ಸುಪ್ರೀಂಕೋರ್ಟ್​ ಜಾಮೀನು ನೀಡುವಾಗ ಈ ಷರತ್ತು ವಿಧಿಸಿದೆ. ಪ್ರಕರಣದ ಮತ್ತೋರ್ವ ಆರೋಪ ಚಂದ್ರಶೇಖರ ಇಂಡಿಗೂ ಜಾಮೀನು ಸಿಕ್ಕಿದೆ.

ಯೋಗೇಶ್​ಗೌಡ ಹತ್ಯೆ ಪ್ರಕರಣದ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ನ.5ರಂದು ಒಂದು ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ಕೋರ್ಟ್​, ನ.6ರಂದು ಮತ್ತೆ ಮೂರು ದಿನಗಳಿಗೆ ಅವಧಿ ವಿಸ್ತರಿಸಿತ್ತು. ನ.9ರಂದು ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳಿಗೆ ವಿಸ್ತರಿಸಲಾಯಿತು. ನಂತರದ ದಿನಗಳಲ್ಲಿ ಸುಮಾರು ಒಂಬತ್ತು ತಿಂಗಳಿನಿಂದ ವಿನಯ್ ಕುಲಕರ್ಣಿ ಜೈಲಿನಲ್ಲಿಯೇ ಇದ್ದಾರೆ. ಇದೀಗ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಿಂದಲೂ ವಿನಯ್ ಕುಲಕರ್ಣಿಗೆ ಜಾಮೀನು ದೊರೆತಿದ್ದು, ಷರತ್ತುಬದ್ಧ ಬಿಡುಗಡೆಗೆ ಹಾದಿ ಮುಕ್ತವಾಗಿದೆ.

(Former Minister Vinay Kulkarni Got Bail in Yogesh Gowda Murder Case)

ಇದನ್ನೂ ಓದಿ: ‘ಅಫ್ಘಾನ್​​ನಲ್ಲಿ ಭಾರತದ ಹೂಡಿಕೆ ಮುಂದುವರಿಯಲಿದೆಯಾ’-ಅಮೆರಿಕ ಮಾಧ್ಯಮಗಳ ಈ ಪ್ರಶ್ನೆಗೆ ಎಸ್​.ಜೈಶಂಕರ್​ ಕೊಟ್ಟ ಚುಟುಕು ಉತ್ತರ ಹೀಗಿದೆ

ಇದನ್ನೂ ಓದಿ: ತಾಲಿಬಾನಿಗಳ ವಿರುದ್ಧ ಶಸ್ತ್ರ ಹಿಡಿದಿದ್ದ ಅಫ್ಘಾನಿಸ್ತಾನದ ಮಹಿಳಾ ಗವರ್ನರ್ ಬಂಧನ

Published On - 4:24 pm, Thu, 19 August 21