ಬೆಂಗಳೂರಿನಲ್ಲಿ ಹಾಡಹಗಲೇ ಜ್ಯೋತಿಷಿ ಮನೆಗೆ ನುಗ್ಗಿ ದರೋಡೆ! ಮನೆಯಲ್ಲಿದ್ದ ಚಿನ್ನಾಭರಣ, 5 ಲಕ್ಷ ಹಣ ದೋಚಿ ಪರಾರಿ

| Updated By: sandhya thejappa

Updated on: Jul 10, 2022 | 12:12 PM

ಜ್ಯೋತಿಷ್ಯ ಕೇಳುವ ನೆಪದಲ್ಲಿ ನಾಲ್ವರ ಗುಂಪೊಂದು ನಿನ್ನೆ ಮನೆಗೆ ಬಂದಿತ್ತು. ಈ ವೇಳೆ ಜ್ಯೋತಿಷಿ ಪ್ರಮೋದ್ ಮೇಲೆ ಮಾರಣಾಂತಿಕ ಹಲ್ಲೆಗೈದು ದರೋಡೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಹಾಡಹಗಲೇ ಜ್ಯೋತಿಷಿ ಮನೆಗೆ ನುಗ್ಗಿ ದರೋಡೆ! ಮನೆಯಲ್ಲಿದ್ದ ಚಿನ್ನಾಭರಣ, 5 ಲಕ್ಷ ಹಣ ದೋಚಿ ಪರಾರಿ
ಜ್ಯೋತಿಷಿ ಪ್ರಮೋದ್, ನಾಲ್ವರು ದುಷ್ಕರ್ಮಿಗಳ ಚಲನವಲನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.
Follow us on

ಬೆಂಗಳೂರು: ಹಾಡಹಗಲೇ ಜ್ಯೋತಿಷಿ (Astrologer) ಮನೆಗೆ ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ (Jewellery) ಹಾಗೂ 5 ಲಕ್ಷ ಹಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಕೆಂಗೇರಿ ರೈಲ್ವೆ ನಿಲ್ದಾಣದ ಸಮೀಪದಲ್ಲಿ ನಡೆದಿದೆ. ಜ್ಯೋತಿಷ್ಯ ಕೇಳುವ ನೆಪದಲ್ಲಿ ನಾಲ್ವರ ಗುಂಪೊಂದು ನಿನ್ನೆ ಮನೆಗೆ ಬಂದಿತ್ತು. ಈ ವೇಳೆ ಜ್ಯೋತಿಷಿ ಪ್ರಮೋದ್ ಮೇಲೆ ಮಾರಣಾಂತಿಕ ಹಲ್ಲೆಗೈದು ದರೋಡೆ ಮಾಡಿದ್ದಾರೆ. ನಾಲ್ವರು ದುಷ್ಕರ್ಮಿಗಳ ಚಲನವಲನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಲಿಗೆಕೋರರ ಬಂಧನ:
ಯಲಹಂಕ ನ್ಯೂಟೌನ್ ಪೊಲೀಸರು ನಗರದಲ್ಲಿ ಇಬ್ಬರು ಸುಲಿಗೆಕೋರರನ್ನ ಬಂಧಿಸಿದ್ದಾರೆ. ಸೂರಿ, ಮಧು ಬಂಧಿತರು. ಆರೋಪಿಗಳು ಬೆಂಗಳೂರಿನ ಯಲಹಂಕ ಉಪನಗರದಲ್ಲಿ ಜುಲೈ 6ರಂದು ಲಾರಿ ಚಾಲಕನ ಮೇಲೆ ಹಲ್ಲೆಗೈದು ಸುಮಾರು 18,000 ರೂ. ಸುಲಿಗೆ ಮಾಡಿದ್ದರು. ಈ ಬಗ್ಗೆ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Petrol Price Today: ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ

ಇದನ್ನೂ ಓದಿ
Rajnath Singh Birthday Special: ಇಂದು ರಕ್ಷಣಾ ಸಚಿವ ರಾಜನಾಥ್ ಹುಟ್ಟುಹಬ್ಬ; 10 ಕುತೂಹಲಕರ ಮಾಹಿತಿ ಇಲ್ಲಿದೆ
ಮಳೆಗಾಲದಲ್ಲಿ ಮದುವೆಯಾಗ್ತಿರೋ ಹೆಣ್ಣುಮಕ್ಕಳಿಗೆ ಕಾಂತಿಯುತ ತ್ವಚೆ ಪಡೆಯಲು ಇಲ್ಲಿವೆ ಟಿಪ್ಸ್
IOCL Recruitment 2022: ಐಒಸಿಎಲ್​ ನೇಮಕಾತಿ: ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ
Priya Anand: ಮಾದಕ ನೋಟದಿಂದ ಗಮನ ಸೆಳೆದ ನಟಿ ಪ್ರಿಯಾ ಆನಂದ್

ಎಎಸ್ಐ ಮನೆಯಲ್ಲಿ ಕಳ್ಳತನ:
ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಅಕ್ಕಚಕ್ಕಮ್ಮ ಕಲ್ಯಾಣ ಮಂಟಪದ ಹಿಂಭಾಗದ ನಿವೃತ್ತ ಎಎಸ್ಐ  ಮನೆಯಲ್ಲಿ ಕಳ್ಳತನ ನಡೆದಿದೆ. ಕೆಂಪು ಬಣ್ಣದ ಕಾರ್‌ನಲ್ಲಿ ಬಂದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ನಿವೃತ್ತ ಮುಖ್ಯ ಪೇದೆ ಮಲ್ಲಿಕಾರ್ಜುನಯ್ಯ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ ಟೆರೇಸ್ ಮೇಲೆ ಬಟ್ಟೆ ಒಣಗಿ ಹಾಕಲು ಮಹಿಳೆ ತೆರಳಿದ್ದರು. ಮನೆಯಲ್ಲಿದ್ದ ಮಗುವಿನ ಕೈಗೆ ಮೊಬೈಲ್ ಕೊಟ್ಟು ಬೀರುವಿನಲ್ಲಿದ್ದ 30 ಸಾವಿರ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಈ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಳ್ಳನೆಂದು ತಿಳಿದು ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿದ ಸೆಕ್ಯುರಿಟಿ ಗಾರ್ಡ್!

Published On - 9:14 am, Sun, 10 July 22