ಬೆಂಗಳೂರಿನಲ್ಲಿ ಕಳ್ಳನೆಂದು ತಿಳಿದು ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿದ ಸೆಕ್ಯುರಿಟಿ ಗಾರ್ಡ್!

ತಲೆಗೆ ಗಂಭೀರ ಪೆಟ್ಟು ಬಿದ್ದ ಹಿನ್ನೆಲೆ ವ್ಯಕ್ತಿ ಮೃತಪಟ್ಟಿದ್ದಾನೆ. ಸೆಕ್ಯುರಿಟಿ ಗಾರ್ಡ್ ಶ್ಯಾಮನಾಥ್ ರೀ ಎಂಬಾತನಿಂದ ಈ ಕೃತ್ಯ ನಡೆದಿದೆ. ಪೊಲೀಸರ ತನಿಖೆಯಲ್ಲಿ ಕೊಲೆಯಾದ ವ್ಯಕ್ತಿಯ ಅಸಲಿ ಸತ್ಯ ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಕಳ್ಳನೆಂದು ತಿಳಿದು ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿದ ಸೆಕ್ಯುರಿಟಿ ಗಾರ್ಡ್!
ಸೆಕ್ಯುರಿಟಿ ಗಾರ್ಡ್ ಶ್ಯಾಮನಾಥ್ ರೀ
TV9kannada Web Team

| Edited By: sandhya thejappa

Jul 10, 2022 | 8:47 AM

ಬೆಂಗಳೂರು: ಕಳ್ಳನೆಂದು ತಿಳಿದು ಸೆಕ್ಯುರಿಟಿ ಗಾರ್ಡ್ (Security Guard) ವ್ಯಕ್ತಿಯೊಬ್ಬನ ಕೊಲೆ ಮಾಡಿರುವ ಘಟನೆ ನಗರದ ಎಚ್ಎಎಲ್​ನಲ್ಲಿ ಸಂಭವಿಸಿದೆ. ಇದೇ ತಿಂಗಳು 5 ರಂದು ಮಾರತಳ್ಳಿ ಸಮೀಪದ ವನ್ಶಿ ಸಿಟಾಡೆಲ್ ಅಪಾರ್ಟ್​ಮೆಂಟ್ ಅಪರಿಚಿತ ವ್ಯಕ್ತಿ ಬಂದಿದ್ದ. ರಾತ್ರಿ ಎರಡು ಗಂಟೆ ಸುಮಾರಿಗೆ 30 ವರ್ಷದ ವ್ಯಕ್ತಿ ಆಗಮಿಸಿದ್ದ. ಈ ವೇಳೆ ಅಪಾರ್ಟ್​ಮೆಂಟ್ ಒಳಗೆ ಬರುತ್ತಿರುವುದನ್ನ ಗಮನಿಸಿದ ಸೆಕ್ಯುರಿಟಿ ಗಾರ್ಡ್, ಅತನನ್ನ ಪ್ರಶ್ನೆ ಮಾಡಲು ಮುಂದಾಗಿದ್ದ. ಯಾರು ನೀನು? ಏಕೆ ಬಂದಿದ್ದೀಯಾ? ಎಂದು ಕೇಳಿದ್ದಾನೆ. ಸೆಕ್ಯುರಿಟಿ ಗಾರ್ಡ್ ಎಷ್ಟೇ ಕೇಳಿದರು ಬಾಯಿಬಿಡದ ಅಪರಿಚಿತ ವ್ಯಕ್ತಿ ಮನೆಗೆ ನುಗ್ಗಲು ಯತ್ನಿಸಿದ್ದ. ಕೊನೆಗೆ ಕಳ್ಳನೆಂದು ಭಾವಿಸಿ ಸೆಕ್ಯುರಿಟಿ ಗಾರ್ಡ್ ಅಲ್ಲೇ ಇದ್ದ ರಾಡ್ನಿಂದ ಆತನ ತಲೆಗೆ ಹೊಡೆದಿದ್ದಾನೆ.

ತಲೆಗೆ ಗಂಭೀರ ಪೆಟ್ಟು ಬಿದ್ದ ಹಿನ್ನೆಲೆ ವ್ಯಕ್ತಿ ಮೃತಪಟ್ಟಿದ್ದಾನೆ. ಸೆಕ್ಯುರಿಟಿ ಗಾರ್ಡ್ ಶ್ಯಾಮನಾಥ್ ರೀ ಎಂಬಾತನಿಂದ ಈ ಕೃತ್ಯ ನಡೆದಿದೆ. ಪೊಲೀಸರ ತನಿಖೆಯಲ್ಲಿ ಕೊಲೆಯಾದ ವ್ಯಕ್ತಿಯ ಅಸಲಿ ಸತ್ಯ ತಿಳಿದುಬಂದಿದೆ.

ಕೊಲೆಯಾದ ವ್ಯಕ್ತಿ ಬ್ಯಾಂಕ್ ಉದ್ಯೋಗಿ. ಈತ ಛತ್ತಿಸ್​ಗಡ್ ಮೂಲದವನು. ಟ್ರೈನಿಂಗ್ ಸಲುವಾಗಿ ಬೆಂಗಳೂರಿಗೆ ಬಂದಿದ್ದ. ಇದೇ 5 ರಂದು ರಾತ್ರಿ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದ. ಬಳಿಕ ಒಬ್ಬನೇ ನಡೆದುಕೊಂಡು ಸ್ನೇಹಿತನ ಮನೆಗೆ ಹೊರಟಿದ್ದ. ಮೊಬೈಲ್ನಲ್ಲಿ ಅಡ್ರೆಸ್ ಕೇಳುತ್ತಾ ಹೊರಟಿದ್ದ. ಇದ್ದಕ್ಕಿದ್ದಂತೆ ಮೊಬೈಲ್ ಸ್ವಿಚ್ ಆಫ್ ಆಗಿ ಗೊಂದಲ ಶುರುವಾಗಿತ್ತು. ಬಳಿಕ ರಸ್ತೆ ಬದಿ ಸಿಕ್ಕ ಮತ್ತೊಂದು ಅಪಾರ್ಟ್ಮೆಂಟ್ ಒಳಗೆ ಹೋಗಿದ್ದ.

ಇದನ್ನೂ ಓದಿ: Karnataka Rain: ಇಂದಿನಿಂದ ಎರಡು ದಿನ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ, ರೆಡ್ ಅಲರ್ಟ್ ಘೋಷಣೆ

ಇದನ್ನೂ ಓದಿ

ಕಳ್ಳತನ ನಡೆದರೆ ತನ್ನ ಕೆಲಸ ಹೋಗುತ್ತದೆ ಎಂದು ಸೆಕ್ಯುರಿಟಿ ಗಾರ್ಡ್ ದಿಕ್ಕೇ ತೋಚದೆ ರಾಡನ್ನಿಂದ ಹೊಡೆದಿದ್ದಾನೆ. ತಲೆಗೆ ಗಂಭೀರ ಪೆಟ್ಟು ಬಿದ್ದರಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಸದ್ಯ ಈ ಬಗ್ಗೆ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೊಲೆ ಮಾಡಿದ ಸೆಕ್ಯುರಿಟಿ ಶ್ಯಾಮನಾಥ್ ರೀ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada