Karnataka Earthquake: ಮಳೆ, ಭೂ ಕುಸಿತದ ನಡುವೆ ಕೊಡಗು ಜಿಲ್ಲೆಯಲ್ಲಿ ಮತ್ತೆ ಹಲವೆಡೆ ಕಂಪಿಸಿದ ಭೂಮಿ
ಜಿಲ್ಲೆಯಲ್ಲಿ ನಿರಂತರವಾಗಿ ಭೂಕಂಪನ ಆಗುತ್ತಿದ್ದು, ಜನರಿಗೆ ಆತಂಕ ಹೆಚ್ಚಾಗುತ್ತಿದೆ. ಭೂಕಂಪನದ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಅಧಿಕಾರಿಗಳು ನಿಖರ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕೊಡಗು: ಮಳೆ, ಭೂ ಕುಸಿತದ ನಡುವೆ ಜಿಲ್ಲೆಯಲ್ಲಿ 10ನೇ ಭಾರೀ ಭೂಮಿ ಕಂಪಿಸಿದೆ. (Earthquake) ಮಡಿಕೇರಿ ತಾಲೂಕಿನ ಚೆಂಬು, ಸಂಪಾಜೆ, ಕರಿಕೆ, ಗೂನಡ್ಕ ಭಾಗದಲ್ಲಿ ಇಂದು ಬೆಳಗ್ಗೆ 6.24ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಕಳೆದ ಒಂದು ವಾರದಲ್ಲಿ 6 ಭಾರೀ ಭೂಮಿ ಕಂಪಿಸಿತ್ತು. ಜಿಲ್ಲೆಯಲ್ಲಿ ನಿರಂತರವಾಗಿ ಭೂಕಂಪನ ಆಗುತ್ತಿದ್ದು, ಜನರಿಗೆ ಆತಂಕ ಹೆಚ್ಚಾಗುತ್ತಿದೆ. ಭೂಕಂಪನದ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಅಧಿಕಾರಿಗಳು ನಿಖರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನೂ ಕೊಡಗಿನಾದ್ಯಂತ ಧಾರಕಾರ ಮಳೆ ಸುರಿಯುತ್ತಿದೆ. ಅದೇ ರೀತಿಯಾಗಿ ಮಡಿಕೇರಿ ತಾಲೂಕಿನ ಕೊಯನಾಡು ಬಳಿ ಪಯಸ್ವಿನಿ ನದಿಗೆ ಕಟ್ಟಲಾಗಿರುವ ಕಿಂಡಿ ಅಣೆಕಟ್ಟಿನ ತಡೆಗೋಡೆಗೆ ಹಾನಿಯಾಗಿದ್ದು, ತಡೆಗೋಡೆ ಕುಸಿದು ಬೀಳುವ ಆತಂಕ ಶುರುವಾಗಿದೆ. ಉಡುಪಿಯಲ್ಲಿ ಇಂದು ಭಾರಿ ಮಳೆಯಾಗುವ ಎಚ್ಚರಿಕೆಯಿದ್ದು, ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜೊತೆಗೆ ಜಿಲ್ಲಾಡಳಿತ ಈಗಾಗಲೇ ಶಾಲಾ-ಕಾಲೇಜಿಗೆ ರಜೆ ನೀಡಿದೆ. ಜಿಲ್ಲೆಯಲ್ಲಿ ಕಳೆದ 1 ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.
ಇದನ್ನೂ ಓದಿ: ಕೊಡಗಿನಲ್ಲಿ ಇಂದೂ ಕೂಡಾ ಶಾಲಾ -ಕಾಲೇಜುಗಳಿಗೆ ರಜೆ; ಉಡುಪಿಯಲ್ಲಿ ಭಾರಿ ಮಳೆಯ ಎಚ್ಚರಿಕೆ
ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು, ರಸ್ತೆ ಸಂಪರ್ಕ ಕಡಿತ:
ಜಿಲ್ಲೆಯಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ಅಪಾಯ ಮಟ್ಟ ಮೀರಿ ನದಿ, ಹಳ್ಳ, ಕೊಳ್ಳಗಳು ಹರಿಯುತ್ತಿವೆ. ಭಾಗಮಂಡಲ-ನಾಪೋಕ್ಲು ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ಬೇತ್ರಿ ಬಳಿ ಸೇತುವೆ ಮಟ್ಟದಲ್ಲಿ ಕಾವೇರಿ ನಿದಿ ಹರಿಯುತ್ತಿದ್ದು, ವಿರಾಜಪೇಟೆ ತಾಲ್ಲೂಕಿನ ಕೊಟ್ಟಮುಡಿ, ಚೆರಿಯ ಪರಂಬುವಿನಲ್ಲಿ ಪ್ರವಾಹಾತಂಕ ಉಂಟಾಗಿದೆ. ಜೋಡುಪಾಲ ಬಳಿ ರಾಷ್ಟ್ರೀಯ ಹೆದ್ದಾರಿಗೆ ಮರ ಉರುಳಿ ಬಿದಿದ್ದು, ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.