ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ: ಆರೋಪಿಗಳಾದ ಮಹಾಂತೇಶ, ಮಂಜುನಾಥ ಮನೆಯಲ್ಲಿ ಪೊಲೀಸ್ ಶೋಧ

ಜುಲೈ 5 ರಂದು ಚಂದ್ರಶೇಖರ ಗುರೂಜಿ ಹತ್ಯೆಯಾಗಿತ್ತು. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಹಂತಕರು. ಕೊಲೆಗಡುಕರ ಮಹಾ ಸಂಚಿನ ಗುಟ್ಟಿಗೆ ತನಿಖಾಧಿಕಾರಿಗಳೇ ಸುಸ್ತಾಗಿದ್ದಾರೆ.

ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ: ಆರೋಪಿಗಳಾದ ಮಹಾಂತೇಶ, ಮಂಜುನಾಥ ಮನೆಯಲ್ಲಿ ಪೊಲೀಸ್ ಶೋಧ
ಬಂಧಿತ ಆರೋಪಿಗಳು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 09, 2022 | 3:00 PM

ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಕೊಲೆ (Chandrashekhar Guruji) ಪ್ರಕರಣ ಹಿನ್ನೆಲೆ ಆರೋಪಿಗಳಾದ ಮಹಾಂತೇಶ, ಮಂಜುನಾಥ ಮನೆಯಲ್ಲಿ ಪೊಲೀಸರು ಶೋಧ ಮಾಡಿದ್ದು, ಪೊಲೀಸರ ಪ್ರಶ್ನೆಗಳ ಸುರಿಮಳೆಗೆ ಇಬ್ಬರು ಆರೋಪಿಗಳು ಸುಸ್ತಾಗಿದ್ದಾರೆ. ಆರೋಪಿಗಳಿಗೆ ಮ್ಯಾರಥಾನ್ ಗ್ರಿಲ್​ ಮಾಡುತ್ತಿರುವ ಪೊಲೀಸರು, ವಿಚಾರಣೆ ವೇಳೆ ಉದ್ಯೋಗದ ಬಗ್ಗೆ ಇಬ್ಬರು ಹಂತಕರು ಬಾಯ್ಬಿಟ್ಟಿದ್ದಾರೆ. ಗುರೂಜಿ ಸ್ವಭಾವ, ವ್ಯಕ್ತಿತ್ವ, ದೌರ್ಬಲ್ಯಗಳನ್ನು ಸೂಕ್ತವಾಗಿ ಗ್ರಹಿಸಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಅತ್ಯಾಪ್ತನಾಗಿದ್ದ ಮಂಜುನಾಥ, ಧಾರವಾಡ ತಾಲೂಕಿನ ದೇವಗಿರಿ ಗ್ರಾಮದ ನಿವಾಸಿ. ಮುಗ್ಧತೆಯ ನಾಟಕವಾಡಿ ಆರ್ಥಿಕ ಸಹಾಯ ಪಡೆದಿದ್ದ. ಗುರೂಜಿ ಅಪಾರ್ಟ್‌ಮೆಂಟ್‌ನಲ್ಲಿ ಮಹಾಂತೇಶ ಶಿರೂರ ನೆಲೆಸಿದ್ದ. ಕೋರ್ಟ್​ ಅನುಮತಿ ಮೇರೆಗೆ ಮನೆಯಲ್ಲಿ ದಾಖಲೆ ಪರಿಶೀಲನೆ ಮಾಡಿದ್ದು, ಮನೆಯಲ್ಲಿ ಅಗತ್ಯ ದಾಖಲೆಗಳು ಪೊಲೀಸರಿಗೆ ಲಭ್ಯವಾಗುತ್ತಿಲ್ಲ. ಹೀಗಾಗಿ ಮತ್ತೆ ಹಂತಕರ ವಿಚಾರಣೆಯನ್ನ ಖಾಕಿ ಪಡೆ ಮುಂದುವರಿಸಿದೆ.

ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ ಪ್ರಕರಣ: ಹಂತಕರಿಗೆ ಕನಿಷ್ಟ ಜೀವಾವಧಿ ಶಿಕ್ಷೆ ಪಕ್ಕಾ, ಗಲ್ಲು ಶಿಕ್ಷೆಗೆ ಛಾನ್ಸ್​ ಇಲ್ಲವಾ?

ಕೊಲೆಗಡುಕರ ಮಹಾ ಸಂಚಿನ ಗುಟ್ಟಿಗೆ ತನಿಖಾಧಿಕಾರಿಗಳೇ ಸುಸ್ತಾಗಿದ್ದು, ಖಾಕಿ ಹಂತಕರಿಗೆ ಮ್ಯಾರಥಾನ್ ಡ್ರಿಲ್ ಮಾಡುತ್ತಿದ್ದಾರೆ. ಜುಲೈ 5 ರಂದು ಚಂದ್ರಶೇಖರ ಗುರೂಜಿ ಹತ್ಯೆಯಾಗಿತ್ತು. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಹಂತಕರು. ಗ್ರಾಮೀಣ ಪ್ರದೇಶದ ಆರ್ಥಿಕ ಹಿಂದುಳಿದ ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು. ಅದರಲ್ಲೂ ಉತ್ತರ ಕರ್ನಾಟಕದ, ಗ್ರಾಮೀಣ ಜನರಿಗೆ ಸರಳ ವಾಸ್ತು ಸಂಸ್ಥೆಯಲ್ಲಿ ಉದ್ಯೋಗ ನೀಡಬೇಕು. ಈ ಮಹದಾಸೆ ಒಳಗಣ್ಣಿಗೆ ಬಿದ್ದವರೇ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಧುಮವಾಡ ಗ್ರಾಮದ ಮಹಾಂತೇಶ ಶಿರೂರು, ಧಾರವಾಡ ತಾಲೂಕಿನ ದೇವಗಿರಿ ಗ್ರಾಮದ ಮಂಜುನಾಥ ಮರೇವಾಡ.

ಇದನ್ನೂ ಓದಿ: ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಕೊಲೆ: ಆತಂಕ ದೂರ ಮಾಡಲು ದೈವದ ಮೊರೆಹೋದ ಹೊಟೇಲ್ ಆಡಳಿತ ಮಂಡಳಿ

ಚಂದ್ರಶೇಖರ ಗುರೂಜಿ ಅವರ ಸ್ವಭಾವ, ವ್ಯಕ್ತಿತ್ವ, ದೌರ್ಬಲ್ಯಗಳನ್ನೆಲ್ಲ ಸೂಕ್ತವಾಗಿ ಗ್ರಹಿಸಿ, ಅತ್ಯಂತ ಕಡಿಮೆ ಅವಧಿಯಲ್ಲಿಯೇ ಗುರೂಜಿಗೆ ಮಂಜುನಾಥ ಅತ್ಯಾಪ್ತನಾಗಿದ್ದ. ಬಡತನದಿಂದ ಕುಟುಂಬಕ್ಕೆ ನಾನೇ ಆಧಾರ ಸ್ತಂಭ, ನಿಮ್ಮನೇ ನಂಬಿದ್ದೇನೆ ಎಂಬಿತ್ಯಾದಿ ನಾಟಕೀಯ ಮಾತುಗಳ ಮೂಲಕ ಗುರೂಜಿ ಮನಗೆದ್ದಿದ್ದ. ಗುರೂಜಿ ಹುಬ್ಬಳಿಗೆ ಬಂದಾಗ ತನ್ನೂರು ಧುಮ್ಮವಾಡಕ್ಕೆ ಕರೆದೊಯ್ದು ಕುಟುಂಬದ ಆರ್ಥಿಕ ಸ್ಥಿತಿ-ಗತಿಗಳನ್ನು ಹಂತಕ ವಿವರಿಸಿದ್ದ. ಮುಗ್ಧತೆಯ ನಾಟಕವಾಡಿ, ಆರ್ಥಿಕ ಸಹಾಯ ಪಡೆದಿದ್ದ. ಮಹಾಂತೇಶ ಶಿರೂರನ ಸಂಚಿನ ಮರ್ಮ ಅರಿಯದ ಗುರೂಜಿ, ಮಹಾಂತೇಶನನ್ನು ನಂಬಿದ್ದರು.