Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ ಪ್ರಕರಣ: ಹಂತಕರಿಗೆ ಕನಿಷ್ಟ ಜೀವಾವಧಿ ಶಿಕ್ಷೆ ಪಕ್ಕಾ, ಗಲ್ಲು ಶಿಕ್ಷೆಗೆ ಛಾನ್ಸ್​ ಇಲ್ಲವಾ?

ಕೊಲೆಯ ಉದ್ದೇಶ ಸಾಬೀತುಪಡಿಸಲು ಪೊಲೀಸರು ಈ ಸಾಕ್ಷ್ಯಾಧಾರಗಳ ಬೆನ್ನುಹತ್ತುವುದು ಅತ್ಯಗತ್ಯವಿದೆ. ಏನೇ ಆಗಲಿ, ಸಾಕ್ಷ್ಯ ಅಧಿನಿಯಮದ ಪ್ರಕಾರ ಸಿಸಿಟಿವಿ ದೃಶ್ಯ ಸಂಗ್ರಹಿಸಿಡಬೇಕು. ಈ ದೃಶ್ಯ ಆರೋಪಿಗಳ ಕುಕೃತ್ಯಕ್ಕೆ‌ ಅತ್ಯಮೂಲ್ಯ ಸಾಕ್ಷ್ಯವಾಗಲಿದೆ.

ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ ಪ್ರಕರಣ: ಹಂತಕರಿಗೆ ಕನಿಷ್ಟ ಜೀವಾವಧಿ ಶಿಕ್ಷೆ ಪಕ್ಕಾ, ಗಲ್ಲು ಶಿಕ್ಷೆಗೆ ಛಾನ್ಸ್​ ಇಲ್ಲವಾ?
ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ ಪ್ರಕರಣ: ಹಂತಕರಿಗೆ ಕನಿಷ್ಟ ಜೀವಾವಧಿ ಶಿಕ್ಷೆ ಪಕ್ಕಾ, ಗಲ್ಲು ಶಿಕ್ಷೆಗೆ ಛಾನ್ಸ್​ ಇಲ್ಲವಾ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 06, 2022 | 9:17 PM

ಬೆಂಗಳೂರು:ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ (Chandrashekhar Guruji murder) ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಆರೋಪಿಗಳು ನಾಲ್ಕೇ ಗಂಟೆಯಲ್ಲಿ ಪೊಲೀಸರಿಗೆ ಶರಣಾಗಿದ್ದರು. ಇಡೀ ರಾಜ್ಯವಲ್ಲದೆ ಉತ್ತರ ಭಾರತದ ಕೆಲ ರಾಜ್ಯಗಳಿಗೂ ಚಂದ್ರಶೇಖರ ಗುರೂಜಿಯ ವಾಸ್ತು ಸಲಹೆ ವಿಸ್ತರಿಸಿದ್ದರಿಂದ ಆ ಭಾಗಗಳ ಜನ ಗುರೂಜಿ ಭೀಕರ ಕೊಲೆಗೆ ಮಮ್ಮಲ ಮರುಗಿದ್ದರು. ಅದೇ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ, ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಬಯಸಿದ್ದರು. ಇನ್ನು ಕಾನೂನು ಚೌಕಟ್ಟಿನಲ್ಲಿ ಪ್ರಕರಣವನ್ನು ನೋಡುವುದಾದರೆ ಆರೋಪಿಗಳಿಗೆ ಕನಿಷ್ಟವೆಂದರೂ ಜೀವಾವಧಿ ಶಿಕ್ಷೆ ಪಕ್ಕಾ (life imprisonment) ಎನ್ನುತ್ತಾರೆ ಕಾನೂನು ತಜ್ಞರು.

ಅಪರೂಪದಲ್ಲಿ ಅಪರೂಪದ ಪ್ರಕರಣವೆಂದು ಪರಿಗಣಿಸಿದರೆ ಮಾತ್ರ ಇಬ್ಬರು ಹಂತಕರಿಗೆ ಗಲ್ಲು ಶಿಕ್ಷೆಯಾಗಬಹುದು (death sentence). ಆರೋಪಿಗಳ ವಿರುದ್ಧ ಸಿಸಿಟಿವಿ ದೃಶ್ಯಾವಳಿ ಪ್ರಮುಖ ಸಾಕ್ಷಿಯಾಗಲಿದೆ. ಹೋಟೆಲ್ ನಲ್ಲಿ ಹತ್ಯೆ ಕುಕೃತ್ಯವನ್ನು ಕಣ್ಣಾರೆ ಕಂಡಿರುವ ಪ್ರತ್ಯಕ್ಷದರ್ಶಿಗಳೂ ಇದ್ದಾರೆ. ಸಿಸಿ ಟಿವಿ ಯಲ್ಲಿ ಕಾಣಿಸಿದ ಸಿಬ್ಬಂದಿಗಳೂ ಸಾಕ್ಷಿಯಾಗಬಹುದಾಗಿದೆ.

ಮೋಟೀವ್ ಕಂಡುಹಿಡಿಯುವುದು ಮುಖ್ಯ:

ಹುಬ್ಬಳ್ಳಿ ಪೊಲೀಸರು ಕೊಲೆಗಡುಕರನ್ನು ಸೆರೆಹಿಡಿದಿಟ್ಟುಕೊಂಡಿದ್ದಾರಾದರೂ, ಗುರೂಜಿ ಕೊಲೆಯ ಹಿಂದಿನ ಉದ್ದೇಶವಾದರೂ ಏನು ಎಂಬುದನ್ನು ನಿಖರವಾಗಿ ಗುರುತಿಸಬೇಕಾಗಿದೆ. ಇದೇ ಸದ್ಯದ ಚಾಲೆಂಜ್. ಮೂಲಗಳ ಪ್ರಕಾರ ಆಸ್ತಿ ಜಗಳವೇ ಗುರೂಜಿ ಪ್ರಾಣಕ್ಕೆ ಎರವಾಯಿತು ಎನ್ನಲಾಗಿದೆ. ಈ ನಿಟ್ಟಿನಲ್ಲೂ ಪೊಲೀಸರ ತನಿಖೆ ಮುಂದುವರಿದಿದೆ.

ಆದರೂ ಕೊಲೆಯಂತಹ ಪರಾಕಾಷ್ಠ ಕೃತ್ಯಕ್ಕೆ ಆರೋಪಿಗಳಿಬ್ಬರೂ ಕೈಹಾಕಿದ್ದು ಏಕೆ? ಕೊಲೆಗೆ ಬೇರೆಯವರ ಪ್ರಚೋದನೆ, ಒಳಸಂಚು ಏನಾದರೂ ಇದೆಯೇ? ಆರೋಪಿಗಳು ಕೊಲೆಗೆ ಹೇಗೆ ಸಿದ್ದತೆ ಮಾಡಿಕೊಂಡಿದ್ದರು? ಈ ಎಲ್ಲದರ ಬಗ್ಗೆ ಸಾಕ್ಷ್ಯಾಧಾರ ಕಲೆಹಾಕಬೇಕಿದೆ. ಕೊಲೆಯ ಉದ್ದೇಶ ಸಾಬೀತುಪಡಿಸಲು ಪೊಲೀಸರು ಈ ಸಾಕ್ಷ್ಯಾಧಾರಗಳ ಬೆನ್ನುಹತ್ತುವುದು ಅತ್ಯಗತ್ಯವಿದೆ. ಏನೇ ಆಗಲಿ, ಸಾಕ್ಷ್ಯ ಅಧಿನಿಯಮದ ಪ್ರಕಾರ ಸಿಸಿಟಿವಿ ದೃಶ್ಯ ಸಂಗ್ರಹಿಸಿಡಬೇಕು. ಈ ದೃಶ್ಯ ಆರೋಪಿಗಳ ಕುಕೃತ್ಯಕ್ಕೆ‌ ಅತ್ಯಮೂಲ್ಯ ಸಾಕ್ಷ್ಯವಾಗಲಿದೆ. ಅದರಿಂದ ಆರೋಪಿಗಳಿಬ್ಬರಿಗೂ ಜೀವಾವಧಿ ಶಿಕ್ಷೆ ಪಕ್ಕಾ ಎನ್ನಬಹುದು. ಇನ್ನು, ಕೃತ್ಯದ ಭೀಕರತೆ, ಹಂತಕರ ಧಾಡಸಿತನ ಪರಿಗಣಿಸಿದರೆ ಆರೋಪಿಗಳಿಗೆ ಗಲ್ಲು ಶಿಕ್ಷೆಗೂ ಛಾನ್ಸ್​ ಇದೆ.

‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ