ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ; ಕೊಲೆಗೆ ಕಾರಣ ತಿಳಿಸಿದ ಆರೋಪಿಗಳು
ಅರೋಪಿಗಳು ಗುರೂಜಿ ಬಳಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. 2 ವರ್ಷಗಳಿಂದ ಅರೋಪಿಗಳು ಹಾಗೂ ಗುರೂಜಿ ನಡುವೆ ವೈಮನಸ್ಸು ಶುರುವಾಗಿದೆ. ಕೆಲಸ ಮಾಡುತ್ತಿದ್ದ ಸಮಯದಲ್ಲಿ ಸಾಕಷ್ಟು ಆತ್ಮೀಯವಾಗಿದ್ದರು.
ಬೆಂಗಳೂರು: ಹುಬ್ಬಳ್ಳಿ ನಗರದ ಖಾಸಗಿ ಹೋಟೆಲ್ನಲ್ಲಿ ಜುಲೈ 5ರಂದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ (Chandrashekhar Guruji) ಕೊಲೆ (Murder) ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಹಂತಕರು ಹತ್ಯೆಗೆ ಕಾರಣ ತಿಳಿಸಿದ್ದಾರೆ. ಹಲವು ವರ್ಷಗಳಿಂದ ಗುರೂಜಿ ಜೊತೆ ಕೆಲಸ ಮಾಡುತ್ತಿದ್ದ ಮಹಾಂತೇಶ್ ಮತ್ತು ಮಂಜುನಾಥ್ ಹಣಕಾಸು, ಆಸ್ತಿ ವಿಚಾರಕ್ಕೆ ಹತ್ಯೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ. ಇನ್ನು ಸಾಕ್ಷಿಗಳು, ಆರೋಪಿಗಳ ಹೇಳಿಕೆಯಿಂದ ಈ ಕಾರಣ ದೃಢವಾಗಿದೆ.
ಅರೋಪಿಗಳು ಗುರೂಜಿ ಬಳಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. 2 ವರ್ಷಗಳಿಂದ ಅರೋಪಿಗಳು ಹಾಗೂ ಗುರೂಜಿ ನಡುವೆ ವೈಮನಸ್ಸು ಶುರುವಾಗಿದೆ. ಕೆಲಸ ಮಾಡುತ್ತಿದ್ದ ಸಮಯದಲ್ಲಿ ಸಾಕಷ್ಟು ಆತ್ಮೀಯವಾಗಿದ್ದರು. ಗುರೂಜಿಯ ಬಲ ಹಾಗೂ ಬಲಹೀನತೆಯ ಬಗ್ಗೆಯೂ ತಿಳಿದುಕೊಂಡಿದ್ದರು.
ಅಲ್ಲದೆ ಗುರೂಜಿ ಮೂಲಗಳನ್ನೆ ಬಳಿಸಿ ಸಪರೇಟ್ ಆಗಿ ವಾಸ್ತು ವ್ಯವಹಾರ ನಡೆಸುತ್ತಿದ್ದರು. ಈ ವಿಚಾರ ಗುರೂಜಿಗೆ ತಿಳಿದು ವಾದ-ವಿವಾದಗಳು ನಡೆದಿತ್ತು. ಆಸ್ತಿ ನೀಡಿಲ್ಲಾ ಅಂದರೆ ಗುರೂಜಿ ನಮಗೆ ಏನಾದರು ಮಾಡಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದ ಹಂತಕರು ಆಸ್ತಿ ಪಡೆಯುವ ಮೊದಲು ಕೊಲೆ ಮಾಡಬೇಕೆಂದು ನಿರ್ಧರಿಸಿದ್ದರು.
ಇದನ್ನೂ ಓದಿ: ಸಿಂಗಪೂರ್: ಗೆಳೆಯನ ಗರ್ಲ್ಫ್ರೆಂಡನ್ನು ರೇಪ್ ಮಾಡಿದ್ದ ಭಾರತೀಯ ಮೂಲದ ವ್ಯಕ್ತಿಯ ಶಿಕ್ಷೆಯನ್ನು ಅಲ್ಲಿನ ಟಾಪ್ ಕೋರ್ಟ್ ತಗ್ಗಿಸಿದೆ
ಆಸ್ತಿ ಮಾರಾಟಕ್ಕೆ ಒಪ್ಪದ ಆರೋಪಿಗಳು: ಗುರೂಜಿ ಸುಮಾರು 5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಆರೋಪಿ ಹೆಸರಿಗೆ ಮಾಡಿದ್ದರು. ಕೊವಿಡ್ ಸಮಯದ ನಂತರ ಗುರೂಜಿ ವ್ಯವಹಾರದಲ್ಲಿ ಆಧಾಯ ಕಡಿಮೆ ಆಗಿತ್ತು. ಈ ವೇಳೆ ಆಸ್ತಿಯನ್ನು ಮಾರಾಟ ಮಾಡುವಂತೆ ಸೂಚಿಸಿದ್ದರು. ಅದರೆ ಗುರೂಜಿಗೆ ಬೇನಾಮಿಯಾಗಿದ್ದ ಅರೋಪಿ ಮಾರಾಟ ಮಾಡಲು ಒಪ್ಪಿರಲಿಲ್ಲ. ಜೊತೆಗೆ ಕೆಲಸದಿಂದ ತೆಗೆದಿದ್ದ ಕಾರಣ ಸುತಾರಾಂ ಮಾರಾಟ ಬೇಡ ಎಂದು ತೀರ್ಮಾನ ಮಾಡಿದ್ದರು. ಮಾರಾಟಕ್ಕೆ ಒಪ್ಪುವಂತೆ ಗುರೂಜಿ ಪರಿಚಿತ ರಾಜಕಾರಣಿಗಳು ಹಾಗು ಅಧಿಕಾರಿಗಳ ಮೂಲಕ ಒತ್ತಡ ಹಾಕಿಸಿದ್ದರು. ಅದ್ಯಾವುದಕ್ಕೂ ಅರೋಪಿಗಳು ಒಪ್ಪಲಿಲ್ಲ. ಮಾರಾಟ ಮಾಡಿ ಹಣ ಕೊಟ್ಟಿಲ್ಲ ಅಂದರೆ ನನಗೆ ಗೊತ್ತಿದೆ ಅಂತ ಗುರೂಜಿ ಹೇಳಿದ್ದರು.
ಸಂಧಾನಕ್ಕೆಂದು ಕರೆದು ಸಾವಿನ ದಾರಿ ತೋರಿಸಿದ ಹಂತಕರು: ಹಂತಕರು ಕೈಯಲ್ಲಿ ದಾಖಲೆ ಪತ್ರಗಳನ್ನ ಹಿಡಿದುಕೊಂಡು ಹೋಟೆಲ್ಗೆ ಬಂದಿದ್ದರು. ಚಾಕು ತಂದಿದ್ದು ಗೊತ್ತಾಗಬಾರದು ಅಂತ ದಾಖಲೆ ಪತ್ರಗಳ ಮಧ್ಯೆ ಚಾಕು ಇಟ್ಟುಕೊಂಡು ಬಂದಿದ್ದರು. ಗುರೂಜಿ ಹತ್ಯೆ ನಂತರ ದಾಖಲೆ ಬಿಟ್ಟು ಪರಾರಿಯಾಗಿದ್ದರು. ಕೊಲೆ ಬಳಿಕ ಒಂದು ಚಾಕು ಹೋಟೆಲ್ ಮುಂಭಾಗದ ಕಸದ ರಾಶಿಯಲ್ಲಿ ಎಸೆದಿದ್ದರು. ಇನ್ನೊಂದು ಮಾರ್ಗ ಮಧ್ಯೆ ಎಸೆದಿದ್ದಾರೆ.
ಇದನ್ನೂ ಓದಿ: ಪ್ರತ್ಯೇಕ ದೇಶದ ಕೂಗಿನ ಬೆನ್ನಲ್ಲೇ ತಮಿಳುನಾಡನ್ನು ಇಬ್ಭಾಗ ಮಾಡುವ ಪ್ರಸ್ತಾಪವಿಟ್ಟ ಬಿಜೆಪಿ ನಾಯಕ
Published On - 8:21 am, Thu, 7 July 22