ಮಂಡ್ಯ: ಪತಿಯನ್ನ ಕೊಂದು ಪೊಲೀಸರಿಗೆ ದೂರು ಕೊಟ್ಟ ಹಂತಕಿ ಪತ್ನಿ ಅಂದರ್

ಜುಲೈ 2 ರ ಮದ್ಯಾಹ್ನ ಮಜ್ಜಿಗೆಪುರಕ್ಕೆ ಸುಂದರ್ ರಾಜ್​ನನ್ನ ಆರೋಪಿಗಳು ಕರೆದುಕೊಂಡು ಹೋಗಿದ್ದಾರೆ. ಬಳಿಕ ಕಂಠಪೂರ್ತಿ ಕುಡಿಸಿ ಕತ್ತು ಸೀಳಿ ಹತ್ಯೆ ಮಾಡಲಾಗಿದೆ.

ಮಂಡ್ಯ: ಪತಿಯನ್ನ ಕೊಂದು ಪೊಲೀಸರಿಗೆ ದೂರು ಕೊಟ್ಟ ಹಂತಕಿ ಪತ್ನಿ ಅಂದರ್
ಬಂಧಿತ ಆರೋಪಿಗಳು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 07, 2022 | 8:21 AM

ಮಂಡ್ಯ: ಪತಿಯನ್ನ ಕೊಂದು ಪೊಲೀಸರಿಗೆ ದೂರು ಕೊಟ್ಟ ಹಂತಕಿ ಪತ್ನಿ ಅಂದರ್ (arrest) ಆಗಿರುವಂತಹ ಘಟನೆ ಕೆ.ಆರ್​.ಎಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಡನಿಗೆ ಸ್ಕೆಚ್ ಹಾಕಿ ಮರ್ಡರ್ ಮಾಡಿಸಿದ್ದ ಪತ್ನಿ ಗೌರಿ, ಸುಂದರ್ ರಾಜ್​ನನ್ನ ಮಜ್ಜಿಗೆಪುರದ ಕಾಲಿ ಜಾಗದಲ್ಲಿ ಕತ್ತು ಸೀಳಿ ಭೀಕರವಾಗಿ ಹಂತಕರು ಕೊಂದಿದ್ದರು. ಕೊಲೆಯ ಬಳಿಕ ಏನು ಗೊತ್ತೆ ಇಲ್ಲಾ ಅನ್ನೋ ರೀತಿ ವರ್ತಿಸಿದ್ದ ಪತ್ನಿ ಗೌರಿ, ಖಾಕಿ ವಿಚಾರಣೆ ವೇಳೆ ಸತ್ಯಾಂಶ ಬಟಾ ಬಯಲಾಗಿದೆ. ಚಾಲಕನಾಗಿದ್ದ ಸುಂದರ್ ರಾಜ್ 15 ದಿನಕ್ಕೊಮ್ಮೆ ಮನೆಗೆ ಬರ್ತಾಯಿದ್ದ. ಕಂಠ ಪೂರ್ತಿ ಕುಡಿದು ಬಂದು ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ. ಈ ಹಿನ್ನಲೆ ಪತಿ ಸುಂದರ್ ರಾಜ್ ಒಂದು ಗತಿ ಕಾಣಿಸಲೇ ಬೇಕೆಂದು ಮುಹೂರ್ತ ಫಿಕ್ಸ್ ಮಾಡಿದ್ದ ಪತ್ನಿ ಗೌರಿ, ತನ್ನ ಸ್ನೇಹಿತರ ಬಳಿ ಕಷ್ಟವನ್ನ ಗೌರಿ ಹೇಳಿಕೊಂಡಿದ್ದು, ಜುಲೈ 2 ರ ಮದ್ಯಾಹ್ನ ಮಜ್ಜಿಗೆಪುರಕ್ಕೆ ಸುಂದರ್ ರಾಜ್​ನನ್ನ ಆರೋಪಿಗಳು ಕರೆದುಕೊಂಡು ಹೋಗಿದ್ದಾರೆ. ಬಳಿಕ ಕಂಠಪೂರ್ತಿ ಕುಡಿಸಿ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಪ್ರಕರಣ ಸಂಬಂಧ ಪತ್ನಿ ಗೌರಿ ಸೇರಿದಂತೆ ಐವರು ಆರೋಪಿಗಳನ್ನು ಅರೆಸ್ಟ್ ಮಾಡಿ, ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಲಾರಿಗೆ ಗೂಡ್ಸ್ ರೈಲು ಡಿಕ್ಕಿ: ತಪ್ಪಿದ ಭಾರೀ ಅನಾಹುತ: 

ಬೀದರ್: ಲಾರಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಲಾರಿಯ‌ ಹಿಂಭಾಗ ನುಜ್ಜುಗುಜ್ಜಾಗಿರುವಂತಹ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಸಿದ್ಧೇಶ್ವರ ರೇಲ್ವೆ ಕ್ರಾಷಿಂಗ್ ಬಳಿ‌ ನಡೆದಿದೆ. ಟ್ರೇನ್ ಬರುತ್ತಿದೆಂದು ಗೇಟ್ ಮ್ಯಾನ್ ರೇಲ್ವೆ ಗೇಟ್ ಹಾಕಿದ್ದಾನೆ. ಅಷ್ಟರಲ್ಲಿ ಲಾರಿ ಗೇಟನೊಳಗೆ ಹೋಗಿದೆ. ಗೇಟ್ ತೆರೆಯಬೇಕು‌ ಅನ್ನುವಷ್ಟಲ್ಲಿ ರೈಲು ಬಂದಿದ್ದು, ಲಾರಿಯನ್ನ ಗುದ್ದಿಕೊಂಡು ಮುಂದೆ ಹೋಗಿದೆ. ಲಾರಿಗೆ ರೈಲು ಗುದ್ದಿರುವ ವಿಡಿಯೋ ಸಾಮಾಜಿಕ ‌ಜಾಲತಾಣದಲ್ಲಿ‌ ಬಾರೀ ವೈರಲ್ ಆಗಿದೆ. ಈ ಕುರಿತು ಬೀದರ್ ರೇಲ್ವೆ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Rashmika Mandanna: ಕೇಳಿಬರ್ತಿದೆ ರಶ್ಮಿಕಾ-ವಿಜಯ್​ ದೇವರಕೊಂಡ ಫ್ಯಾನ್ಸ್​ ಖುಷಿಪಡುವ ಸುದ್ದಿ; ಅಧಿಕೃತ ಆಗೋದಷ್ಟೇ ಬಾಕಿ

ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಬೆಂಗಳೂರು: ನಾಗರಬಾವಿ ವಾಟರ್ ಟ್ಯಾಂಕ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ ಮಾಡಲಾಗಿದೆ. ಪದ್ಮನಾಭ ಬಂಧಿತ ಆರೋಪಿ. ಬಂಧಿತನಿಂದ 2.120 ಕೆಜಿ ಗಾಂಜಾ, 1,300 ನಗದು, ಬೈಕ್​ ಜಪ್ತಿ ಮಾಡಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಕೇಸ್​ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

ಇದನ್ನೂ ಓದಿ; ಸಿಂಗಪೂರ್: ಗೆಳೆಯನ ಗರ್ಲ್​ಫ್ರೆಂಡನ್ನು ರೇಪ್ ಮಾಡಿದ್ದ ಭಾರತೀಯ ಮೂಲದ ವ್ಯಕ್ತಿಯ ಶಿಕ್ಷೆಯನ್ನು ಅಲ್ಲಿನ ಟಾಪ್ ಕೋರ್ಟ್ ತಗ್ಗಿಸಿದೆ