AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಗಪೂರ್: ಗೆಳೆಯನ ಗರ್ಲ್​ಫ್ರೆಂಡನ್ನು ರೇಪ್ ಮಾಡಿದ್ದ ಭಾರತೀಯ ಮೂಲದ ವ್ಯಕ್ತಿಯ ಶಿಕ್ಷೆಯನ್ನು ಅಲ್ಲಿನ ಟಾಪ್ ಕೋರ್ಟ್ ತಗ್ಗಿಸಿದೆ

ಇಬ್ಬರು ವ್ಯಕ್ತಿಗಳು ಒಂದೇ ಪ್ರಕರಣದಲ್ಲಿ ದೋಷಿಗಳು ಅಂತ ಸಾಬೀತಾದಾಗ ಶಿಕ್ಷೆಯ ಪ್ರಮಾಣ ಸಮನಾಗಿರಬೇಕು ಎನ್ನುವುದು ನೀತಿಯಾಗಿದೆ. ಈ ಪ್ರಕರಣದ ಎಲ್ಲಾ ಆಯಾಮಗಳು ಸಮನಾಗಿದ್ದವು.

ಸಿಂಗಪೂರ್: ಗೆಳೆಯನ ಗರ್ಲ್​ಫ್ರೆಂಡನ್ನು ರೇಪ್ ಮಾಡಿದ್ದ ಭಾರತೀಯ ಮೂಲದ ವ್ಯಕ್ತಿಯ ಶಿಕ್ಷೆಯನ್ನು ಅಲ್ಲಿನ ಟಾಪ್ ಕೋರ್ಟ್ ತಗ್ಗಿಸಿದೆ
ಸಿಂಗಪೂರ್​​ ಸುಪ್ರೀಮ್ ಕೋರ್ಟ್​
TV9 Web
| Edited By: |

Updated on: Jul 07, 2022 | 8:06 AM

Share

ಸಿಂಗಪೂರ್: ಕಣ್ಣುಗಳನ್ನು ಕಟ್ಟಿದ ಸ್ನೇಹಿತನ ಗೆಳತಿಯ ಮೇಲೆ ಗೆಳೆಯನೊಂದಿಗೆ ಅವಳಿಗೆ ಗೊತ್ತಿಲ್ಲದೆ ಹಾಗೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿ (ಥ್ರೀಸಮ್) ರೇ​ಪ್ ಪ್ರಕರಣದಡಿ ಶಿಕ್ಷೆಗೊಳಗಾಗಿದ್ದ ಭಾರತೀಯ ಮೂಲದ (Indian origin) ವ್ಯಕ್ತಿಯೊಬ್ಬನ ಶಿಕ್ಷೆಯ ಪ್ರಮಾಣವನ್ನು ಸಿಂಗಪೂರ್​​ ಸರ್ವೋಚ್ಛ ನ್ಯಾಯಾಲಯ (Singapore Apex Court) ಕೊಂಚಮಟ್ಟಿಗೆ ತಗ್ಗಿಸಿದೆ. ಭಾರತೀಯ ಮೂಲದ ಶ್ರೀಹರಿ ಮಹೇಂದ್ರನ್ (26) (Srihari Mahendran) ಮತ್ತು ಅವನ ಗೆಳೆಯನೊಬ್ಬ 2016ರಲ್ಲಿ ಗೆಳೆಯನ ಗರ್ಲ್​ಫ್ರೆಂಡ್​​ ಳೊಂದಿಗೆ ಏಕಕಾಲಕ್ಕೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಯುವತಿ ಮಹೇಂದ್ರನ್ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ ಬಳಿಕ ಸಿಂಗಪೂರ್ ಹೈಕೋರ್ಟ್​​ ​ಅವನಿಗೆ 17-ವರ್ಷ ಜೈಲುವಾಸ ಮತ್ತು 14 ಛಡಿಯೇಟಿನ ಶಿಕ್ಷೆ ವಿಧಿಸಿತ್ತು.

ಆದರೆ ಮಹೇಂದ್ರನ್ ಮೇಲ್ಮನವಿ ಸಲ್ಲಿಸಿದ ಬಳಿಕ ಪ್ರಕರಣದಲ್ಲಿ ಸಹ ಆರೋಪಿಯಾಗಿರುವವನಿಗೆ ವಿಧಿಸಿರುವ ಶಿಕ್ಷೆಯ ಪ್ರಮಾಣಕ್ಕೆ ಮಹೇಂದ್ರನ್​ ಗೆ ನೀಡಿರುವ ಶಿಕ್ಷೆ ಸಮಾನವಾಗಿರಬೇಕು ಅಂತ ಹೇಳಿ ಅವನ ಸೆರೆವಾಸದ ಅವಧಿಯನ್ನು 16 ವರ್ಷಕ್ಕೆ ಇಳಿಸಿತು. ನ್ಯೂಸ್​ ಏಷ್ಯಾ ಚಾನೆಲ್​ ರಿಪೋರ್ಟ್​ ಪ್ರಕಾರ ಛಡಿಯೇಟಿನ ಶಿಕ್ಷೆಯಲ್ಲಿ ಯಾವುದೇ ರಿಯಾಯಿತಿ ನೀಡಿಲ್ಲ.

ಇಬ್ಬರು ವ್ಯಕ್ತಿಗಳು ಒಂದೇ ಪ್ರಕರಣದಲ್ಲಿ ದೋಷಿಗಳು ಅಂತ ಸಾಬೀತಾದಾಗ ಶಿಕ್ಷೆಯ ಪ್ರಮಾಣ ಸಮನಾಗಿರಬೇಕು ಎನ್ನುವುದು ನೀತಿಯಾಗಿದೆ. ಈ ಪ್ರಕರಣದ ಎಲ್ಲಾ ಆಯಾಮಗಳು ಸಮನಾಗಿದ್ದವು.

ಸದರಿ ಪ್ರಕರಣದಲ್ಲಿ ಮಹೇಂದ್ರನ್​ ವಕೀಲ ಎಡ್ಮಂಡ್​ ಪೆರೀರಾ ಅವರು ತಮ್ಮ ಕಕ್ಷಿದಾರನ ಶಿಕ್ಷೆಯನ್ನು 16 ವರ್ಷಗಳಿಂದ 14 ವರ್ಷಕ್ಕೆ ಇಳಿಸಬೇಕೆಂದು ಮನವಿ ಮಾಡಿದರು. ಮಹೇಂದ್ರನ್ ನ ಸಹ ದೋಷಿಗೆ ಹೋಲಿಸಿದರೆ, ಕಕ್ಷಿದಾರರ ಅಪರಾಧ ಕಡಿಮ ಸ್ವರೂಪದ್ದು ಅಂತ ಎಡ್ಮಂಡ್​ ವಾದಿಸಿದರು.

ಸಂತ್ರಸ್ತೆಯ ಗುರುತನ್ನು ರಕ್ಷಿಸಲು ಅವಳ ಗೆಳೆಯನನ್ನು ಹೆಸರಿಸಲಾಗುವುದಿಲ್ಲ. ಚಾನೆಲ್ ವರದಿಯ ಪ್ರಕಾರ ಶ್ರೀಹರಿಯ ಗುರುತಿನ ಬಗ್ಗೆ ಯಾವುದೇ ಗ್ಯಾಗ್ ಆರ್ಡರ್ ಇಲ್ಲದ ಕಾರಣ ಮತ್ತು ಅವರು ದಂಪತಿಗೆ ಅಪರಿಚಿತನಾಗಿದ್ದರಿಂದ ಅವನನ್ನು ಹೆಸರಿಸಬಹುದಾಗಿದೆ.

ಪೋರ್ನೋಗ್ರಾಫಿಕ್​ ಬ್ಲಾಗೊಂದರಲ್ಲಿ ಮಹೇಂದ್ರನ್ ಮತ್ತು ಅವನ ಗೆಳೆಯ 2015ರಲ್ಲಿ ಮೊದಲ ಬಾರಿಗೆ ಭೇಟಿಯಾದರು. ಆಗಸ್ಟ್​ 2016ರ ಏಪ್ರಿಲ್ ಮತ್ತು ಆಗಸ್ಟ್​​​​ನಲ್ಲಿ ಮಹೇಂದ್ರನ್,​ ಗೆಳೆಯನ ಗರ್ಲ್​​​ಫ್ರೆಂಡ್ ಮೇಲೆ ಅವನ ನೆರವಿನಿಂದಲೇ ಎರಡು ಬೇರೆ ಬೇರೆ ಹೋಟೆಲ್​​​ಗಳಲ್ಲಿ ಅತ್ಯಾಚಾರವೆಸಗಿದ.

ಎರಡನೇ ಬಾರಿ ಅತ್ಯಾಚಾರ ನಡೆದಾಗ ಯುವತಿಗೆ ಸಂಶಯ ಹುಟ್ಟಿ ಅವಳು ತನ್ನ ಕಣ್ಣಿಗೆ ಕಟ್ಟಿದ ಪಟ್ಟಿಯನ್ನು ಬಿಚ್ಟಿದ್ದಾಳೆ. ಆಗಲೇ ಅವಳಿಗೆ ಮಹೇಂದ್ರನ್ ಹೋಟೆಲ್ ರೂಮಿನಿಂದ ಹೊರಗೆ ಹೋಗುತ್ತಿರುವುದು ಕಾಣಿಸಿದೆ. ಮಹೇಂದ್ರನ್ ಮತ್ತವನ ಗೆಳೆಯ ಸಂತ್ರಸ್ತೆ ಜೊತೆ ನಡೆಸಿದ ಲೈಂಗಿಕ ಕ್ರಿಯೆಯನ್ನು ವಿಡಿಯೋ ರೆಕಾರ್ಡ್​ ಮಾಡಿಕೊಂಡಿದ್ದು ಅದನ್ನು ಕೂಡ ಕೋರ್ಟ್ ಸಾಕ್ಷ್ಯವಾಗಿ ಬಳಸಿದೆ.​

ಇದನ್ನೂ ಓದಿ:   World Richest Persons Wealth: 2022ರ 6 ತಿಂಗಳಲ್ಲಿ ಕರಗಿತು ವಿಶ್ವದ ಅತಿ ಶ್ರೀಮಂತರ 1 ಲಕ್ಷ ಕೋಟಿ ಯುಎಸ್​ಡಿ ಸಂಪತ್ತು