AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Richest Persons Wealth: 2022ರ 6 ತಿಂಗಳಲ್ಲಿ ಕರಗಿತು ವಿಶ್ವದ ಅತಿ ಶ್ರೀಮಂತರ 1 ಲಕ್ಷ ಕೋಟಿ ಯುಎಸ್​ಡಿ ಸಂಪತ್ತು

ವಿಶ್ವದ ಅತಿ ಶ್ರೀಮಂತರು 2022ರ ಜನವರಿಯಿಂದ ಜೂನ್ ಮಧ್ಯೆ 1.40 ಲಕ್ಷ ಕೋಟಿ ಯುಎಸ್​ಡಿ ಸಂಪತ್ತಿನ ನಷ್ಟವನ್ನು ಅನುಭವಿಸಿದ್ದಾರೆ.

World Richest Persons Wealth: 2022ರ 6 ತಿಂಗಳಲ್ಲಿ ಕರಗಿತು ವಿಶ್ವದ ಅತಿ ಶ್ರೀಮಂತರ 1 ಲಕ್ಷ ಕೋಟಿ ಯುಎಸ್​ಡಿ ಸಂಪತ್ತು
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jul 02, 2022 | 11:16 AM

Share

ನೀವು ಈ ವರೆಗೆ ಶ್ರೀಮಂತರ ಗಳಿಕೆ ಬಗ್ಗೆ ಓದಿರುತ್ತೀರಿ. ಆದರೆ ಈ ಲೇಖನ ಭಿನ್ನವಾಗಿದೆ. ಎಲಾನ್ ಮಸ್ಕ್ (Elon Musk) ಆಸ್ತಿ 6200 ಕೋಟಿ ಅಮೆರಿಕನ್ ಡಾಲರ್ ಕಡಿಮೆ ಆಗಿದೆ. ಇನ್ನು ಜೆಫ್ ಬೆಜೋಸ್ ಆಸ್ತಿ 6300 ಕೋಟಿ ಯುಎಸ್​ಡಿ ಕರಗಿದೆ. ಮಾರ್ಕ್​​ ಝುಕರ್​ಬರ್ಗ್ ನಿವ್ವಳ ಆಸ್ತಿ ಅರ್ಧದಷ್ಟು ನಷ್ಟವಾಗಿದೆ. ಎಲ್ಲರ ಲೆಕ್ಕವನ್ನು ನೋಡುವುದಾದರೆ, ವಿಶ್ವದ ಅತಿ ಶ್ರೀಮಂತ 500 ಮಂದಿ 2022ರ ಜನವರಿಯಿಂದ ಜೂನ್ ಕೊನೆ ಹೊತ್ತಿಗೆ 1.4 ಲಕ್ಷ ಕೋಟಿ ಅಮೆರಿಕನ್ ಡಾಲರ್ ಕಿಡಿಗೆ ತಾಕಿದ ಕರ್ಪೂರದಂತೆ ಆಗಿದೆ. 1.4 ಲಕ್ಷ ಕೋಟಿ ಅಮೆರಿಕನ್ ಡಾಲರ್ ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಎಷ್ಟು ಅಂತ ಉಲ್ಲೇಖಿಸುವುದು ಉತ್ತಮ. 110.53 ಲಕ್ಷ ಕೋಟಿ ರೂಪಾಯಿ ಆಗುತ್ತದೆ. 2022ರ ಕರ್ನಾಟಕ ಬಜೆಟ್​ ವೆಚ್ಚವನ್ನು ಹೋಲಿಕೆ ಮಾಡಿ ಹೇಳುವುದಾದರೆ ಶ್ರೀಮಂತರು ಅನುಭವಿಸಿದ ನಷ್ಟ 40 ವರ್ಷಕ್ಕೆ ಸಮನಾಗುತ್ತದೆ.

ಕೊವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸರ್ಕಾರಗಳು ಮತ್ತು ಕೇಂದ್ರ ಬ್ಯಾಂಕ್‌ಗಳು ಭಾರೀ ಉತ್ತೇಜಕ ಕ್ರಮಗಳನ್ನು ಘೋಷಣೆ ಮಾಡಿದವು. ಟೆಕ್ ಕಂಪನಿಗಳಿಂದ ಕ್ರಿಪ್ಟೋಕರೆನ್ಸಿಗಳವರೆಗೆ ಹಿಂದಿನ ಎರಡು ವರ್ಷಗಳಿಂದ ಎಲ್ಲದರ ಮೌಲ್ಯವನ್ನು ಪುಷ್ಟಗೊಳಿಸಿದ್ದರಿಂದ ಇದೀಗ ತೀವ್ರ ಸ್ವರೂಪದಲ್ಲಿ ಕಡಿಮೆ ಆಗಿದೆ. ನೀತಿ ನಿರೂಪಕರು ಈಗ ಹೆಚ್ಚಿನ ಹಣದುಬ್ಬರವನ್ನು ಎದುರಿಸಲು ಬಡ್ಡಿದರಗಳನ್ನು ಹೆಚ್ಚಿಸುವುದರೊಂದಿಗೆ, ಕೆಲವು ಭಾರೀ ಏರಿಕೆಯ ಷೇರುಗಳು ಮತ್ತು ಅವುಗಳನ್ನು ಹೊಂದಿರುವ ಬಿಲಿಯನೇರ್‌ಗಳು ವೇಗವಾಗಿ ನಷ್ಟವನ್ನು ಕಾಣುತ್ತಿದ್ದಾರೆ. ಟೆಸ್ಲಾ ಕಂಪೆನಿಯು ಜೂನ್‌ವರೆಗಿನ ತ್ರೈಮಾಸಿಕದಲ್ಲಿ ಅತ್ಯಂತ ಕೆಟ್ಟ ಫಲಿತಾಂಶ ಹೊಂದಿದೆ. ಆದರೆ Amazon.com ಅತಿ ಹೆಚ್ಚು ಕುಸಿದಿದೆ.

ಪ್ರಪಂಚದ ಅತ್ಯಂತ ಶ್ರೀಮಂತರಿಗೆ ನಷ್ಟಗಳು ಹೆಚ್ಚಾಗುತ್ತಿದ್ದರೂ ಸಂಪತ್ತಿನ ಅಸಮಾನತೆಯನ್ನು ಸಂಕುಚಿತಗೊಳಿಸುವ ಕಡೆಗೆ ಇದು ಸಾಧಾರಣ ಕ್ರಮವನ್ನು ಪ್ರತಿನಿಧಿಸುತ್ತದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಟೆಸ್ಲಾದ ಸಹ-ಸಂಸ್ಥಾಪಕರಾದ ಮಸ್ಕ್ ಈಗಲೂ 208.5 ಶತಕೋಟಿ ಯುಎಸ್​ಡಿಯಷ್ಟು ದೊಡ್ಡ ಮೊತ್ತದ ಸಂಪತ್ತನ್ನು ಹೊಂದಿದ್ದಾರೆ. ಆದರೆ ಅಮೆಜಾನ್‌ನ ಬೆಜೋಸ್ ಯುಎಸ್​ಡಿ 129.6 ಶತಕೋಟಿ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಬ್ಲೂಮ್‌ಬರ್ಗ್ ಸೂಚ್ಯಂಕದ ಪ್ರಕಾರ, ಫ್ರಾನ್ಸ್‌ನ ಅತ್ಯಂತ ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್ ಯುಎಸ್​ಡಿ 128.7 ಶತಕೋಟಿ ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಆ ನಂತರ ಬಿಲ್ ಗೇಟ್ಸ್ ಯುಎಸ್​ಡಿ 114.8 ಶತಕೋಟಿ ಆಸ್ತಿ ಹೊಂದಿದ್ದಾರೆ.

ಈ ರೀತಿ ಯುಎಸ್​ಡಿ 100 ಶತಕೋಟಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ನಾಲ್ವರು ಸಿರಿವಂತರು ಇವರು – ವರ್ಷದ ಆರಂಭದಲ್ಲಿ 10 ಮಂದಿ ಬಳಿ 100 ಬಿಲಿಯನ್ ಯುಎಸ್​ಡಿಗಿಂತ ಹೆಚ್ಚು ಆಸ್ತಿ ಇತ್ತು. ಯುಎಸ್​ಡಿ 60 ಶತಕೋಟಿಯೊಂದಿಗೆ ಸಂಪತ್ತಿನ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದಾರೆ ಝುಕರ್‌ಬರ್ಗ್.

ಇದನ್ನೂ ಓದಿ: Billionaires Wealth: 2022ರಲ್ಲಿ ವಿಶ್ವದ ಇತರೆಡೆ ಶತಕೋಟ್ಯಧಿಪತಿಗಳಿಗೆ ಲಕ್ಷ ಕೋಟಿ ಡಾಲರ್ ಸಂಪತ್ತು ನಷ್ಟ; ಭಾರತದ ಶ್ರೀಮಂತರು ಗಟ್ಟಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ