Billionaires Wealth: 2022ರಲ್ಲಿ ವಿಶ್ವದ ಇತರೆಡೆ ಶತಕೋಟ್ಯಧಿಪತಿಗಳಿಗೆ ಲಕ್ಷ ಕೋಟಿ ಡಾಲರ್ ಸಂಪತ್ತು ನಷ್ಟ; ಭಾರತದ ಶ್ರೀಮಂತರು ಗಟ್ಟಿ

ವಿಶ್ವದ ಇತರೆಡೆಗಳ ಶತಕೋಟ್ಯಧಿಪತಿಗಳು 1 ಲಕ್ಷ ಕೋಟಿ ಅಮೆರಿಕನ್ ಡಾಲರ್ ಸಂಪತ್ತನ್ನು 2022ನೇ ಇಸವಿಯಲ್ಲಿ ಕಳೆದುಕೊಂಡಿದ್ದಾರೆ. ಆದರೆ ಭಾರತೀಯ ಶತಕೋಟ್ಯಧಿಪತಿಗಳು ಶೇ 99ರಷ್ಟು ಸಂಪತ್ತು ಉಳಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.

Billionaires Wealth: 2022ರಲ್ಲಿ ವಿಶ್ವದ ಇತರೆಡೆ ಶತಕೋಟ್ಯಧಿಪತಿಗಳಿಗೆ ಲಕ್ಷ ಕೋಟಿ ಡಾಲರ್ ಸಂಪತ್ತು ನಷ್ಟ; ಭಾರತದ ಶ್ರೀಮಂತರು ಗಟ್ಟಿ
ಮುಕೇಶ್ ಅಂಬಾನಿ, ಗೌತಮ್ ಅದಾನಿ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Jun 04, 2022 | 6:30 PM

ಹೆಚ್ಚಿನ ಹಣದುಬ್ಬರ, ಏರುತ್ತಿರುವ ಬಡ್ಡಿ ದರಗಳು ಮತ್ತು ಸಾಲ ವಸೂಲಿ ಆಗುವುದರಲ್ಲಿ ಇರುವಂಥ ಅನುಮಾನಗಳು ಹೀಗೆ ಜಗತ್ತಿನಾದ್ಯಂತ ವಿವಿಧ ದೇಶಗಳು ಏನೆಲ್ಲ ಸಮಸ್ಯೆಗಳು ಎದುರಿಸುತ್ತಿವೆಯೋ ಅವುಗಳನ್ನೇ ಭಾರತ ಸಹ ಕಾಣುತ್ತಿದೆ. ಆದರೆ ಇದರಿಂದ ದೇಶದ ಶತಕೋಟ್ಯಧಿಪತಿಗಳ (Billionaires) ಮೇಲೆ ಯಾವುದೇ ಪರಿಣಾಮ ಬೀರಿದಂತೆ ಕಾಣುವುದಿಲ್ಲ. ಹಾಗೆ ನೋಡಿದರೆ 2022ನೇ ಇಸವಿಯಲ್ಲಿ ತೀರಾ ಕನಿಷ್ಠ ಪ್ರಮಾಣದ ಸಂಪತ್ತಿನ ನಷ್ಟವನ್ನು ಕಂಡಿದ್ದಾರೆ. ಹಾಗೆ ನೋಡಿದರೆ ವಿಶ್ವದ ಇತರ ಭಾಗದ ಶ್ರೀಮಂತರೆಲ್ಲ ಸೇರಿ 1 ಲಕ್ಷ ಕೋಟಿ ಡಾಲರ್​ನಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ 76 ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಬಿಜಿನೆಸ್ ಇನ್​ಸೈಡರ್ ಮತ್ತು ಬ್ಲೂಮ್​ಬರ್ಗ್​ ಬಿಲಿಯನೇರ್ಸ್​ ಸೂಚ್ಯಂಕದ ಪ್ರಕಾರ, ಭಾರತದ ಶತಕೋಟ್ಯಧಿಪತಿಗಳು ಶೇ 99ರಷ್ಟು ಆಸ್ತಿಗಳನ್ನು ಹಾಗೇ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಕಳೆದುಕೊಂಡಿರುವುದು 500 ಕೋಟಿ ಅಮೆರಿಕನ್ ಡಾಲರ್ ಮಾತ್ರ. ಹೀಗೆ ಸಂಪತ್ತು ಉಳಿಸಿಕೊಂಡ ದೇಶಗಳವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವುದು ಸ್ವಿಟ್ಜರ್​ಲೆಂಡ್​ನವರಾದರೆ, ಎರಡನೇ ಸ್ಥಾನದಲ್ಲಿ ಭಾರತೀಯರಿದ್ದಾರೆ.

ಭಾರತದಲ್ಲಿ 166 ಶತಕೋಟ್ಯಧಿಪತಿಗಳಿದ್ದಾರೆ. ಆ ಪೈಕಿ ಕೇವಲ 18 ಮಂದಿ ಮಾತ್ರ ಟಾಪ್​ 500 ಬಿಲಿಯನೇರ್​ಗಳ ಪಟ್ಟಿಯಲ್ಲಿ ಇದ್ದಾರೆ. ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯರು ಅಂತ ಕಾಣಿಸಿದರೆ ಅದು ಮುಕೇಶ್​ ಅಂಬಾನಿ ಹಾಗೂ ಗೌರಮ್ ಅದಾನಿ. ನಿಮಗೆ ಗೊತ್ತಿರಲಿ, ಈ ನಷ್ಟದ ಪೈಕಿ ಶೇ 60ರಷ್ಟು ಕೊಡುಗೆ ಅಮೆರಿಕ ಹಾಗೂ ಚೀನಾದ್ದು. ಇಷ್ಟು ತಿಂಗಳಲ್ಲಿ ಕ್ರಮವಾಗಿ 426 ಬಿಲಿಯನ್ ಯುಎಸ್​ಡಿ ಹಾಗೂ 185 ಬಿಲಿಯನ್ ಯುಎಸ್​ಡಿ ಸಂಪತ್ತು ಕರಗಿದೆ. ಇನ್ನು ರಷ್ಯಾ- ಉಕ್ರೇನ್ ಯುದ್ಧದ ನಿರ್ಬಂಧದಿಂದ ರಷ್ಯನ್ ಶ್ರೀಮಂತರ ಮೇಲೆ ಭಾರೀ ಪರಿಣಾಮವೇ ಆಗಿದೆ. ಒಟ್ಟು 5000 ಕೋಟಿ ಅಮೆರಿಕನ್ ಡಾಲರ್ ಸಂಪತ್ತನ್ನು ಅಲ್ಲಿನ ಶ್ರೀಮಂತರು ಕಳೆದುಕೊಂಡಿದ್ದಾರೆ.

ಕನಿಷ್ಠ 10 ಶತಕೋಟ್ಯಧಿಪತಿಗಳು ಇರುವಂಥ ದೇಶಗಳ ಪೈಕಿ ತಮ್ಮ ಸಂಪತ್ತಿಗೆ ಇನ್ನಷ್ಟು ಸೇರ್ಪಡೆ ಮಾಡಿರುವ ಶ್ರೀಮಂತರು ಇರುವ ದೇಶಗಳು ಯಾವುವು ಅಂತ ನೋಡಿದರೆ, ಸ್ವಿಟ್ಜರ್​ಲೆಂಡ್​ ನಂತರದ ಸ್ಥಾನದಲ್ಲಿ ಭಾರತ ಇದೆ. 2022ರಲ್ಲಿ ಭಾರತದಲ್ಲಿನ ಶತಕೋಟ್ಯಧಿಪತಿಗಳ ಬಳಿ ಇದ್ದದ್ದು 415 ಬಿಲಿಯನ್ ಯುಎಸ್​ಡಿ. ಆ ಪೈಕಿ 410 ಬಿಲಿಯನ್ ಯುಎಸ್​ಡಿ ಹಾಗೇ ಉಳಿದಿದೆ. ಸ್ವಿಸ್​ ಬಿಲಿಯನೇರ್​ಗಳು ತಮ್ಮ ಆಸ್ತಿಗೆ 1200 ಕೋಟಿ ಯುಎಸ್​ಡಿ ಸೇರ್ಪಡೆ ಮಾಡಿದ್ದಾರೆ. ಇನ್ನು ಗೌತಮ್ ಅದಾನಿ ಅವರ ಆಸ್ತಿ ಪ್ರಮಾಣದಲ್ಲಿ ಇಳಿಕೆ ಆಗದೆ ಇದ್ದಲ್ಲಿ ಭಾರತವು ಅತ್ಯುತ್ತಮ ಪ್ರದರ್ಶನ ನೀಡುತ್ತಿತ್ತು, ಅವರ ಸಂಪತ್ತು ಸುಮಾರು 129 ಶತಕೋಟಿ ಡಾಲರ್​ನಿಂದ 100 ಶತಕೋಟಿ ಡಾಲರ್​ಗೂ ಸ್ವಲ್ಪ ಕಡಿಮೆಯಾಗಿದೆ. ವಿಶ್ವದ ಅಗ್ರ 500 ಶತಕೋಟ್ಯಧಿಪತಿಗಳ ಪೈಕಿ ಗೌತಮ್ ಅದಾನಿ ಅವರು ಹೆಚ್ಚು ಸಂಪತ್ತನ್ನು ಸೇರಿಸಿದ್ದಾರೆ, ಆ ನಂತರ ಸ್ವಿಟ್ಜರ್ಲೆಂಡ್‌ನ ಗುಯಿಲೌಮ್ ಪೌಸಾಜ್, ಮುಕೇಶ್ ಅಂಬಾನಿ ಇದ್ದಾರೆ.

ಕೆನಡಾದ ಬಿಲಿಯನೇರ್ ಚಾಂಗ್‌ಪೆಂಗ್ ಝಾವೊ 2022 ರಲ್ಲಿ 80 ಶತಕೋಟಿ ಡಾಲರ್​ನಷ್ಟು ದೊಡ್ಡ ಮೊತ್ತವನ್ನು ಕಳೆದುಕೊಂಡಿದ್ದು, ಇದು ಇತರ ದೇಶಗಳ ಒಟ್ಟು ಬಿಲಿಯನೇರ್ ಸಂಪತ್ತಿಗಿಂತ ಹೆಚ್ಚು. ಝಾವೋ ಅವರು ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವಾದ ಬಿನಾನ್ಸ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಯುಎಸ್​ ಷೇರುಗಳಲ್ಲಿನ ಕುಸಿತವು ಮಾರ್ಕ್ ಝುಕರ್‌ಬರ್ಗ್, ಎಲಾನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಈ ಮೂವರಿಂದ 138 ಬಿಲಿಯನ್ ಡಾಲರ್ ನಷ್ಟಕ್ಕೆ ಕಾರಣವಾಯಿತು. ಶತಕೋಟ್ಯಧಿಪತಿಗಳ ಒಟ್ಟು ಸಂಪತ್ತಿನ ವಿಷಯದಲ್ಲಿ ಭಾರತವು ಮೂರನೇ ಸ್ಥಾನಕ್ಕೆ ಬರಲು ಶ್ರೇಯಾಂಕಗಳನ್ನು ಹೆಚ್ಚಿಸಿತು. ಇದು ಫ್ರಾನ್ಸ್ ಅನ್ನು ಆರಾಮದಾಯಕ ಅಂತರದಿಂದ ಹಿಂದಕ್ಕೆ ತಳ್ಳಿತು. ಭಾರತಕ್ಕಿಂತ ಮುಂದಿರುವ ಎರಡು ದೇಶಗಳೆಂದರೆ ಅಮೆರಿಕ ಮತ್ತು ಚೀನಾ. ಸಂಪತ್ತಿನಲ್ಲಿ ಭಾರಿ ಕುಸಿತದ ಹೊರತಾಗಿಯೂ ಮೊದಲ ಮತ್ತು ಎರಡನೇ ಸ್ಥಾನಗಳನ್ನು ಅವು ಕಾಯ್ದುಕೊಂಡಿವೆ.

ಅಮೆರಿಕದ ಮುನ್ನಡೆ ಎಷ್ಟು ದೊಡ್ಡದಾಗಿದೆ ಅಂದರೆ ಅದರ ಬಿಲಿಯನೇರ್‌ಗಳು ಪ್ರತಿ 100 ಶತಕೋಟಿಯಲ್ಲಿ 43 ಶತಕೋಟಿ ಡಾಲರ್​ ಸಂಪತ್ತು ಹೊಂದಿದ್ದಾರೆ. ಇದಕ್ಕೆ ವಿರುದ್ಧವಾಗಿ ಚೀನೀ ಮತ್ತು ಭಾರತೀಯ ಬಿಲಿಯನೇರ್‌ಗಳು ಕ್ರಮವಾಗಿ 12 ಶತಕೋಟಿ ಮತ್ತು 6 ಶತಕೋಟಿ ಡಾಲರ್ ಮಾತ್ರ ಹೊಂದಿದ್ದಾರೆ. ವಿಶ್ವದಲ್ಲೇ ಮೂರನೇ ಅತಿ ಹೆಚ್ಚು ಬಿಲಿಯನೇರ್ ಸಂಪತ್ತನ್ನು ಹೊಂದಿದ್ದರೂ ಭಾರತವು ವಿಶ್ವದ ಐದನೇ ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Forbes Richest People: ಲೇಟೆಸ್ಟ್​ ಲೆಕ್ಕಾಚಾರ -ಮತ್ತೆ ಮುಖೇಶ್ ಅಂಬಾನಿಯೇ ಏಷ್ಯಾದ ನಂಬರ್ ಒನ್ ಶ್ರೀಮಂತ! ಅತ್ತ ಎಲಾನ್ ಮಸ್ಕ್​ ಕತೆಯೇನು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ